Advertisement
ಸ್ವತ್ಛ ಭಾರತ ಯೋಜನೆಯಡಿಯಲ್ಲಿ ಒಟ್ಟು 12.56 ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನ ಪ್ರಮುಖ 8 ಶೌಚಾಲಯಗಳಲ್ಲಿ ಪ್ರತ್ಯೇಕ ಸ್ಯಾನಿಟರಿ ನ್ಯಾಪಿRನ್ ಇನ್ಸಿನರೇಟರ್ ಯಂತ್ರಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ. ಈ ಕುರಿತ ವಿಸ್ತೃತ ಯೋಜನ ವರದಿ (ಡಿಪಿಆರ್)ಗೆ ಒಪ್ಪಿಗೆ ಲಭಿಸಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಿದೆ.
Related Articles
ಪಾಲಿಕೆ ವ್ಯಾಪ್ತಿಯಲ್ಲಿ ಸ್ಯಾನಿಟರಿ ತ್ಯಾಜ್ಯವನ್ನು ಪ್ರತಿ ದಿನ ಪ್ರತ್ಯೇಕವಾಗಿ ಸಂಗ್ರಹಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಎಲ್ಲ ತ್ಯಾಜ್ಯಗಳೊಂದಿಗೆ ಸ್ಯಾನಿಟರಿ ತ್ಯಾಜ್ಯಗಳನ್ನು ಸಂಗ್ರಹಿಸಲಾಗುತ್ತಿತ್ತು. ಇದರಿಂದ ಸಂಸ್ಕರಣೆಗೆ ಪ್ರತ್ಯೇಕಿಸಲು ಕಷ್ಟವಾಗುತ್ತಿತ್ತು. ಕೆಲವು ಮನೆ, ಹಾಸ್ಟೆಲ್‌ಗಳಲ್ಲಿ ಸ್ಯಾನಿಟರಿ ತ್ಯಾಜ್ಯಗಳನ್ನು ಶೌಚಾಲಯಕ್ಕೆ ಹಾಕುವುದರಿಂದ ಮ್ಯಾನ್‌ಹೋಲ್ ಬ್ಲಾಕ್ ಆಗಿ ಸಮಸ್ಯೆಗಳು ಎದುರಾಗುತ್ತಿತ್ತು. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಪಾಲಿಕೆ ದಿನನಿತ್ಯ ಪ್ರತ್ಯೇಕ ಚೀಲದ ಮೂಲಕ ಸ್ಯಾನಿಟರಿ ತ್ಯಾಜ್ಯಗಳನ್ನು ಸಂಗ್ರಹಿಸಿ ಸಂಸ್ಕರಣೆಗೆ ನಿರ್ಧರಿಸಲಾಗಿದೆ.
Advertisement
ಏನಿದು ಸ್ಯಾನಿಟರಿ ನ್ಯಾಪ್ಕಿನ್ಸ್ ಇನ್ಸಿನರೇಟರ್?ಸ್ಯಾನಿಟರಿ ಇನ್ಸಿನರೇಟರ್ ಸ್ಯಾನಿಟರಿ ತ್ಯಾಜ್ಯಗಳನ್ನು ಸಂಸ್ಕರಣೆ ಮಾಡುವ ಯಂತ್ರವಾಗಿದ್ದು, ಇದರಲ್ಲಿ 50ರಿಂದ 100 ಕೆಜಿ ಸಾಮರ್ಥ್ಯ ಇರುತ್ತದೆ. ಈ ಯಂತ್ರದ ಮೂಲಕ ಸ್ಯಾನಿಟರಿ ತ್ಯಾಜ್ಯಗಳನ್ನು ಅಲ್ಲೇ ಸಂಸ್ಕರಣೆ ಮಾಡಲಾಗುತ್ತದೆ. ನಗರದ 8 ಜಾಗಗಳಲ್ಲಿ ಮಾತ್ರ ಅಳವಡಿಸಲಾಗುತ್ತಿದ್ದು, ಅದಕ್ಕಾಗಿ ನಿತ್ಯ ನಗರ ಪ್ರದೇಶಗಳಲ್ಲಿ ಸಂಗ್ರಹವಾಗುವ ಸ್ಯಾನಿಟರಿ ತ್ಯಾಜ್ಯಗಳ ಪ್ರಮಾಣವನ್ನು ತಿಳಿಯಲು ನಿತ್ಯ ಕಸ ಸಂಗ್ರಹದಲ್ಲಿ ಸ್ಯಾನಿಟರಿ ತ್ಯಾಜ್ಯಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಸ್ಯಾನಿಟರಿ ತ್ಯಾಜ್ಯ ಪ್ರತ್ಯೇಕಿಸಿ ಕೊಡಿ
ಸ್ವತ್ಛತೆ, ಸಂಸ್ಕರಣೆ ಹಿನ್ನೆಲೆಯಲ್ಲಿ ಪಾಲಿಕೆ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಅಳವಡಿಸಲು ಸಿದ್ಧತೆ ನಡೆಸಿದ್ದು, ಈ ಹಿನ್ನಲೆಯಲ್ಲಿ ಜನರು ಮನೆಯ ಸ್ಯಾನಿಟರಿ ತ್ಯಾಜ್ಯಗಳನ್ನು ಕಸ ಸಂಗ್ರಹಣೆಗೆ ಬರುವ ವಾಹನಗಳಿಗೆ ಪ್ರತ್ಯೇಕವಾಗಿ ನೀಡಬೇಕು. ಪ್ರಸ್ತುತ ಸ್ಯಾನಿಟರಿ ನ್ಯಾಪ್ಕಿನ್ ಇನ್ಸಿನರೇಟರ್ ಅಳವಡಿಕೆಯಾಗದೆ ಇದ್ದರೂ ಯಂತ್ರ ಖರೀದಿಯ ಸಾಮಾರ್ಥ್ಯ ನಿಗದಿಪಡಿಸಲು ಈಗಾಲೇ ಪ್ರತ್ಯೇಕವಾಗಿ ನೀಡಬೇಕಾಗುತ್ತದೆ. ಸ್ಯಾನಿಟರಿ ತ್ಯಾಜ್ಯಕ್ಕೆ ಮುಕ್ತಿ
ಹಸಿ, ಒಣ ಕಸ ಮುಕ್ತಿಗೆ ಪರ್ಯಾಯ ದಾರಿಯನ್ನು ಈಗಾಗಲೇ ಕಂಡುಹಿಡಿಯಲಾಗಿತ್ತು. ಆದರೆ ಸ್ಯಾನಿಟರಿ ತ್ಯಾಜ್ಯಗಳನ್ನು ಡಂಪಿಂಗ್ ಯಾರ್ಡ್‌ಗೆ ಕೊಂಡೊಯ್ದು ಪ್ರತ್ಯೇಕಿಸಿ ಸಂಸ್ಕರಿಸುವುದು ಕಷ್ಟದ ಕೆಲಸವಾಗಿತ್ತು. ಅದಕ್ಕಾಗಿ ಪಾಲಿಕೆ ಈ ನಿರ್ಧಾರ ಕೈಗೊಂಡಿದೆ.
– ಮಧು ಮನೋಹರ್, ಪರಿಸರ ಅಭಿಯಂತರರು – ಪ್ರಜ್ಞಾ ಶೆಟ್ಟಿ