Advertisement

ಮಠದಿಂದ ಪುಸ್ತಕ ಪ್ರಕಟಣೆ ಶ್ಲಾಘನೀಯ

06:11 PM Dec 18, 2019 | Naveen |

ಸಂಡೂರು: ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಾಂಗ ಮಾಡಿ ಪುಸ್ತಕ ಪ್ರಕಟಣೆ ಮಾಡಲಾರದಂಥ ಕಾರ್ಯವನ್ನು ಸಂಡೂರು ವಿರಕ್ತಮಠ ಮಾಡುತ್ತಿರುವುದು ಹೆಮ್ಮಯ ಸಂಗತಿಯಾಗಿದೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್‌ ಸದಸ್ಯ ಹಾಗೂ ಶಿಶುನಾಳ ಶರೀಫರ ಪಾರಮಾರ್ಥಿಕ ಚಿಂತನೆಯ ಕೃತಿಕಾರ ನಿಷ್ಠಿರುದ್ರಪ್ಪ ತಿಳಿಸಿದರು.

Advertisement

ಅವರು ಶ್ರೀ ಪ್ರಭುದೇವರ ಸಂಸ್ಥಾನ ವಿರಕ್ತಮಠದಲ್ಲಿ ಪ್ರಭುದೇವರ ಜನಕಲ್ಯಾಣ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಘಟಕ ಸಂಡೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ 2 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ, ಸಿಂಡಿಕೇಟ್‌ ಸದಸ್ಯನಾಗಿ ವಿಶ್ವವಿದ್ಯಾಲಯದಲ್ಲಿ ಪ್ರಸಾರ ರಂಗ ಪ್ರಾರಂಭಮಾಡಿ ಎಂದು ಎಷ್ಟೋ ಬಾರಿ ತಿಳಿಸಿದರೂ ಸಹ ಆ ಕಾರ್ಯ ನಡೆಯಲಿಲ್ಲ. ಅದರೆ ಕಳೆದ 15 ವರ್ಷಗಳಿಂದ 60ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸುವಂಥ ಕಾರ್ಯವನ್ನು ಮಠ ಮಾಡುತ್ತಾ ಬಂದಿರುವುದು ಹೆಮ್ಮೆಯ ಸಂಗತಿಯಾಗಿದೆ.

ಇಂಥ ಕಾರ್ಯ ಮಾಡುವ ಮೂಲಕ ಮಠ ಬರೀ ಧಾರ್ಮಿಕ ಕೇಂದ್ರವಲ್ಲ. ಅದು ಕನ್ನಡ ಸಾಹಿತ್ಯವನ್ನು ಬೆಳೆಸಿ ಉಳಿಸುವಂತಹ ಮಹತ್ತರ ಕಾರ್ಯವನ್ನು ಮಾಡುತ್ತಿದೆ. ಇಂದು ಲೋಕಾರ್ಪಣೆಗೊಳ್ಳುತ್ತಿರುವ ಡಾ| ವೀರೇಶ್‌ ಹಂಡಿಗಿಯವರು ಬರೆದ ಶ್ರೀಚನ್ನಮಲ್ಲಿಕಾರ್ಜುನರ ಬದುಕು ಬರ ಮತ್ತು ಶಿಶುನಾಳ ಶರೀಫರ ಪಾರಮಾರ್ಥಿಕ ಚಿಂತನೆ ಕೃತಿಗಳು ಬಹು ಉತ್ತಮವಾಗಿದ್ದು ಇವುಗಳ ದಾನಿಗಳಾದ ಸಿದ್ದಲಿಂಗಶಾಸ್ತ್ರಿಗಳ ಸ್ಮಾರಕ ಟ್ರಸ್ಟ್‌ ಮತ್ತು ವೆಸ್ಕೋ ಕಂಪನಿಯ ಕೆ.ಎಸ್‌. ರತ್ನಮ್ಮ ಇವರ ಸೇವೆ ಸಾಹಿತಿಗಳನ್ನು ಬೆಳೆಸವಂತಹದ್ದಾಗಿದೆ. ಇಂತಹ ಕಾರ್ಯಗಳು ಹೆಚ್ಚು ಹೆಚ್ಚು ನಡೆದಾಗ ಸಮಾಜದ ಅಭಿವೃದ್ಧಿ ಜೊತೆಗೆ ಸಾಹಿತ್ಯ ರಚನೆಯಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಡಾ| ವೀರೇಶ್‌ ಹಂಡಿಗಿ ಮಾತನಾಡಿ, ಮಠಗಳು ಪುಸ್ತಕ ಸಂಸ್ಕೃತಿಯನ್ನು ಬೆಳೆಸುತ್ತಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಕೊಟ್ಟ ಬಹುದೊಡ್ಡ ಕೊಡುಗೆಯಾಗಿದೆ. ಮಠಗಳು ಬರೀ ಧಾರ್ಮಿಕ ಕೇಂದ್ರಗಳಾಗಿ ಉಳಿಯದೇ ಸಮಾಜದ ಸುಧಾರಣಾ ಸಂಸ್ಥೆಗಳು, ಕನ್ನಡ ಸಾಹಿತ್ಯ ಬೆಳೆಸುವಂಥ ಕೇಂದ್ರಗಳು ಅಗುತ್ತಿರುವುದು ನಾಡಿಗೆ ಹೆಮ್ಮೆ ತರುವಂಥ ವಿಷಯ ಎಂದರು. ಅಲ್ಲದೆ ಚನ್ನಮಲ್ಲಿಕಾರ್ಜುನ ಅವರು ಒಬ್ಬ ಸಾಮಾನ್ಯ ಶಿಕ್ಷಕರಾಗಿ ತಮ್ಮ ಇಡೀ ಬದುಕನ್ನು ನಾಡಿಗಾಗಿ ಹೇಗೆ ಅರ್ಪಿಸಿದರು ಎಂಬುದನ್ನು ಈ ಕೃತಿಯಲ್ಲಿ ಚಿತ್ರಿಸಲಾಗಿದೆ. ಆದ್ದರಿಂದ ಅಂಥ ವ್ಯಕ್ತಿಗಳ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಯಶವಂತನಗರ ಶ್ರೀ ಗಂಗಾಧರದೇವರು, ಅಧ್ಯಕ್ಷತೆ ವಹಿಸಿದ್ದ ಬಿ. ನಾಗನಗೌಡ ಮಾತನಾಡಿದರು. ಪ್ರಾಸ್ತಾವಿಕವಾಗಿ ಡಾ| ರವೀಂದ್ರನಾಥ ಮಾತನಾತನಾಡಿದರು.

Advertisement

ವೇದಿಕೆಯಲ್ಲಿ ಗಣ್ಯರಾದ ಬಸವ ಸೇವಾ ಪ್ರಶಸ್ತಿ ಪಡೆದ ಅಂಕಮನಾಳ ಶಾಂತಮ್ಮ, ನಿಷ್ಠಿರುದ್ರಪ್ಪ, ಗುಡೇಕೋಟೆನಾಗರಾಜ, ಡಾ| ವೀರೇಶ್‌ ಹಂಡಿಗಿ ಇತರರು ಇದ್ದರು. ಸಮಾರಂಭದಲ್ಲಿ ಹಲವಾರು ಗಣ್ಯಮಾನ್ಯರು ಉಪಸ್ಥಿತರಿದ್ದರು. ಡಾ| ಎನ್‌.ಎನ್‌. ಸಿದ್ದೇಶ್ವರಿ, ಡಾ| ತಿಪ್ಪೇರುದ್ರ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next