Advertisement

Belgaum: ಸಂಗೊಳ್ಳಿ ರಾಯಣ್ಣ ಪ್ರತಿಮೆ ಲೋಕಾರ್ಪಣೆ

06:20 PM Aug 28, 2023 | Team Udayavani |

ಮೂಡಲಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮತ್ತು ಮತ್ತು ಜಗಜ್ಯೋತಿ ಶ್ರೀ ಬಸವಣ್ಣನವರ ಜೀವನ ಮತ್ತು ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕೆಂದು ಗೋಕಾಕ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕ ಹಾಗೂ ಯುವ ಮುಖಂಡ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

Advertisement

ತಾಲೂಕಿನ ಸುಣಧೋಳಿ ಗ್ರಾಮದ ಸಂಕೇಶ್ವರ-ಸಂಗಮ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆ
ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಈ ರಸ್ತೆಯಲ್ಲಿ ಸಂಚರಿಸುವರಿಗೆ ಇಬ್ಬರು ಮಹಾನ್‌ ವ್ಯಕ್ತಿಗಳ ದರ್ಶನ ಮಾಡಿಸುವಂತಹ ಕಾರ್ಯ ಶ್ಲಾಘನೀಯ ಎಂದರು.

ಕರ್ನಾಟಕ ಪ್ರದೇಶ ಕುರುಬ ಸಂಘದ ಮಾಜಿ ರಾಜ್ಯಾಧ್ಯಕ್ಷ ಡಾ| ರಾಜೇಂದ್ರ ಸಣ್ಣಕ್ಕಿ ಮಾತನಾಡಿ, ಪ್ರತಿಮೆ ಮತ್ತು ಪರಿಸರವನ್ನು ಸ್ವಚ್ಛ-ಸುಂದರವಾಗಿ ಇರಿಸಬೇಕು ಎಂದರು.

ಸುಣಧೋಳಿ ಜಡಿಸಿದ್ದೇಶ್ವರ ಮಠದ ಅಭಿನವ ಶ್ರೀ ಶಿವಾನಂದ ಶ್ರೀಗಳು ಮಾತನಾಡಿ, ಅನುಭಾವದ ಮೂಲಕ ಆಂತರಿಕ ಶಕ್ತಿ ತುಂಬುವ ಬಸವಣ್ಣನ ಮೂರ್ತಿ ಮತ್ತು ಬಾಹ್ಯ ಶಕ್ತಿ ಮತ್ತು ಶೌರ್ಯ ತುಂಬುವ ರಾಯಣ್ಣನ ಮೂರ್ತಿಗಳೆರಡೂ ಸುಣಧೋಳಿ ಗ್ರಾಮದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿವೆ, ಈ ಮಹಾನ ವ್ಯಕ್ತಿಗಳು ಗ್ರಾಮದ ಜನತೆಯ ಬುದುಕಿಗೆ ಪ್ರೇರಕ ಶಕ್ತಿಗಳಾಗಲಿ ಎಂದು ಹಾರೈಸಿದರು.

ಸಾನ್ನಿಧ್ಯ ವಹಿಸಿದ್ದ ಸುಣಧೋಳಿ ಚಿದಾನಂದ ಶ್ರೀಗಳು, ಹುಲಜಯಂತಿಯ ಶ್ರೀ ಮಹಾಳಿಂಗರಾಯ ಮಹಾರಜರು, ಹಡಗಿನಾಳದ ಶ್ರೀ ತಪೋನಿರತ ಮುತ್ತೇಶ್ವರ ಶ್ರೀಗಳು ಆಶೀರ್ವಚನ ನೀಡಿದರು. ಇದಕ್ಕೂ ಮುಂಚೆ ರಾಯಣ್ಣನ ಪ್ರತಿಮೆಯನ್ನು ಸುಣಧೋಳಿ ಗ್ರಾಮದ ಜಡಿಸಿದ್ದೇಶ್ವರ ಮಠದ ಹತ್ತಿರದಿಂದ ಮೆರವಣಿಗೆಯಲ್ಲಿ ತರಲಾಯಿತು.ನಾಡಿನ ವಿವಿಧ ಪೂಜ್ಯರು ಮೂರ್ತಿ ಲೋಕಾರ್ಪಣೆಗೊಳಿಸಿದರು.

Advertisement

ವೇದಿಕೆಯಲ್ಲಿ ಸುಣಧೋಳಿ ಸಂಗೊಳ್ಳಿ ರಾಯಣ್ಣ ಯುವಕ ಸಂಘದ ಅಧ್ಯಕ್ಷ ಸಿದ್ಧಲಿಂಗ ಅಜ್ಜಪ್ಪನ್ನವರ, ಗಣ್ಯರಾದ ಮಡೇಪ್ಪ ತೋಳಿನವರ, ಭೀಮಶಿ ಮಗದುಮ್‌, ಹನಮಂತ ಗುಡ್ಲಮನಿ, ಡಾ.ಮಹಾದೇವ ಜಿಡ್ಡಿಮನಿ, ಡಾ.ಎಸ್‌.ಎಸ್‌ .ಪಾಟೀಲ, ಬಸವರಾಜ ಭೂತ್ತಾಳಿ, ರಾಯಪ್ಪ ಬಾನಸಿ, ಭೀಮಶಿ ಕಾರದಗಿ, ವಿನಾಯಕ ಕಂಠಿಕಾರ, ವಿಜಯ ಜಂಬಗಿ, ಅಡಿವೆಪ್ಪ ಅಳಗೋಡಿ, ಗಿರೀಶ ಹಳ್ಳೂರ, ಶ್ರೀಕಾಂತ ದೇವರಮನಿ, ಭೀಮಶಿ ಉವನ್ನವರ, ಗದಿಗೇಪ್ಪ ಅಮ್ಮಣಿ, ಸಿದ್ಧಾರೂಢ ಪಾಶಿ, ಸದಾಶಿವ ದೇವನಗೋಳ, ಬಸು ಹಟ್ಟಿಹೊಳಿ, ಮಹಾಂತೇಶ ಪಾಟೀಲ, ಶಂಕರ ಕುರಿಬಾಗಿ, ರಾಜು ವಾಲಿ, ಅವೀನಾಶ ಹಿರೇಮಠ, ಮಹಾದೇವ ಹಾರುಗೇರಿ, ಅನೀಲ ಕಣಕಿಕೋಡಿ ಮತ್ತಿತರರು ಉಪಸ್ಥಿತರಿದ್ದರು. ಬಿವಿಎನ್‌ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಾರ್ಥಿಸಿದರು, ಮುತ್ತು ಜಿಡಿಮನ್ನಿ ಸ್ವಾಗತಿಸಿದರು, ಮಹಾಂತೇಶ ಅಂದಾನಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next