Advertisement

ಎರಡು ಕಾಲೋನಿ ದತ್ತು ಪಡೆದ ಸಂಗಮೇಶ 

04:39 PM May 03, 2018 | Team Udayavani |

ಜಮಖಂಡಿ: ಜಮಖಂಡಿ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸಂಗಮೇಶ ನಿರಾಣಿ ವಿಭಿನ್ನ ಮಾದರಿಯಲ್ಲಿ ಮತ ಯಾಚನೆ ಮಾಡಿದ ಪ್ರಸಂಗ ಬುಧವಾರ ನಡೆದಿದೆ. ನಿರಾಣಿ ಅವರು ಸಮಸ್ಯೆ ಕೇಳಲು ಜನರ ಬಳಿ ಹೋಗಿ, ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವುದು ಕಂಡು ಬಂದಿದೆ ಎಂದು ನಗರಸಭೆ ಸದಸ್ಯೆ ಮಾಲಾಬಾಯಿ ಆಲಬಾಳ ಹೇಳಿದರು.

Advertisement

ಇಲ್ಲಿನ ಜಯನಗರ ಬಡಾವಣೆಯಲ್ಲಿ ಸಂಗಮೇಶ ನಿರಾಣಿ ಹಮ್ಮಿಕೊಂಡ ಬಡವರ ಮನೆ ವಾಸ್ತವ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಜನರನ್ನೇ ಹೈಕಮಾಂಡ್‌ ಮಾಡಿ, ಸಮೃದ್ಧ ಜಮಖಂಡಿಯ ಕನಸು ಹೊತ್ತು, ಸಮಸ್ಯೆಗಳ ಸರ್ವೇ, ಪರಿಹಾರದ ಯೋಜನೆ ಸಿದ್ಧಪಡಿಸಿಕೊಂಡೆ ಚುನಾವಣೆಗಿಳಿದಿರುವ ನಿರಾಣಿ ತಮ್ಮ ಕ್ಷೇತ್ರಾಭಿವೃದ್ಧಿ ಪ್ರಣಾಳಿಕೆ, ಮನೆ ಮನೆ ಪಾದಯಾತ್ರೆ ನಡೆಸಿದ್ದು, ಈಗ ಹಲವು ಕಾಲೋನಿಗಳ ಸಮಸ್ಯೆಗಳನ್ನು ಮನಗಾಣಲು ಬಡವರ ಮನೆ ವಾಸ್ತವ್ಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ ಎಂದರು.

ಮಂಗಳವಾರ ರಾತ್ರಿ ನಗರದ ಜಯನಗರ-ಮಹಾಲಿಂಗೆಶ್ವರ ಬಡಾವಣೆಯ ಮುನೇರಾ ಮೀರಾಸಾಬ ಮಕಾಂದಾರ (ಖಾಜಿಬಾಯಿ) ಅವರ ಮನೆಯಲ್ಲಿ ವಾಸ್ತವ್ಯ ಮಾಡಿ, ಮಂಜುನಾಥ ಹೊಸಮನಿ ಅವರ ಮನೆಯಲ್ಲಿ ಬೆಳಗಿನ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ನಿವೃತ್ತಿನಾಥ ವಾಸ್ಟರ್‌, ಶಿವು ಗಸ್ತಿ, ಶ್ರೀಕಾಂತ ಕಾಳೆ, ಶ್ರೀನಾಥ ನವಣಿ, ಯಮನಪ್ಪ ಗುಣದಾಳ, ಮುತ್ತಪ್ಪ ಪೂಜಾರಿ, ಮಂಜುನಾಥ ಹೊಸಮನಿ, ಲಾಲಸಾಬ ಮುಜಾವರ, ವಿಟ್ಠಲರಾವ್‌ ಶಾಸ್ತ್ರಿ, ಪುಂಡಲೀಕ ವಾಸ್ಟರ್‌, ಹನಮಂತ ಗಸ್ತಿ, ರಾಮಣ್ಣ ಚಿಗರಿ, ಶಿವಪ್ಪ ಪರೀಟ, ದಶರಥ ಕಟ್ಟಿಮನಿ, ಅಪ್ಪಣ್ಣ ಬೈಲಪತ್ತಾರ ಇದ್ದರು.

ಎರಡು ಕಾಲೋನಿಗಳ ದತ್ತು: ಸಮಸ್ಯೆಗಳ ಆಗರವಾದ ಜಯನಗರ ಮತ್ತು ಮಹಾಲಿಂಗೇಶ್ವರ ಕಾಲೋನಿಗಳನ್ನು ಅಭಿವೃದ್ಧಿಗಾಗಿ ದತ್ತು ಪಡೆಯುವುದಾಗಿ ಸಂಗಮೇಶ ಘೋಷಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next