Advertisement

ಸುವರ್ಣ ಮಹೋತ್ಸವದ ಆಚರಣೆ ಸಿದ್ಧತೆಯಲ್ಲಿರುವ ಸಂಘ

11:38 PM Feb 17, 2020 | mahesh |

ಮೂಡುಬಿದಿರೆ ಸಮೀಪದ ಹೊಸಬೆಟ್ಟು ವ್ಯಾಪ್ತಿಯ ನಾಲ್ಕು ಗ್ರಾಮಗಳ ನಾಗರಿಕರಿಗೆ ಕೊನ್ನೆಪದವು ಹಾಲು ಉತ್ಪಾದಕರ ಸಂಘವು ಸ್ವಉದ್ಯೋಗ ನೀಡುವುದರ ಜತೆಗೆ ಗ್ರಾಮೀಣಾಭಿವೃದ್ಧಿಗೆ ಸಹಕರಿಸುತ್ತಿದೆ. ಸುವರ್ಣ ಮಹೋತ್ಸವದ ಆಚರಣೆಯ ಸಿದ್ಧತೆಯಲ್ಲಿರುವ ಈ ಸಂಘವು ವ್ಯಾಪ್ತಿಯಲ್ಲಿ ಹಲವು ಸಾಮಾಜಿಕ ಕಾರ್ಯಚಟುವಟಿಕೆಗಳಿಂದ ಗುರುತಿಸಿಕೊಂಡಿದೆ.

Advertisement

ಮೂಡುಬಿದಿರೆ: ಸಮೀಪದ ಹೊಸಬೆಟ್ಟು, ಇರುವೈಲು, ಪುಚ್ಚೆಮೊಗರು ಹಾಗೂ ತೋಡಾರು ಗ್ರಾಮಗಳ ವ್ಯಾಪ್ತಿಯಲ್ಲಿ ಕೊನ್ನೆಪದವು ಹಾಲು ಉತ್ಪಾದಕರ ಸಹಕಾರ ಸಂಘ ಪ್ರಾರಂಭವಾದದ್ದು 1974ರ ಎಪ್ರಿಲ್‌ 30ರಂದು. ಲಾರೆನ್ಸ್‌ ನಝೆತ್‌ ಸ್ಥಾಪಕಾಧ್ಯಕ್ಷರು. 75 ಮಂದಿ ಸದಸ್ಯರಿಂದ ಪ್ರಾರಂಭವಾದ ಈ ಸಂಘದಲ್ಲಿ ಸದ್ಯ 162 ಮಂದಿ ಸದಸ್ಯರಿದ್ದಾರೆ.

18 ವರ್ಷ ಬಾಡಿಗೆ ಕಟ್ಟಡದಲ್ಲಿದ್ದ ಸಂಘಕ್ಕೆ 1992ರಲ್ಲಿ ಕೊನ್ನೆಪದವಿನಲ್ಲಿಯೇ ಸ್ವಂತ ಕಟ್ಟಡ ಭಾಗ್ಯ ಲಭಿಸಿತು. ಪ್ರಾರಂಭದಲ್ಲಿ ಸುಮಾರು 400 ಲೀ. ಹಾಲು ಸಂಗ್ರಹವಾಗುತ್ತಿದ್ದರೆ ಈಗ 1200 ಲೀ. ಹಾಲು ಸಂಗ್ರಹವಾಗುತ್ತಿದೆ. ಮೊದಲು ಕೆನರಾ ಮಿಲ್ಕ್ ಯೂನಿಯನ್‌ಗೆ, ಅನಂತರ ಕೆಎಂಫ್‌ಗೆ ಹಾಲು ನೀಡಲಾಗುತ್ತಿದೆ.

ಅಧ್ಯಕ್ಷರು
ಅಧ್ಯಕ್ಷರು: ಸ್ಥಾಪಕಾಧ್ಯಕ್ಷ ಲಾರೆನ್ಸ್‌ ನಝ್ರೆತ್‌ ಅವರ ಅನಂತರ ವಲೇರಿಯನ್‌ ಕುಟಿನ್ಹಾ, ಸಿಪ್ರಿಯನ್‌ ಸಾಂತ್ಮಯೋರ್‌, ಇ. ಫೆಡ್ರಿಕ್‌ ಪಿಂಟೋ, ಜೆ.ಪಿ. ಕುಲಾಸೋ, ಅಲೆಕ್ಸ್‌ ಲೋಬೋ, ಲಿಯೋ ವಾಲ್ಟರ್‌ ನಝ್ರೆತ್‌, ಮನೋಜ್‌ ಆಲ್ವಾರಿಸ್‌ ಅನಂತರ ಮತ್ತೂಮ್ಮೆ ಲಿಯೋ ವಾಲ್ಟರ್‌ ನಝ್ರೆತ್‌ ಸೇವೆ ಸಲ್ಲಿಸುತ್ತಿದ್ದಾರೆ.

ಕಾರ್ಯದರ್ಶಿ
ಕಾರ್ಯದರ್ಶಿಗಳಾಗಿ ಎ.ಬಿ. ಅಲ್ವಾರಿಸ್‌, ಜಯರಾಮ ರಾವ್‌ ಮತ್ತು ಸಂಘದಲ್ಲಿ ಒಟ್ಟು 32 ವರ್ಷಗಳ ಸೇವಾನುಭವ ಹೊಂದಿರುವ ಶಿವಯ್ಯ ಅವರು 2006ರಿಂದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Advertisement

ಹಾಲು ಒಕ್ಕೂಟದಿಂದ ನಮ್ಮ ಸದಸ್ಯರಿಗೆ ಸಿಗುವ ಪ್ರಯೋಜನಗಳನ್ನು ಸಮರ್ಪಕವಾಗಿ ನೀಡಲು ಪರಿಶ್ರಮಿಸುತ್ತಿದ್ದೇವೆ. ಸದಸ್ಯರು, ನಿರ್ದೇಶಕರು ಹಾಗೂ ಹಾಲು ಒಕ್ಕೂಟದವರ ಉತ್ತಮ ಸಹಕಾರದಿಂದ ಸಂಘ ಮುನ್ನಡೆಯುತ್ತಿದೆ. ಈಗಿನ ಅವಧಿಯಲ್ಲಿ ನಾವು ಸುವರ್ಣ ಮಹೋತ್ಸವವನ್ನು ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಆಚರಿಸುವ ಸಿದ್ಧತೆಯಲ್ಲಿದ್ದೇವೆ. – ಲಿಯೋ ವಾಲ್ಟರ್‌ ನಝ್ರೆತ್‌, ,ಅಧ್ಯಕ್ಷರು, ಅಧ್ಯಕ್ಷರು, ಕೊನ್ನೆಪದವು ಹಾಲು ಉತ್ಪಾದಕರ ಸಹಕಾರ ಸಂಘ

ಮುಂದಿನ ಉದ್ದೇಶಗಳು
ಬಲ್ಕ್ ಮಿಲ್ಕ್ ಕೂಲರ್‌ ವ್ಯವಸ್ಥೆಯನ್ನು 5,000 ಲೀಟರ್‌ಗೆರಿಸುವ ಚಿಂತನೆ ಇದೆ. ಜತೆಗೆ ಮುಂದೆ ಸುವರ್ಣ ಮಹೋತ್ಸವ ಆಚರಣೆಯನ್ನು ಸೂಕ್ತವಾಗಿ ಏರ್ಪಡಿಸುವ ಯೋಚನೆ ಇದೆ.

ಪ್ರಶಸ್ತಿ
2019ರಲ್ಲಿ ಸಂಘವು “ಉತ್ತಮ ಗುಣಮಟ್ಟದ ಹಾಲಿನ ಸಂಘ’ ಎಂಬ ಮಂಗಳೂರು ತಾಲೂಕು ಮಟ್ಟದ ಪ್ರಶಸ್ತಿ ಗಳಿಸಿದೆ. ಕ್ರಮಬದ್ಧವಾಗಿ ಚುನಾವಣೆ ನಡೆಸಲಾಗುತ್ತಿದೆ.
6 ವರ್ಷಗಳಿಂದ ಸದಸ್ಯರಿಗೆ ಶೇ.25 ಡಿವಿಡೆಂಡ್‌, ಜತೆಗೆ ಶೇ. 65 ಬೋನಸ್‌ ನೀಡಲಾಗುತ್ತಿದೆ.

-  ಧನಂಜಯ ಮೂಡುಬಿದಿರೆ

Advertisement

Udayavani is now on Telegram. Click here to join our channel and stay updated with the latest news.

Next