Advertisement

ಮತ್ತೊಂದು ಅವಧಿಗೆ ಸಂಗಕ್ಕರ ಎಂಸಿಸಿ ಅಧ್ಯಕ್ಷ?

10:40 PM May 06, 2020 | Sriram |

ಲಂಡನ್‌: ಮೆರಿಲ್‌ಬಾನ್‌ ಕ್ರಿಕೆಟ್‌ ಕ್ಲಬ್‌ ಅಧ್ಯಕ್ಷರಾಗಿ ಕುಮಾರ ಸಂಗಕ್ಕರ ಮತ್ತೂಂದು ಅವಧಿಗೆ ಮುಂದುವರಿಯುವುದು ಖಚಿತಗೊಂಡಿದೆ. ಬುಧವಾರ ಎಂಸಿಸಿ ಸಂಗಕ್ಕರ ಅವರನ್ನು ಕೇಳಿಕೊಂಡಿದ್ದು, ಜೂ. 24ರಂದು ನಡೆಯುವ ವಾರ್ಷಿಕ ಮಹಾಸಭೆಯಲ್ಲಿ ಇದು ಅಂತಿಮಗೊಳ್ಳಲಿದೆ. ನಿಯಮ ಗಳ ಪ್ರಕಾರ ಎಂಸಿಸಿ ಅಧ್ಯಕ್ಷರ ಕಾರ್ಯಾವಧಿ ಒಂದು ವರ್ಷ ಮಾತ್ರ. ಮೊದಲೆರಡು ವಿಶ್ವಯುದ್ಧಗಳ ವೇಳೆ ಲಾರ್ಡ್‌ ಹಾಕ್‌ (1914-18) ಮತ್ತು ಸ್ಟಾನ್ಲಿ ಕ್ರಿಸ್ಟೋಫ‌ರ್ಸನ್‌ (1939-45) ಮಾತ್ರ ಸುದೀರ್ಘ‌ ಕಾಲ ಈ ಹುದ್ದೆಯಲ್ಲಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next