Advertisement

ಸಂಗೊಳ್ಳಿ ರಾಯಣ್ಣ ಯುವಕರಿಗೆ ಆದರ್ಶ

03:34 PM Jan 27, 2020 | Suhan S |

ಗಂಗಾವತಿ: ಸ್ವಾತಂತ್ರ್ಯ ಸೇನಾನಿ ಕಿತ್ತೂರು ರಾಣಿ ಚನ್ನಮ್ಮನ ಭಂಟ ಸಂಗೊಳ್ಳಿ ರಾಯಣ್ಣ ದೇಶದ ಯುವಜನರಿಗೆ ಆದರ್ಶ ಎಂದು ಕನಕದಾಸ ಸೌಹಾರ್ದ ಸಹಕಾರಿ ಅಧ್ಯಕ್ಷ ಕೆ. ನಾಗೇಶಪ್ಪ ಹೇಳಿದರು.

Advertisement

ಅವರು ನಗರದ ರಾಯಣ್ಣ ವೃತ್ತದಲ್ಲಿ ಸ್ವಾತಂತ್ರ್ಯ ಸೇನಾನಿ ಸಂಗೊಳ್ಳಿ ರಾಯಣ್ಣನವರ ಬಲಿದಾನ ದಿವಸದಲ್ಲಿ ಪಾಲ್ಗೊಂಡು ನಾಮಫಲಕಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಇಂಗ್ಲಿಷರ ವಿರುದ್ಧ ಗೆರಿಲ್ಲಾ ಮಾದರಿ ಯುದ್ಧ ಸಾರಿ ಕಿತ್ತೂರು ಸಂಸ್ಥಾನದ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿ, ರಾಣಿ ಚನ್ನಮ್ಮ ಅವರಿಗೆ ರಕ್ಷಣಾ ಯೋಧನಾಗಿ, ನಾಡಿಗಾಗಿ ಸರ್ವಸ್ವವನ್ನು ತ್ಯಾಗ ಮಾಡಿ ಹೋರಾಟ ನಡೆಸುವ ಮೂಲಕ ಜನವರಿ 26ರಂದು ದೇಶಕ್ಕಾಗಿ ಗಲ್ಲಿಗೇರುವ ಮೂಲಕ ಹುತಾತ್ಮನಾದ ಮಹಾನಾಯಕ. ಪ್ರತಿ ಯುವಕನು ಸಂಗೊಳ್ಳಿ ರಾಯಣ್ಣನಂತೆ ದೇಶ ಪ್ರೇಮಿಯಾಗಿ ಶೋಷಿತರ, ದಲಿತ, ಬಡವರ ಪರವಾಗಿ ಕಾರ್ಯ ಮಾಡಿ ದೇಶದ ಪ್ರಗತಿಗೆ ಸಾಕ್ಷಿಯಾಗಬೇಕು ಎಂದರು.

ಬಸವರಾಜಸ್ವಾಮಿ ಮಳಿಮಠ, ಸಿಂಗನಾಳ ಪಂಪಾಪತಿ, ಡ್ಯಾಗಿ ರುದ್ರೇಶ, ಶರಣೇಗೌಡ, ಅಡ್ಡಿಶಾಮಣ್ಣ, ನ್ಯಾಯವಾದಿ ಶ್ರೀನಿವಾಸ ಪಾಟೀಲ, ತಿರುಕಪ್ಪ, ಮಲ್ಲಯ್ಯಬಾಗೋಡಿ, ಕೆ. ವೆಂಕಟೇಶ, ಅಳ್ಳಪ್ಪ ಕೊಟಗಿ, ಮುದುಕಪ್ಪ ಮುಸ್ಟೂರು ಗೀತಾವಿಕ್ರಂ, ಕಸ್ತೂರಮ್ಮ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next