Advertisement

ಒಂದು ರೂಪಾಯಿಗೆ ಸ್ಯಾನಿಟರಿ ನ್ಯಾಪ್ಕಿನ್‌!

09:56 AM Aug 28, 2019 | mahesh |

ನವದೆಹಲಿ: ಮಹಿಳೆಯರು ಬಳಸುವ ಸ್ಯಾನಿಟರಿ ನ್ಯಾಪ್‌ಕಿನ್‌ ಇನ್ನು ಮುಂದೆ ಜನ ಔಷಧಿ ಕೇಂದ್ರಗಳಲ್ಲಿ ಕೇವಲ 1 ರೂ.ಗೆ ಸಿಗಲಿದೆ. ಸದ್ಯ ಪ್ರತಿ ನ್ಯಾಪ್‌ಕಿನ್‌ಗೆ 2.50 ರೂ. ನೀಡಬೇಕಾಗಿದ್ದು, ಮಂಗಳವಾರದಿಂದ ಇದು 1 ರೂ.ಗೆ ಇಳಿಕೆಯಾಗಲಿದೆ.

Advertisement

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಖಾತೆ ಸಹಾಯಕ ಸಚಿವ ಮನ್ಸುಕ್‌ ಮಾಂಡವೀಯ ಅವರು ಈ ಮಾಹಿತಿ ನೀಡಿದ್ದಾರೆ. ಜೈವಿಕವಾಗಿ ಮಣ್ಣಿಗೆ ಸೇರಿಕೊಳ್ಳುವ ಸ್ಯಾನಿಟರಿ ನ್ಯಾಪ್‌ಕಿನ್‌ ‘ಸುವಿಧಾ’ ಆ.27ರಿಂದ ರಿಯಾಯಿತಿ ದರದಲ್ಲಿ ಆಯ್ದ ಕೇಂದ್ರಗಳಲ್ಲಿ ಸಿಗಲಿದೆ.

ಈವರೆಗೆ 4 ಪ್ಯಾಡ್‌ಗಳಿದ್ದ ಒಂದು ಪ್ಯಾಕೆಟ್‌ಗೆ 10 ರೂ. ಇತ್ತು. ಮುಂದೆ ಕೇವಲ 4ರೂ.ಗೆ ಒಂದು ಪ್ಯಾಕೆಟ್ ನ್ಯಾಪ್ಕಿನ್‌ ದೊರೆಯಲಿದೆ. ಈ ಕ್ರಮ ಜಾರಿ ಮಾಡುವುದರಿಂದ ಲೋಕಸಭೆ ಚುನಾವಣೆ ಪ್ರಣಾಳಿಕೆ ಯಲ್ಲಿ ಬಿಜೆಪಿ ಮಾಡಿರುವ ವಾಗ್ಧಾನವನ್ನು ಈಡೇರಿಸಿದಂತಾಗಲಿದೆ ಎಂದು ಅವರು ಹೇಳಿದ್ದಾರೆ. ಒಂದು ವರ್ಷದ ಅವಧಿಯಲ್ಲಿ ಜನೌಷಧಿ ಕೇಂದ್ರಗಳಲ್ಲಿ 2.2 ಕೋಟಿ ನ್ಯಾಪ್‌ಕಿನ್‌ಗಳನ್ನು ಮಾರಾಟ ಮಾಡ ಲಾಗಿದೆ. ದರ ಕಡಿಮೆ ಮಾಡಿರುವುದರಿಂದ ಮಾರಾಟ ಹೆಚ್ಚಾಗುವ ನಿರೀಕ್ಷೆ ಇದೆ ಎಂದೂ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next