Advertisement

ಸಾನಿಯಾ-ಬೋಪಣ್ಣ ಜೋಡಿಯ ಫೈಟ್‌

03:45 AM Jan 25, 2017 | |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಮಿಕ್ಸೆಡ್‌ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತದ ಸಾನಿಯಾ ಮಿರ್ಜಾ, ರೋಹನ್‌ ಬೋಪಣ್ಣ ಜೋಡಿ ಪರಸ್ಪರ ಮುಖಾಮುಖೀಯಾಗಲಿವೆ. ಮಂಗಳವಾರದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ರೋಹನ್‌ ಬೋಪಣ್ಣ-ಗ್ಯಾಬ್ರಿಯಲ್‌ ಡಾಬ್ರೋವ್‌ಸ್ಕಿ (ಕೆನಡಾ) ಸೇರಿಕೊಂಡು 5ನೇ ಶ್ರೇಯಾಂಕದ ಯುಂಗ್‌ ಜಾನ್‌ ಚಾನ್‌ (ಚೀನ)-ಲುಕಾಸ್‌ ಕ್ಯುಬಟ್‌ (ಪೋಲೆಂಡ್‌) ಜೋಡಿಯನ್ನು ಭಾರೀ ಹೋರಾಟದ ಬಳಿಕ 6-4, 5-7, 10-3 ಅಂತರದಿಂದ ಮಣಿಸಿದರು.

Advertisement

ಅನಂತರದ ಪಂದ್ಯದಲ್ಲಿ ದ್ವಿತೀಯ ಶ್ರೇಯಾಂಕದ ಸಾನಿಯಾ ಮಿರ್ಜಾ ಹಾಗೂ ಕ್ರೊವೇಶಿಯಾದ ಇವಾನ್‌ ಡೋಡಿಗ್‌ ಕೂಡ ಪ್ರಬಲ ಸವಾಲು ಎದುರಿಸಬೇಕಾಯಿತು. ಸೈಸೈ ಜೆಂಗ್‌ (ಚೀನ)-ಅಲೆಕ್ಸಾಂಡರ್‌ ಪೆಯ (ಆಸ್ಟ್ರಿಯಾ) ವಿರುದ್ಧ ನಡೆದ ಈ ಪಂದ್ಯದಲ್ಲಿ ಸಾನಿಯಾ-ಡೋಡಿಗ್‌ ಜೋಡಿಯ ಗೆಲುವಿನ ಅಂತರ 2-5, 6-3, 10-6.

ಇವರಲ್ಲೀಗ ಭಾರತದ ಒಂದು ಜೋಡಿಯ ಸೆಮಿಫೈನಲ್‌ ಖಾತ್ರಿಯಾಗಿದೆ. ಇನ್ನೊಂದು ಕಡೆ ಲಿಯಾಂಡರ್‌ ಪೇಸ್‌-ಮಾರ್ಟಿನಾ ಹಿಂಗಿಸ್‌ ಕೂಡ ಜಯ ಸಾಧಿಸಿದರೆ ಆಗ ಸೆಮಿಫೈನಲ್‌ನಲ್ಲೂ ಭಾರತೀಯ ಆಟಗಾರರ ಜೋಡಿಯೇ ಪರಸ್ಪರ ಮುಖಾಮುಖೀ ಆಗುವುದನ್ನು ಕಾಣಬಹುದು. ಪೇಸ್‌-ಹಿಂಗಿಸ್‌ ಸ್ಥಳೀಯ ನೆಚ್ಚಿನ ಜೋಡಿಯಾದ ಸಮಂತಾ ಸ್ಟೋಸರ್‌-ಸ್ಯಾಮ್‌ ಗ್ರೋತ್‌ ವಿರುದ್ಧ ಸೆಣಸಲಿದ್ದಾರೆ. 

ಮಿಶ್ರ ಡಬಲ್ಸ್‌ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಭಾರತೀಯ ಕಾಲಮಾನದಂತೆ ಜ. 26ರ ಬೆಳಗ್ಗೆ 5.30ಕ್ಕೆ ನಡೆಯಲಿವೆ.

Advertisement

Udayavani is now on Telegram. Click here to join our channel and stay updated with the latest news.

Next