Advertisement
ಮಾಸಿಕ ಋತುಸ್ರಾವದ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಹೆಣ್ಣು ಮಕ್ಕಳು ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸುತ್ತಿರುವುದರಿಂದಾಗಿ ಅವ ರನ್ನು ವಿವಿಧ ಆರೋಗ್ಯ ಮತ್ತು ಮಾನಸಿಕ ಸಮಸ್ಯೆಗಳು ಕಾಡುತ್ತಿವೆ. ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಸುಧಾರಣೆಗಳಾಗಿದ್ದರೂ, ಈ ವಿಷಯದಲ್ಲಿ ಹೆಣ್ಣು ಮಕ್ಕಳು ಕೀಳರಿಮೆಯ ಮನೋಭಾವವನ್ನು ಹೊಂದಿದ್ದಾರೆ. ಇದೇ ವೇಳೆ ಮಕ್ಕಳ ಹೆತ್ತವರು ಮತ್ತು ಹಿರಿಯರು ಕೂಡ ಮುಟ್ಟಿನ ಸ್ರಾವದ ನಿರ್ವಹಣೆಗೆ ಈ ಹಿಂದಿನಂತೆ ಹಳೆಯ ಬಟ್ಟೆ ಬಳಕೆಯಂತಹ ಅವೈಜ್ಞಾನಿಕ ವಿಧಾನಗಳ ಬಳಕೆಗೆ ಹೆಚ್ಚಿನ ಆಸಕ್ತಿ ತೋರುತ್ತಿರುವುದರಿಂದಾಗಿ ಹದಿಹರೆಯದ ಹೆಣ್ಮಕ್ಕಳು ಅನಿವಾರ್ಯವಾಗಿ ಇದೇ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಮತ್ತೂಂದೆಡೆ ಋತುಸ್ರಾವದ ಕುರಿತಂತೆ ಸಮರ್ಪಕ ತಿಳಿವಳಿಕೆ ಇಲ್ಲದಿರುವುದರಿಂದಾಗಿ ಅವರು ಶುಚಿತ್ವವನ್ನು ನಿರ್ಲಕ್ಷಿಸುವುದೂ ಇದೆ. ಇದರಿಂದಾಗಿ ಹೆಣ್ಣುಮಕ್ಕಳನ್ನು ವಿವಿಧ ತೆರನಾದ ಅನಾರೋಗ್ಯ ಕಾಡುವಂತಾಗಿದೆ.
Advertisement
Sanitary Napkins ಶುಚಿ ಯೋಜನೆಗೆ ಮರುಚಾಲನೆ ಗುಣಮಟ್ಟದಲ್ಲಿ ರಾಜಿ ಬೇಡ
11:48 PM Jan 15, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.