ಮಹಾನಗರ: ಮಂಗಳೂರು ಸಂಗೀತ ಪರಿಷತ್‌ನ ವಾರ್ಷಿಕ ಮಹಾ ಸಭೆ ಶಾರದಾ ವಿದ್ಯಾಲಯದಲ್ಲಿ ನಡೆಯಿತು.
ಈ ವೇಳೆ ಮುಂದಿನ 3 ವರ್ಷಗಳ ಕಾರ್ಯಕಾರಿ ಸಮಿತಿಗೆ ಸದಸ್ಯರನ್ನು ಆರಿಸಲಾಯಿತು. ನೂತನ ಅಧ್ಯಕ್ಷರಾಗಿ ಎಂ.ವಿ.ಪ್ರದೀಪ್ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಎಚ್. ಸುಬ್ರಹ್ಮಣ್ಯ ರಾವ್, ಕಾರ್ಯದರ್ಶಿಯಾಗಿ ಬೇಲೂರು ಶ್ರೀಧರ್, ಜತೆ ಕಾರ್ಯದರ್ಶಿಯಾಗಿ ಮೋಹನ್ ದಾಸ್, ಖಜಾಂಚಿಯಾಗಿ ಸುಬ್ರಹ್ಮಣ್ಯ ಉಡುಪ, ಸದಸ್ಯರಾಗಿ ರಂಗನಾಥ್, ವಿಶಾಲಾಕ್ಷಿ, ಅಶ್ವಿನಿ, ಹರೀಶ್ ಕೋಟೆಕಾರ್, ವಿ. ಕೃಷ್ಣ ಮೂರ್ತಿ, ಪ್ರಕಾಶ್ ರಾವ್, ಪ್ರಭಾ ಚಂದ್ರ ಮಯ್ಯ, ರಮೇಶ್ ರಾವ್, ತಿಲಕನ್ ಅವರು ಸರ್ವಾನುಮತದಿಂದ ಆಯ್ಕೆಗೊಂಡರು.
ಕಾರ್ಯದರ್ಶಿ ಎಚ್. ಸುಬ್ರಹ್ಮಣ್ಯ ರಾವ್ ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಬೇಲೂರು ಶ್ರೀಧರ್ ಲೆಕ್ಕಪತ್ರ ಮಂಡಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಂ.ಆರ್. ವಾಸುದೇವ ಮಾತನಾಡಿ, ಸಂಗೀತ ಪರಿಷತ್ ಸಂಸ್ಥೆಯು ಡಾ| ಸಿ.ಆರ್ ಬಲ್ಲಾಳ್ ಅವರ ಸಮರ್ಥ ನೇತೃತ್ವದಲ್ಲಿ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಖ್ಯಾತಿ ಪಡೆದಿದೆ ಎಂದರು.
ಗೌರವಾಧ್ಯಕ್ಷ ಡಾ| ಸಿ.ಆರ್ ಬಲ್ಲಾಳ್ ಮಾತನಾಡಿ, ಕಾರ್ಯಕರ್ತರ ನಿಸ್ವಾರ್ಥ ಸೇವೆಯಿಂದ ಸಂಗೀತ ಪರಿಷತ್ ಈ ಮಟ್ಟದಲ್ಲಿ ಬೆಳೆದಿದೆ ಎಂದು ಹೇಳಿದರು.
ಅಧ್ಯಕ್ಷ ಎಂ.ಆರ್ ವಾಸುದೇವ ಸ್ವಾಗತಿಸಿ, ನಿಕಟ ಪೂರ್ವ ಕಾರ್ಯದರ್ಶಿ ಎಚ್. ಸುಬ್ರಹ್ಮಣ್ಯ ರಾವ್ ವಂದಿಸಿದರು.