Advertisement
ಆರೋಗ್ಯ ಇಲಾಖೆಯು “ಶುಚಿ’ ಯೋಜನೆಯಡಿ ಶಾಲೆಗಳಿಗೆ (ಸರಕಾರಿ ಹಾಗೂ ಅನುದಾನಿತ) ವಿದ್ಯಾರ್ಥಿನಿಯರಿಗೆ ಸ್ಯಾನಿಟರಿ ಪ್ಯಾಡ್ ಪೂರೈಸಲಾಗುತ್ತಿತ್ತು. ಕೊರೊನಾ ಸಂದರ್ಭ ಯೋಜನೆ ಸ್ಥಗಿತಗೊಂ ಡಿದ್ದು, ಈವರೆಗೂ ಆರಂಭಗೊಂಡಿಲ್ಲ. ಇದರಿಂದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿನಿಯರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ.
Related Articles
ಸ್ಯಾನಿಟರಿ ಪ್ಯಾಡ್‌ಗಳ ಪೂರೈಕೆ ಪುನಃ ಆರಂಭಿಸಬೇಕು ಎನ್ನುವ ಆಗ್ರಹವನ್ನು ಶಾಲಾ, ಕಾಲೇಜು (ಪಿಯುಸಿ) ವಿದ್ಯಾರ್ಥಿನಿಯರು ಸರಕಾರದಿಂದ ನಡೆಯುವ ಮಕ್ಕಳ ಸಂಸತ್ ಸಹಿತ ವಿವಿಧ ಕಾರ್ಯಕ್ರಮಗಳಲ್ಲಿ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರದಿಂದ ಈ ಸಂಬಂಧ ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳದೇ ಇರುವುದರಿಂದ ಅಧಿಕಾರಿಗಳು ಉತ್ತರಿಸಲಾಗದ ಸ್ಥಿತಿಯಲ್ಲಿದ್ದಾರೆ. ಸ್ಯಾನಿಟರಿ ಪ್ಯಾಡ್ ವಿದ್ಯಾರ್ಥಿನಿಯರಿಗೆ ಎಷ್ಟು ಆವಶ್ಯಕ ಎಂಬುದು ಸರಕಾರಕ್ಕೂ ತಿಳಿದಿದೆ. ಆದರೆ ಯೋಜನೆ ಅನುಷ್ಠಾನಕ್ಕೆ ಮುಂದಾಗದೇ ಇರುವುದಕ್ಕೆ ಸಾರ್ವ ಜನಿಕ ವಲಯದಲ್ಲೂ ಆಕ್ರೋಶ ಕೇಳಿಬರುತ್ತಿದೆ.
Advertisement
“ಶುಚಿ’ ಯೋಜನೆ ಯಡಿ ಶಾಲೆಗಳಿಗೆ ಪೂರೈಕೆ ಮಾಡುತ್ತಿದ್ದ ಸ್ಯಾನಿಟರಿ ಪ್ಯಾಡ್‌ಗಳನ್ನು ಕೊರೊನಾ ಸಂದರ್ಭದಲ್ಲಿ ಸ್ಥಗಿತ ಮಾಡಲಾಗಿತ್ತು. ಪುನಃ ಆರಂಭಿಸುವ ಬಗ್ಗೆ ಸರಕಾರದಿಂದ ಯಾವುದೇ ಸೂಚನೆ ಬಂದಿಲ್ಲ.-ಡಾ| ನಾಗಭೂಷಣ ಉಡುಪ, ಡಿಎಚ್‌ಒ, ಉಡುಪಿ