Advertisement
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಶಿವಾಜಿ ಮಹಾರಾಜರು ಹಾಗೂ ರಾಯಣ್ಣ ಅವರು ಜಾತಿಗೆ ಸೀಮಿತರಲ್ಲ. ಇವರಿಬ್ಬರೂ ನಮ್ಮ ಸಮಾಜದ ಆಸ್ತಿ. ಇಂಥ ವೀರ ಪುರುಷರಿಗೆ ಅವಮಾನ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.ಮರಾಠಿಗರು ಸೌಹಾರ್ದದಿಂದ ಬಾಳಲು ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇಲ್ಲಿನ ಮರಾಠಿಗರು ಹೊರಗಿನವರಲ್ಲ. ಮರಾಠಿ ಭಾಷಿಕ ಕನ್ನಡಿಗರು. ಹೀಗಾಗಿ ಭಾಷೆ, ಜಾತಿಯ ಜಗಳಗಳು ನಮ್ಮ ನಡುವೆ ಇಲ್ಲ. ಸೌಹಾರ್ದದಿಂದ ಬಾಳಲು ಬದ್ಧರಾಗಿದ್ದೇವೆ ಎಂದರು.
ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ ವಿವಾದ ಸುಖಾಂತ್ಯ ಕಂಡಿದ್ದರಿಂದ ಶನಿವಾರ ನಗರಕ್ಕೆ ಆಗಮಿಸಿದ್ದ ಸಚಿವ ಕೆ.ಎಸ್. ಈಶ್ವರಪ್ಪ ಅವರು ಸಚಿವ ರಮೇಶ ಜಾರಕಿಹೊಳಿ ಅವರ ಕೈ ಕುಲುಕಿ, ಬೆನ್ನು ತಟ್ಟಿ ಅಭಿನಂದಿಸಿದರು.
Related Articles
Advertisement
ಸಚಿವತ್ರಯರಿಂದ ಮಾಲಾರ್ಪಣೆಬೆಳಗಾವಿ, ಆ. 29: ರಾಯಣ್ಣ ಹಾಗೂ ಶಿವಾಜಿ ಪ್ರತಿಮೆ ಸಂಘರ್ಷ ಸುಖಾಂತ್ಯ ಕಾಣುತ್ತಿದ್ದಂತೆ, ಸಚಿವ ತ್ರಯರು ಎರಡೂ ಪ್ರತಿಮೆಗಳಿಗೆ ಗೌರವ ಸಲ್ಲಿಸಿದರು. ನಗರಕ್ಕೆ ಭೇಟಿ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಸಚಿವ ಕೆ. ಎಸ್. ಈಶ್ವರಪ್ಪ ಹಾಗೂ ಅಬಕಾರಿ ಸಚಿವ ಎನ್. ನಾಗೇಶ್ ಅವರು ಜಲ ಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಶುಕ್ರವಾರ ಪೀರನವಾಡಿಗೆ ಭೇಟಿ ನೀಡಿ ಉಭಯ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿದರು.