Advertisement

ಮಾನ್,ಕೇಜ್ರಿವಾಲ್‌ಗೆ ದೊಡ್ಡ ಹೊಡೆತ: ಸಂಗ್ರೂರ್ ನಲ್ಲಿ ಆಘಾತಕಾರಿ ಸೋಲು

02:39 PM Jun 26, 2022 | Team Udayavani |

ಚಂಡೀಗಢ : ಈ ವರ್ಷದ ಆರಂಭದಲ್ಲಿ ಪಂಜಾಬ್ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಧುರಿಯಿಂದ ಶಾಸಕರಾಗಿ ಆಯ್ಕೆಯಾದ ಮುಖ್ಯಮಂತ್ರಿ ಭಗವಂತ್ ಮಾನ್ ರಾಜೀನಾಮೆ ನೀಡಿದ ನಂತರ ತೆರವಾದ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಭಾರಿ ಮುಖಭಂಗ ಅನುಭವಿಸಿದ್ದು , ಶಿರೋಮಣಿ ಅಕಾಲಿದಳ-ಅಮೃತಸರ (ಎಸ್‌ಎಡಿ-ಎ) ಅಭ್ಯರ್ಥಿ ಸಿಮ್ರಂಜಿತ್ ಸಿಂಗ್ ಮಾನ್ ಗೆದ್ದಿದ್ದಾರೆ.

Advertisement

ಜಿದ್ದಾಜಿದ್ದಿನ ಹೋರಾಟದ ನಂತರ ಆಮ್ ಆದ್ಮಿ ಪಕ್ಷದ (ಎಎಪಿ) ಗುರ್ಮೈಲ್ ಸಿಂಗ್ ಅವರನ್ನು ಸಿಮ್ರಂಜಿತ್ ಸಿಂಗ್ ಸುಮಾರು 6,800 ಮತಗಳಿಂದ ಸೋಲಿಸಿದ್ದಾರೆ. ಬಿಗಿ ಭದ್ರತೆಯ ನಡುವೆ ಭಾನುವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆದು ಮಧ್ಯಾಹ್ನ 2 ಗಂಟೆ ಸುಮಾರಿಗೆ ಅಂತಿಮ ಫಲಿತಾಂಶ ಪ್ರಕಟವಾಯಿತು. ಈ ವರ್ಷ ಉಪಚುನಾವಣೆ ನಡೆದ ಮೂರು ಲೋಕಸಭಾ ಸ್ಥಾನಗಳು ಮತ್ತು ಏಳು ವಿಧಾನಸಭಾ ಕ್ಷೇತ್ರಗಳಲ್ಲಿ ಸಂಗ್ರೂರ್ ಕೂಡ ಸೇರಿದೆ.

ಈ ವರ್ಷದ ಆರಂಭದಲ್ಲಿ ಮುಖ್ಯಮಂತ್ರಿಯಾಗಲು ಭಗವಂತ್ ಮಾನ್ ಅವರು ಸಂಸತ್ತಿನ ಸದಸ್ಯತ್ವವನ್ನು ತ್ಯಜಿಸಿದ ನಂತರ ಈ ಸ್ಥಾನವು ತೆರವಾಗಿತ್ತು. ಈ ವರ್ಷ ಪ್ರಚಂಡ ಜಯಭೇರಿ ಬಾರಿಸಿ ಅಧಿಕಾರಕ್ಕೆ ಬಂದ ಆಡಳಿತಾರೂಢ ಎಎಪಿಗೆ ಇದು ಅಗ್ನಿಪರೀಕ್ಷೆಯಾಗಿತ್ತು.

ಸೋಲು ಎಚ್ಚರಿಕೆಯ ಕರೆ ಗಂಟೆಯಾಗಿದ್ದು, ಮೂರು ತಿಂಗಳ ಅವಧಿಯ ಮನ್ ನೇತೃತ್ವದ ರಾಜ್ಯ ಸರ್ಕಾರವು ದುರ್ಬಲವಾಗಿ ಕಾಣುತ್ತಿದೆ ಎಂದು ವಿಪಕ್ಷಗಳು ಆರೋಪಿಸಿವೆ.

ಆಪ್ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್‌ನ ಮಾಜಿ ಧುರಿ ಶಾಸಕ ದಲ್ವಿರ್ ಸಿಂಗ್ ಗೋಲ್ಡಿ ವಿರುದ್ಧ ಪಕ್ಷದ ಸಂಗ್ರೂರ್ ಜಿಲ್ಲಾ ಉಸ್ತುವಾರಿ ಗುರ್ಮೈಲ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಜೂನ್ 4 ರಂದು ಪಕ್ಷಕ್ಕೆ ಸೇರ್ಪಡೆಗೊಂಡಿದ್ದ ಬರ್ನಾಲಾ ಮಾಜಿ ಶಾಸಕ ಕೇವಲ್ ಧಿಲ್ಲೋನ್ ಅವರನ್ನು ಬಿಜೆಪಿ ಕಣಕ್ಕಿಳಿಸಿತ್ತು.

Advertisement

ಇದನ್ನೂ ಓದಿ : ತ್ರಿಪುರಾ ಉಪಚುನಾವಣೆ; ಸಿಎಂ ಮಾಣಿಕ್ ಸಹಾಗೆ ಗೆಲುವು : ಬಿಜೆಪಿಗೆ 4 ರಲ್ಲಿ 3

ಶಿರೋಮಣಿ ಅಕಾಲಿ ದಳ ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಹತ್ಯೆ ಪ್ರಕರಣದ ಅಪರಾಧಿ ಬಲ್ವಂತ್ ಸಿಂಗ್ ರಾಜೋನಾ ಅವರ ಸಹೋದರಿ ಕಮಲದೀಪ್ ಕೌರ್ ಅವರನ್ನು ಕಣಕ್ಕಿಳಿಸಿತ್ತು.

ಶಿರೋಮಣಿ ಅಕಾಲಿ ದಳ (ಅಮೃತಸರ) ಸಿಮ್ರಂಜಿತ್ ಸಿಂಗ್ ಮಾನ್ ನೇತೃತ್ವದ ರಾಜ್ಯ ರಾಜಕೀಯ ಪಕ್ಷವಾಗಿದೆ. ಇದು ಶಿರೋಮಣಿ ಅಕಾಲಿ ದಳದಿಂದ ಛಿದ್ರಗೊಂಡ ಗುಂಪು. ಶಿರೋಮಣಿ ಅಕಾಲಿ ದಳ (ಅಮೃತಸರ) 1 ಮೇ 1994 ರಂದು ರಚನೆಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next