Advertisement

ಸ್ವಚ್ಛತೆಗೆ ಪ್ರತಿಯೊಬ್ಬರೂ ಕೈಜೋಡಿಸಿ

04:27 PM Jan 31, 2020 | Naveen |

ಸಂಡೂರು: ದೇವಸ್ಥಾನಗಳೆಂದರೆ ನೆಮ್ಮದಿ ತಾಣಗಳು. ಅಲ್ಲಿ ಸ್ವತ್ಛತೆ ಇದ್ದಾಗ ಮಾತ್ರ ನೆಮ್ಮದಿ ಸಿಗಲು ಸಾಧ್ಯ. ಆದ್ದರಿಂದ ಪ್ರತಿಯೊಂದು ದೇವಸ್ಥಾನಕ್ಕೆ ಕಸ ಸಂಗ್ರಹದ ವ್ಯವಸ್ಥೆ ಮಾಡುತ್ತಿರುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿಯ ಕಾರ್ಯ ಹೆಮ್ಮೆ ಪಡುವಂತಹದ್ದು. ಇದಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕೆಂದು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಆರ್‌. ಮಂಜುನಾಥ ತಿಳಿಸಿದರು.

Advertisement

ಅವರು ಪಟ್ಟಣದ ಶ್ರೀ ಸಾಯಿಬಾಬಾ ದೇವಸ್ಥಾನದ ಆವರಣದಲ್ಲಿ ಶ್ರೀಕ್ಷೇತ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಉಚಿತ ಕಸದ ಸಂಗ್ರಹದ ಡಸ್ಟ್‌ಬಿನ್‌ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದು ಬರೀ ಸರ್ಕಾರದಿಂದ ಮಾತ್ರ ಇಂಥ ಕಾರ್ಯ ಮಾಡುವ ಬದಲಿಗೆ ಪ್ರತಿಯೊಬ್ಬರೂ ಸಹ ಭಾಗಿಗಳಾಗಬೇಕು. ಅದರಲ್ಲೂ ಹೆಣ್ಣು ಮಕ್ಕಳು ಭಾಗಿಗಳಾಗಿ ಈ ಕೆಲಸದಲ್ಲಿ ತೊಡಗಿದಾಗ ಸ್ವತ್ಛತೆ ತಾನಾಗಿಯೇ ಬರುತ್ತದೆ. ಇದರಿಂದ ಆರೋಗ್ಯ ಶುದ್ಧವಾಗಿರುತ್ತದೆ. ಆದ್ದರಿಂದ ಎಲ್ಲರೂ ಭಾಗಿಗಳಾಗೋಣ ಎಂದರು.

ವಕೀಲರ ಸಂಘದ ಸದಸ್ಯರು, ಮಾಜಿ ಅಧ್ಯಕ್ಷ ಗುಡೇಕೋಟೆ ನಾಗರಾಜ ಮಾತನಾಡಿ, ಪುರಸಭೆಯವರು ಕ್ರಮಬದ್ಧವಾಗಿ ಕಸ ಸಂಗ್ರಹಣೆ ಮಾಡಬೇಕು. ಅದಕ್ಕೆ ಪ್ರತಿ ಮನೆಯಿಂದಲೂ ಸಹ ಕಸ ಬೀದಿಗೆ ಚಲ್ಲದೆ ನಿರ್ದಿಷ್ಟಪಡಿಸಿದ ಸ್ಥಳಕ್ಕೆ ಸೇರುತ್ತದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಕಾರ್ಯ ವಿಸ್ತರಣೆಯಾಗಲಿ, ಎಲ್ಲ ಕಡೆಗಳಲ್ಲಿಯೂ ಸಹ ಕಸ ಸಂಗ್ರಹವಾಗಿ ಸ್ವತ್ಛತೆ ಕಾಪಾಡೋಣ ಎಂದರು.

ಉಪನ್ಯಾಸಕ ಬಸವರಾಜ ಬಣಕಾರ ಮಾತನಾಡಿ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯು ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಸೇವೆಗಳನ್ನು ಮಾಡುತ್ತಿದೆ. ಅದರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರು ಒಂದು ಸರ್ಕಾರ ಮಾಡುವಷ್ಟು ಕಾರ್ಯವನ್ನು ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು. ಈಗಇಡೀ ತಾಲೂಕಿನಾದ್ಯಂತ ದೇವಸ್ಥಾನಗಳಲ್ಲಿ ಕಸ ಸಂಗ್ರಹಿಸುವಂಥ ಮಹತ್ತರ ಕಾರ್ಯಕ್ಕೆ ಮುಂದಾಗಿದ್ದು ಇದರ ಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ಕರೆನೀಡಿದರು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ತಾಲೂಕು ಯೋಜನಾಧಿಕಾರಿ ಪ್ರಸಾದ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮೊದಲ ಹಂತದಲ್ಲಿ ಪಟ್ಟಣದ 32ಕ್ಕೂ ಹೆಚ್ಚು ದೇವಸ್ಥಾನಗಳಿಗೆ ಡಸ್ಟಬಿನ್‌ ನೀಡಿದ್ದು ಅದರಲ್ಲಿ ಒಣ ಕಸ, ಮತ್ತು ಹಸಿ ಕಸಕ್ಕೆ ಪ್ರತ್ಯೇಕವಾಗಿ ಎರಡನ್ನು ನೀಡುತ್ತಿದ್ದೇವೆ ಎಂದರು. ವಿವಿಧ ಯೋಜನೆಗಳ ಮಾಹಿತಿ ನೀಡಿದರು.

Advertisement

ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣರಾವ್‌ ಮಾತನಾಡಿ,
ಪುರಸಭೆ ಮಾಡುವ ಕೆಲಸವನ್ನು ಈ ಸಂಸ್ಥೆಯವರು ಮಾಡುತ್ತಿರುವುದು ಬಹು ಉತ್ತಮ ಕಾರ್ಯ ಇದರೊಂದಿಗೆ ಸದಾ ಬೆಂಬಲವಾಗಿ ಕಾರ್ಯನಿರ್ವಹಿಸುತ್ತೇವೆ ಎಂದರು.

ಸಮಾರಂಭದಲ್ಲಿ ಪಟ್ಟಣದ 32 ದೇವಸ್ಥಾನಗಳ ಪ್ರತಿನಿಧಿ ಗಳು, ತಾಲೂಕಿನ ವಿವಿಧ ಸ್ತ್ರೀ ಶಕ್ತಿ ಸಂಘಗಳ ಪ್ರತಿನಿಗಳು ಉಪಸ್ಥಿತರಿದ್ದರು. ಅಜಿತ್‌ ಕುಮಾರ್‌ ನಿರೂಪಿಸಿ ಸ್ವಾಗತಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next