Advertisement

ಸ್ಮಾರ್ಟ್ ಯಾರ್ಡ್‌ ಪ್ರದೇಶಗಳಿಗೆ ಕನ್ವೇಯರ್‌ ಬೇಡ

04:51 PM Oct 20, 2019 | Team Udayavani |

ಸಂಡೂರು: ನೂತನವಾಗಿ ಗಣಿ ಪ್ರದೇಶದಿಂದ ಸ್ಟಾಕ್‌ಯಾರ್ಡ್‌ವರೆಗೆ ಹಾಕುವ ಕನ್ವೇಯರ್‌ ಪದ್ಧತಿ ನಿಲ್ಲಿಸಬೇಕೆಂದು ಸಂಡೂರು ಲಾರಿಮಾಲೀಕರ ಸಂಘದ ಅಧ್ಯಕ್ಷ ಜೆ. ಬಾಬುನಾಯ್ಕ ಮನವಿ ಮಾಡಿಕೊಂಡರು.

Advertisement

ಕನ್ವೇಯರ್‌ ಬೆಲ್ಟ್ ಪರಿಶೀಲನೆ ಆಗಮಿಸಿದ ಡೈರೆಕ್ಟರ್‌ ಜನರಲ್‌ ಆಫ್‌ ಫಾರೆಸ್ಟ್‌ ಸಿದ್ದಾಂತ ದಾಸ್‌ ಅವರಿಗೆ ಮನವಿ ಸಲ್ಲಿಸಿ ಮಾತನಾಡಿ, ತಾಲೂಕಿನಲ್ಲಿರುವ ಪ್ರಮುಖ ಗಣಿ ಕಂಪನಿಗಳಾದ ಎಸ್‌ ಕೆಎಂಇ., ಬಿಕೆಜಿ, ವೆಸ್ಕೋ, ದೇವದಾರಿ, ಹರಿಶಂಕರ್‌, ಆರ್‌.ಆರ್‌. ಪೋಳ್‌, ಎಲ್‌ ಎಂಸಿ, ತುಂಗಾಭದ್ರಾ ಗಣಿ ಪ್ರದೇಶದಿಂದ ನೇರವಾಗಿ ನಂದಿಹಳ್ಳಿ ಸ್ಟಾಕ್‌ ಯಾರ್ಡ್‌ ಪ್ರದೇಶಕ್ಕೆ ಈಗ ಲಾರಿಗಳಿಂದ ಅದಿರು ಸಾಗಾಟವಾಗುತ್ತಿದೆ. ಇದರಿಂದ ಲಕ್ಷಾಂತರ ಜನರು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.

ಅಲ್ಲದೆ ತಮ್ಮ ಜಮೀನುಗಳನ್ನು ಸಹ ಗಣಿಗಾರಿಕೆಯ ಸ್ಟಾಕ್‌ ಯಾರ್ಡ್‌ ಪ್ರದೇಶಕ್ಕೆ ಮಾರಾಟ ಮಾಡಿ ಕೃಷಿ ಭೂಮಿಯೂ ಇಲ್ಲವಾಗಿದೆ. ಇತ್ತ ಲಾರಿಗಳ ಸಾಗಾಟವೂ ಇಲ್ಲವಾದರೆ ಅವರು ಬೀದಿಗೆ ಬೀಳುತ್ತಾರೆ. ಆದ್ದರಿಂದ ಈ ಗಣಿ ಪ್ರದೇಶಗಳಿಂದ ಸ್ಟಾಕ್‌ ಯಾರ್ಡ್‌ ಪ್ರದೇಶಗಳಿಗೆ ಕನ್ವೇಯರ್‌ ಹಾಕಬಾರದು. ಕೇವಲ ಗಣಿ ಪ್ರದೇಶದಿಂದ ಸ್ಟಾಕ್‌ಯಾರ್ಡಗೆ ಮಾತ್ರ ಸಾಗಿಸಲಾಗುತ್ತಿದೆ. ನೇರವಾಗಿ ಪಟ್ಟಣದಲ್ಲಿ, ಹಳ್ಳಿಗಳಲ್ಲಿ ಪ್ರವೇಶವಿಲ್ಲದೆ ಬೈಪಾಸ್‌ ಮೂಲಕ ಸಾಗಿಸುತ್ತಿದ್ದು ಲಾರಿಗಳ ಧೂಳು ಹರಡದಂತೆ ತಾಡಪಾಲ್‌ ಬಳಸಿಕೊಳ್ಳಲಾಗುತ್ತಿದೆ. ಸುರಕ್ಷತೆ ಸಹ ಮಾಡಲಾಗಿದೆ. ಲಾರಿಗಳಿಗೆ ಜಿಪಿಎಸ್‌
ಅಳವಡಿಸಲಾಗಿದೆ. ಆದ್ದರಿಂದ ದಯಮಾಡಿ ಕನ್ವೇಯರ್‌ ಹಾಕುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಲಾರಿ ಮಾಲೀಕರ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ, ಜೆ. ಬಾಬುನಾಯ್ಕ, ಕಾರ್ಯನಿರ್ವಾಹಕ ಬದ್ರುದ್ದೀನ್‌, ಉಪಾಧ್ಯಕ್ಷರಾದ ಎಂ. ಮಹಮ್ಮದ್‌ ಮುಕ್ತಿಯಾರ್‌, ವೈ. ಈರಣ್ಣ ಉಪ್ಪಾರ್‌, ಜೈನುದ್ದೀನ್‌, ಎರ್ರಿಸ್ವಾಮಿ, ಎಸ್‌. ರಮೇಶ್‌, ಕೆ.ಕೆ. ದಾದಾಖಲಂದರ್‌, ಪಿ.ನಾಗರಾಜ ಮತ್ತಿತರರು ಮನವಿ ಮಾಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಸಿಇಸಿ ವರದಿ ಮತ್ತು ಇತರ ವರದಿಗಳಂತೆ ಕಾರ್ಯನಿರ್ವಹಿಸಲಾಗುವುದು. ಈ ಬಗ್ಗೆ ಗಮನಹರಿಸುವ ಬಗ್ಗೆಯೂ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next