Advertisement

ಲಕ್ಷ್ಮೀಪುರದಲ್ಲಿ ಕೀಟನಾಶಕ ಸಿಂಪಡಣೆ

06:08 PM Apr 19, 2020 | Naveen |

ಸಂಡೂರು: ಪ್ರತಿಯೊಂದು ಓಣಿಗೂ ಸಹ ಯಾವುದೇ ಕಾರಣಕ್ಕೂ ರೋಗ ಹರಡಬಾರದು ಎನ್ನುವ ಗುರಿಯೊಂದಿಗೆ ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಅಗ್ನಿಶಾಮಕ ಸಿಬ್ಬಂದಿಯ ಸಹಯೋಗದಲ್ಲಿ ಬ್ಲಿಚಿಂಗ್‌ ಪೌಡರ್‌ ಹಾಗೂ ಕೀಟನಾಶಕ ಸಿಂಪಡಣೆ ಮಾಡುತ್ತಿದ್ದೇವೆ ಎಂದು ಪುರಸಭೆಯ ಮುಖ್ಯಾಧಿ ಕಾರಿ ಸತ್ಯನಾರಾಯಣರಾವ್‌ ತಿಳಿಸಿದರು.

Advertisement

ಈ ಸಂದರ್ಭದಲ್ಲಿ ಅಗ್ನಿಶಾಮಕ ಠಾಣೆ ಅಧಿಕಾರಿ ಮಂಜುನಾಥ ಅವರು ಮಾತನಾಡಿ, ಸರ್ಕಾರದ ಯಂತ್ರವೇ ಕೊರೊನಾ ನಿವಾರಣೆಗೆ ನಿಂತಿದ್ದು ಅದರಂತೆ ಅಗ್ನಿಶಾಮಕ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಸಹ ಪೂರ್ಣಪ್ರಮಾಣದಲ್ಲಿ ಶ್ರಮಿಸುತ್ತಿದ್ದು ಓಣಿಗಳಲ್ಲಿ ಸಿಂಪಡಣೆ ಮಾಡುವ ಸಂದರ್ಭದಲ್ಲಿ ಅತಿ ವೇಗವಾಗಿ ಸಿಂಪಡಣೆಯಿಂದ ಕೀಟಗಳು ಒತ್ತಡಕ್ಕೆ ಸಾಯುವುದರ ಜೊತೆಗೆ ಬ್ಲಿಚಿಂಗ್‌ನಿಂದ ನಾಶವಾಗುತ್ತವೆ. ಆದ್ದರಿಂದ ಸಾರ್ವಜನಿಕರು ಪೂರ್ಣಪ್ರಮಾಣದಲ್ಲಿ ಸಹಕರಿಸಬೇಕು, ಅಲ್ಲದೆ ತಮ್ಮ ದನಕರುಗಳನ್ನು, ಮೇಕೆ ಕುರಿಗಳನ್ನು ಸುರಕ್ಷಿತವಾಗಿ ಕಾಪಾಡಬೇಕು. ಅಲ್ಲದೆ ಯಾರೂ ಸಹ ಮನೆಯಿಂದ ಹೊರಬರದಂತೆ ಇದ್ದು ಈ ರೋಗವನ್ನು ಓಡಿಸಲು ಶ್ರಮಿಸೋಣ ಎಂದರು. ಜನಸಂದಣಿ ಪ್ರದೇಶಗಳಲ್ಲಿ ಪೈಪ್‌ ಮೂಲಕ ಸಿಂಪಡಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next