Advertisement

Bigg Boss ಫಿನಾಲೆ ರೇಸ್ ನಿಂದ ಹೊರಬಿದ್ದ ಪ್ರಬಲ ಸ್ಪರ್ಧಿ ಸಂಗೀತಾ

11:42 PM Jan 28, 2024 | Team Udayavani |

ಬೆಂಗಳೂರು: ಬಿಗ್ ಬಾಸ್ ಸೀಸನ್ 10 ಫಿನಾಲೆಗೆ ಬಂದಿರುವ ಟಾಪ್ ಸ್ಪರ್ಧೆಗಳಲ್ಲಿ ಅಚ್ಚರಿ ಎಂಬಂತೆ ಗೆಲ್ಲುವ ಪ್ರಬಲ ಸ್ಪರ್ಧಿಯೊಬ್ಬರು ಹೊರಗೆ ಬಂದಿದ್ದಾರೆ.

Advertisement

ಟಾಪ್ 3 ಯಲ್ಲಿ ಸಂಗೀತ, ಕಾರ್ತಿಕ್ ಹಾಗೂ ಪ್ರತಾಪ್ ಇದ್ದರು. ಈ ಮೂವರ ಪೈಕಿ ವೇದಿಕೆಯಲ್ಲಿ ಒಬ್ಬರು ಎಲಿಮಿನೇಟ್ ಆಗುವ ಮೂಲಕ ಮೂರನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

ಸಂಗೀತಾ ಶೃಂಗೇರಿ ಅವರು ಫಿನಾಲೆ ರೇಸ್ ನಿಂದ ಹೊರಹೊಮ್ಮಿದ್ದಾರೆ. ಆ ಮೂಲಕ ಪ್ರಬಲ ಸ್ಪರ್ಧಿ ಫಿನಾಲೆ ಓಟದಲ್ಲಿ ಹಿಂದೆ ಬಿದ್ದಿದ್ದಾರೆ.

ದೊಡ್ಮನೆಯಲ್ಲಿ ಸಂಗೀತಾ ಗೆಲ್ಲುವ ಪ್ರಬಲ ಸ್ಪರ್ಧಿ ಆಗಿದ್ದರು. ಈ ಬಾರಿ ಅವರು ಗದ್ದೇ ಗೆಲ್ಲುತ್ತಾರೆ ಎನ್ನಲಾಗಿತ್ತು. ಈ ಬಾರಿ ಒಬ್ಬ ಮಹಿಳಾ ಸ್ಪರ್ಧಿ ಗೆಲ್ಲಬೇಕೆನ್ನುವ ನಿಟ್ಟಿನಲ್ಲಿ ಅನೇಕರು ಬಯಸಿ ಮತ ಹಾಕಿದ್ದರು. ಆದರೆ ದುರಾದೃಷ್ಟವಶಾತ್ ಫಿನಾಲೆಯ ಅಂತಿಮ ಹಂತದಲ್ಲಿ ಸಂಗೀತಾ ಅವರು ಮನೆಯಿಂದ ಹೊರ ಬಂದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೇ ತನ್ನ ವ್ಯಕ್ತಿತ್ವದಿಂದ ಗಮನ ಸೆಳೆದ ಅವರು, ಪ್ರತಿನಿತ್ಯ ಮನೆಯ ಸದಸ್ಯರ ಜೊತೆ ಹಾಗೂ ಮನೆಯ ಕೆಲವೊಂದು ವಿಚಾರಗಳಿಂದ ಸುದ್ದಿ ಆಗುತ್ತಿದ್ದರು.

Advertisement

ಯಾವ ಸನ್ನಿವೇಶದಲ್ಲೂ ತನ್ನತನವನ್ನು ಬಿಟ್ಟುಕೊಡದ ಸಂಗೀತಾ ಅವರು ದೊಡ್ಮನೆಯಲ್ಲಿ ಎಲ್ಲಾ ರೀತಿಯಲ್ಲೂ ಸವಾಲು   ಸಂಕಷ್ಟಗಳನ್ನು ಎದುರಿಸಿ ಬಂದಿದ್ದರು.

ಕಿಚ್ಚನ ಚಪ್ಪಾಳೆ, ಕ್ಯಾಪ್ಟನ್ಸಿ ಹೀಗೆ ಎಲ್ಲದರಲ್ಲೂ ಸಂಗೀತಾ ಅವರು ವೀಕ್ಷಕರ ‌ಮನದ ಗೆದ್ದಿದ್ದರು.

ಎರಡನೇ ರನ್ನರ್ ಅಪ್ ಆಗಿ ಹೊರಬಂದ ಅವರಿಗೆ ಅವರಿಗೆ 7 ಲಕ್ಷದ ನಗದು ಬಹುಮಾನವನ್ನು ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next