Advertisement
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖೀಲ ಭಾರತ ಸ್ತರ ಜವಾಬ್ದಾರಿಯನ್ನು ಹೊಂದಿರುವ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರು ಖಾಸಗಿ ಕಾರ್ಯಕ್ರಮವೊಂದಕ್ಕೆ ತಮ್ಮ ಮನೆಯವರ ಜತೆ ಬಾಯಾರಿನಿಂದ ವಾಹನವೊಂದರಲ್ಲಿ ಹೊರಟಿದ್ದರು. ಆಗ ಬಾಯಾರು ಸೊಸೈಟಿ ಬಳಿ ಗುಂಪೊಂದು ವಾಹನಗಳನ್ನು ರಸ್ತೆಯಲ್ಲಿ ನಿಲ್ಲಿಸಿತ್ತು. ಜತೆಗೆ ಆ ಸಂದರ್ಭದಲ್ಲಿ ಸಿಡಿಮದ್ದುಗಳನ್ನು ಕೂಡ ರಸ್ತೆ ಬದಿಯಲ್ಲಿ ಸುಡಲಾಗುತ್ತಿತ್ತು. ಸುಡುಮದ್ದು ಮುಗಿಯುವ ತನಕ ತಮ್ಮ ವಾಹನವನ್ನು ನಿಲ್ಲಿಸಿ, ಅನಂತರ ಹೊರಡಲು ಅನುವಾದರು. ಆಗ ಅಲ್ಲಿಗೆ ಬಂದ ಯುವಕರು ತಂಡ ವಾಹನವನ್ನು ತಡೆದುದು ಮಾತ್ರವಲ್ಲದೆ ಎಲ್ಲರನ್ನೂ ಕೆಟ್ಟದಾಗಿ ನಿಂದಿಸಿ ವಾಹನದ ಮೇಲೆ ದಾಳಿ ನಡೆಸಿದ ದುಷ್ಕೃತ್ಯವನ್ನು ಪ್ರತಿಭಟಿಸಿ ಮೆರವಣಿಗೆ ನಡೆಯಿತು.
ಪ್ರತಿಭಟನ ಮೆರವಣಿಗೆಯ ಕೊನೆಯಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಕಾರ್ಯವಾಹ ಲೋಕೇಶ್ ಜೋಡುಕಲ್ಲು ಮಾತನಾಡಿ ಪ್ರಯಾಣಿಸುತ್ತಿದ್ದ ಸಂಘದ ಹಿರಿಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಅವರ ವಾಹನದ ಮೇಲೆ ಯಾವುದೇ ಕಾರಣ ಇಲ್ಲದೆ ನಡೆದ ಹಲ್ಲೆ ಖಂಡನೀಯ.
Related Articles
Advertisement
ಅನಂತರ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಶಬರಿಮಲೆ ಹೋರಾಟದ ಸಂದರ್ಭದಲ್ಲಿ ಅಯ್ಯಪ್ಪ ನಾಮ ಸಂಕೀರ್ತನೆಯನ್ನು ಜಪಿಸುತ್ತಿದ್ದ ಭಕ್ತರನ್ನು ಬಂಧಿ ಸಿದ ಪೊಲೀಸರು, ವಿನಾಕಾರಣ ಕಾರನ್ನು ತಡೆದು ಹಲ್ಲೆಗೆ ಯತ್ನಿಸಿದವರ ಮೇಲೆ ಯಾವ ರೀತಿ ಕ್ರಮ ಕೈಗೊಳ್ಳುತ್ತೀರಿ ಎಂದು ಪೊಲೀಸ್ ಇಲಾಖೆಯನ್ನು ಪ್ರಶ್ನಿಸಿದರು.
ಅನಂತರ ಅವರು ಮಾತನಾಡುತ್ತ ಮದುವೆಯ ನೆಪದಲ್ಲಿ ಸಾರ್ವಜನಿಕ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಿದ್ದು ಮಾತ್ರವಲ್ಲದೆ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿ ಪಡಿಸಿದ ಘಟನೆಯನ್ನು ಖಂಡಿಸಿದರಲ್ಲದೆ ಅಂತಹ ವ್ಯಕ್ತಿಗಳ ಮೇಲೆ ಕಠಿನ ಕ್ರಮಕ್ಕೆ ಆಗ್ರಹಿಸಿದರು. ಈ ಕೃತ್ಯಕ್ಕೆ ಮದುವೆ ಮನೆಯವರು ಒಪ್ಪಿಗೆ ಇಲ್ಲದಿದ್ದಲ್ಲಿ ಅವರೇ ಸ್ವತಃ ಅಪರಾ ಧಿಗಳ ಪತ್ತೆಗೆ ಸಹಕರಿಸಲಿ, ಇಲ್ಲದಿದ್ದರೆ ಅವರೂ ಈ ಘಟನೆಗೆ ಕಾರಣ ಎಂದು ಭಾವಿಸಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಚಾಲಕ ಗೋಪಾಲ ಚೆಟ್ಟಿಯಾರ್ ಹಾಗೂ ವಿ.ಹಿಂ.ಪ, ಭಾಜಪ, ಸಹಕಾರ ಭಾರತಿಯ ಹಲವು ಪ್ರಮುಖರು ಉಪಸ್ಥಿತರಿದ್ದರು.
ಕ್ರಮ ಕೈಗೊಳ್ಳದಿದ್ದರೆ ಹೋರಾಟಯಾವುದೇ ರಾಜಕೀಯ ಪಕ್ಷ ಅಥವಾ ಸಂಘಟನೆಯವರಾಗಿದ್ದರೂ ಹಲ್ಲೆ ಮಾಡಿದವರ ಯಾವುದೇ ಕಾರಣಕ್ಕೆ ಅವರ ಮೇಲೆ ಕ್ರಮ ಕೈಗೊಳ್ಳಲು ಪೊಲೀಸ್ ಮುಂದಾಗ ದಿದ್ದಲ್ಲಿ ಮುಂದಿನ ಕ್ರಮವನ್ನು ನಮ್ಮ ಕಾರ್ಯಕರ್ತರೇ ಕೈಗೆತ್ತಿ ಕೊಳ್ಳಬೇಕಾದೀತು. ಅಂತಹ ಅವಕಾಶ ನೀಡಬೇಡಿ ಎಂದು ಪೊಲೀಸ್ ಇಲಾಖೆಗೆ ಎಚ್ಚರಿಸಲಾಯಿತು.