Advertisement

ಸಮಸ್ಯೆ ಪರಿಹಾರಕೆಕ್ಕೆ ಜನಸ್ಪಂದನ

05:23 PM Feb 03, 2020 | Naveen |

ಸಂಡೂರು: ಪ್ರತಿ ತಿಂಗಳ ಮೊದಲ ಶನಿವಾರ ಜನಸ್ಪಂದನ ಕಾರ್ಯಕ್ರಮವನ್ನು ಸಿದ್ದರಾಮಯ್ಯನವರು ಪ್ರಾರಂಭಿಸಿದ್ದಾರೆ. ಸಾರ್ವಜನಿಕರ ಕುಂದುಕೊರತೆಗಳು ಸ್ಥಳದಲ್ಲಿಯೇ ಪರಿಹರಿಸುವಂಥ ಮಹತ್ತರ ಯೋಜನೆ ಇದಾಗಿದ್ದು ಇದರ ಸದುಪಯೋಗಪಡಿಸಿಕೊಳ್ಳಿ ಎಂದು ಶಾಸಕ ಈ. ತುಕಾರಾಂ ಕರೆನೀಡಿದರು.

Advertisement

ಅವರು ತಾಲೂಕಿನ ಹೊಸ ದರೋಜಿ ಗ್ರಾಮದಲ್ಲಿ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂ.ವೈ. ಘೋರ್ಪಡೆ ಕಾಲದಿಂದ, ಸಂತೋಷ್‌ ಲಾಡ್‌ ಅವರು ಸಚಿವ ಮತ್ತು ಶಾಸಕರಾದಾಗ ದರೋಜಿ ಕೆರೆಕೋಡಿಯನ್ನು 4 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿತ್ತು. ಇಂದು ದರೋಜಿ ಮತ್ತು ನಾಲ್ಕು ಹಳ್ಳಿಗಳಿಗೆ 26 ಕೋಟಿ ರೂ. ವೆಚ್ಚದಲ್ಲಿ ನಿರಂತರ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠಾನ ಮಾಡಲಾಗುವುದು. 6.5 ಕೋಟಿ ರೂ. ವೆಚ್ಚದಲ್ಲಿ ಗ್ರಾಮದ ಅಭಿವೃದ್ಧಿ ಮಾಡಲು ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಫ್ಲೈ ಓವರ ನಿರ್ಮಿಸಿ ಸಂಚಾರ ಸುಗಮಗೊಳಿಸಲಾಗುವುದು. ದರೋಜಿ ಗ್ರಾಮಕ್ಕೆ ಈ-ಗ್ರಂಥಾಲಯ, ಕೌಶಲ್ಯ ತರಬೇತಿ ಕೇಂದ್ರ ಪ್ರಾರಂಭಿಸಲಾಗುವುದು. ಕೆರೆ ಒತ್ತುವರಿ ಮತ್ತು ಹೂಳು ತೆಗೆಸಲು ಪೂರ್ಣ ಪ್ರಯತ್ನ ಮಾಡಲಾಗುವುದು.

ಮಕ್ಕಳ ಶಿಕ್ಷಣಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬಸ್‌ ಸೌಲಭ್ಯ, ವಸತಿ ನಿಲಯ ಮತ್ತು ಮುಂದಿನ ದಿನಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ಪ್ರೌಢಶಾಲೆಯನ್ನು ಹಾಗೂ ಗ್ರಾಮಸ್ಥರ ಒತ್ತಾಯದಂತೆ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಲು ಎಲ್ಲ ರೀತಿಯ ಕ್ರಮ ವಹಿಸಲಾಗುವುದು ಎಂದರು.

ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರು ಥರ್ಮಲ್‌ ಹಾಗೂ ಇತರ ಕಂಪನಿಗಳಿಂದ ಆಗುತ್ತಿರುವ ಬೆಳೆ ಹಾನಿ, ಬಸ್‌ ಕೊರತೆ, ವೃದ್ಧರಿಗೆ ಸಿಗದ ಪಿಂಚಣಿ, ಗ್ರಾಮದ ಅವ್ಯವಸ್ಥೆ, ಚರಂಡಿ ತುಂಬಿ ಸೊಳ್ಳೆ ಹೆಚ್ಚಾಗಿರುವುದು ಹೀಗೆ ದೂರುಗಳ ಪಟ್ಟಿ ಸಲ್ಲಿಸಿದರು.

ಸಭೆಯಲ್ಲಿ ತಾಲೂಕುಮಟ್ಟದ ಕೃಷಿ, ತೋಟಗಾರಿಕೆ, ಅರಣ್ಯ, ಪಿಡಬ್ಲೂಡಿ, ಜಿಲ್ಲಾ ಪಂಚಾಯಿತಿ, ಕಂದಾಯ, ಶಿಕ್ಷಣ ಅಧಿಕಾರಿಗಳು ಹಾಜರಿದ್ದು ಮನವಿ ಸ್ವೀಕರಿಸಿ ಪರಿಹಾರದ ಭರವಸೆ ನೀಡಿದರು.

Advertisement

ತಹಶೀಲ್ದಾರ್‌ ರಶ್ಮಿ ಜನಸ್ಪಂದನ ಸಭೆ ಮಹತ್ವ ತಿಳಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ಧನ, ತಾಪಂ ಅಧ್ಯಕ್ಷೆ ಫರ್ಜಾನ ಗೌಸ ಅಜಂ, ಉಪಾಧ್ಯಕ್ಷೆ ತಿರುಕವ್ವ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎನ್‌. ಪಲ್ಲವಿ, ಸೌಭಾಗ್ಯ ತಿರುಮಲ, ವಿ.ಎಸ್‌.ಎಸ್‌.ಎನ್‌. ಅಧ್ಯಕ್ಷ ಭೀಮಣ್ಣ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next