Advertisement

ರೋಮ್‌ ಟೆನಿಸ್‌: ಸಾನಿಯಾಗೆ ಸೋಲು

03:48 PM May 21, 2017 | Team Udayavani |

ರೋಮ್‌: ಪ್ರತ್ಯೇಕ ವಿಭಾಗದಲ್ಲಿ ಆಡಿದ ಭಾರತದ ರೋಹನ್‌ ಬೋಪಣ್ಣ ಮತ್ತು ಸಾನಿಯಾ ಮಿರ್ಜಾ ಎಟಿಪಿ ರೋಮ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಸೋಲುಂಡಿದ್ದಾರೆ. ಪುರುಷರ ಡಬಲ್ಸ್‌ ವಿಭಾಗದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಬೋಪಣ್ಣ ಮತ್ತು ಉರುಗ್ವೆಯ ಪ್ಯಾಬ್ಲೊ ಕೆವಾಸ್‌ ಜೋಡಿ 6-7(5), 7-6(2), 10-12 ರಿಂದ ಫ್ರಾನ್ಸ್‌ ಪಿಯರ್‌ ಹ್ಯೂಸ್‌ ಹರ್ಬರ್ಟ್‌ ಮತ್ತು ನಿಕೋಲಸ್‌ ಮಾಹುಟ್‌ ವಿರುದ್ಧ ಸೋಲುಂಡರು.

Advertisement

ಎರಡೂ ಜೋಡಿಗಳ ನಡುವೆ ಭರ್ಜರಿ ಹೋರಾಟ ನಡೆಯಿತು. 1ನೇ ಸೆಟ್‌ ಕಳೆದುಕೊಂಡ ಬೋಪಣ್ಣ ಜೋಡಿ 2ನೇ ಸೆಟ್‌ ವಶಪಡಿಸಿಕೊಂಡಿತು. ಆದರೆ ನಿರ್ಣಾಯಕವಾಗಿದ್ದ 3ನೇ ಸೆಟ್‌ ಅನ್ನು ಫ್ರಾನ್ಸ್‌ ಜೋಡಿ ವಶಪಡಿಸಿಕೊಂಡು ಸೆಮಿಫೈನಲ್‌ ತಲುಪಿತು. ಮಹಿಳೆಯರ ಡಬಲ್ಸ್‌ನಲ್ಲಿ ಸಾನಿಯಾ ಮಿರ್ಜಾ ಮತ್ತು ರಷ್ಯಾದ ಯರೋಸ್ಲಾವ ಶ್ವೆಡೊವಾ ಜೋಡಿ 3-6, 6-7(7) ರಿಂದ ನೇರ ಸೆಟ್‌ನಲ್ಲಿಯೇ ಯಂಗ್‌ ಜಾನ್‌ ಚಾನ್‌ ಮತ್ತು ಮಾರ್ಟಿನಾ ಹಿಂಗಿಸ್‌ ಜೋಡಿಯ ವಿರುದ್ಧ ಸೋತರು.

Advertisement

Udayavani is now on Telegram. Click here to join our channel and stay updated with the latest news.

Next