Advertisement
ಅವರು ಸಂಡೂರು ತಾಲೂಕಿನ ಯಶವಂತನಗರ ಗ್ರಾಮದ ಶ್ರೀಗುರು ಸಿದ್ದರಾಮೇಶ್ವರ ಸಂಸ್ಥಾನ ವಿರಕ್ತಮಠದಲ್ಲಿ ಏರ್ಪಡಿಸಿದ್ದ 42ನೇ ತ್ತೈಮಾಸಿಕ ಶಿವಾನುಭವಗೋಷ್ಠಿಯಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಕನ್ನಡನಾಡು ಹರಿದು ಹಂಚಿಹೋಗಿತ್ತು, ಕವಿಗಳು, ಸಾಹಿತಿಗಳು, ನಾಡಪ್ರೇಮಿಗಳು ಶ್ರಮಿಸಿದ ಪರಿಣಾಮ ಕರ್ನಾಟಕವಾಯಿತು. ಇಂದು ಇಂಗ್ಲೀಷ್ ವ್ಯಾಮೋಹದಲ್ಲಿ ಇದ್ದು ಕನ್ನಡ ಶಾಲೆಗಳು ಮುಚ್ಚುವಂತಹ ದುಸ್ಥಿತಿಗೆ ಬಂದಿದೆ. ಇಂದು ನಾವೆಲ್ಲರೂ ಸಹ ಕನ್ನಡ ಉಳಿಸುವ ಮತ್ತು ಬೆಳೆಸುವಂಥ ಕಾರ್ಯ ಮಾಡಬೇಕು ಎಂದರು.
ಕೆ.ರವೀಂದ್ರನಾಥ ಮಾತನಾಡಿ, ಸಂಡೂರು ಸಂಸ್ಥಾನವನ್ನೊಳಗೊಂಡು ಕರ್ನಾಟಕ ರಾಜ್ಯ 20 ಸಂಸ್ಥಾನಗಳಾಗಿ ಹಂಚಿಹೋಗಿ ಆಡಳಿತಾತ್ಮಕವಾಗಿ ಕುಸಿದು ಬಿದ್ದು ಅನಾಥ ಪ್ರಜ್ಞೆ ಕಾಡಿತು. ಆದರೆ ವಚನ ಸಾಹಿತ್ಯ ಅದನ್ನು ತುಂಬುವುದರ ಜೊತೆಗೆ ಕಾಯಕವೆಂದರೆ ಬರೀ ವೃತ್ತಿ ಅಲ್ಲ ಅದು ಬದುಕಾಗಿತ್ತು. ಬಸವಕಲ್ಯಾಣ, ವಿಜಯಕಲ್ಯಾಣ, ಅಮರಕಲ್ಯಾಣ, ಕೊಡೇಕಲ್ ಕಲ್ಯಾಣ, ಧರ್ಮ ಕಲ್ಯಾಣ ಈ ಐದು ಚರಿತ್ರೆಗಳನ್ನ ಕಟ್ಟಿದ್ದು ವಚನಕಾರರು, ಇಡೀ ಕನ್ನಡ ನಾಡಿಗೆ ನಮ್ಮತನವನ್ನು ತೋರಿಸುವಂತಹ ಸ್ಥಿತಿ ಇಲ್ಲದಂತಹ ಸಮಯದಲ್ಲಿ ಅದನ್ನು ನಾಡಿಗೆ ತಿಳಿಸಿದ ಶರಣರು ತಮ್ಮ ಬದುಕನ್ನೇ ಕನ್ನಡ ನಾಡಿಗೆ ಅರ್ಪಿಸಿದರು ಎಂದರು. ಯಾವುದೇ ಜಾಹೀರಾತುರಹಿತ ಸ್ಮರಣ ಸಂಚಿಕೆಯನ್ನು ಶ್ರೀ ಸಿದ್ಧರಾಮೇಶ್ವರ ಸಂಸ್ಥಾನ ಮಠದ ಪಟ್ಟಾಕಾರ ಮಹೋತ್ಸವದ ಸಂಚಿಕೆ ಮರೆಯಲಾರದಂತಹ ಮತ್ತು ಮಾರ್ಗಸೂಚಿಯಾದಂಥ ಕೃತಿಯಾಗಿದೆ ಎಂದರು.
Related Articles
Advertisement