Advertisement

ಸಾನಿಯಾ ಮಿರ್ಜಾಗೆ ದುಬೈನ ಗೋಲ್ಡನ್‌ ವೀಸಾ

07:38 AM Jul 16, 2021 | Team Udayavani |

ಹೈದರಾಬಾದ್‌: ಭಾರತದ ವಿಶ್ವವಿಖ್ಯಾತ ಟೆನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ ಗೆ ದುಬೈನ ಗೋಲ್ಡನ್‌ ವೀಸಾ ದೊರಕಿದೆ.

Advertisement

ಇದರನ್ವಯ ಅವರಲ್ಲಿ 10 ವರ್ಷ ನೆಲೆಸಬಹುದು. ಇದೊಂದು ರೀತಿಯಲ್ಲಿ ಪೌರತ್ವಕ್ಕೆ ಸಮವೂ ಹೌದು. ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಸಂಜಯ್‌ ದತ್‌ ಬಳಿಕಈಗೌರವ ಪಡೆದಿರುವ ಭಾರತದ ಮೂರನೇ ವ್ಯಕ್ತಿ ಸಾನಿಯಾ.

ಅವರು ಪಾಕಿಸ್ತಾನ ಕ್ರಿಕೆಟ್‌ ತಂಡ ಮಾಜಿ ನಾಯಕ ಶೋಯಿಬ್‌ ಮಲಿಕ್‌ ರನ್ನು ಮದುವೆಯಾಗಿದ್ದಾರೆ. ಇಬ್ಬರಿಗೂ ಇಝಾನ್‌ ಎಂಬ ಹೆಸರಿನ ಎರಡೂವರೆ ವರ್ಷದ ಪುತ್ರನಿದ್ದಾನೆ. ತಮ್ಮ ಪುತ್ರನನ್ನು ದುಬೈನಲ್ಲೇ ಬೆಳೆಸುವುದು ತಮ್ಮ ಉದ್ದೇಶವೆಂದು ಹಿಂದೊಮ್ಮೆ ಸಾನಿಯಾ ಹೇಳಿದ್ದರು. ಹಾಗೆಯೇ ಅಲ್ಲಿ ಪತಿಯೊಂದಿಗೆ ಸೇರಿ ಟೆನಿಸ್‌, ಕ್ರಿಕೆಟ್‌ ಅಕಾಡೆಮಿ ತೆರೆಯುವ ಉದ್ದೇಶವನ್ನೂ ಹೊಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next