Advertisement

20ರಂದು ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಆಚರಣೆ

04:23 PM Jul 14, 2019 | Naveen |

ಸಂಡೂರು: ಹಡಪದ ಅಪ್ಪಣ್ಣನವರ ಜಯಂತ್ಯುತ್ಸವವನ್ನು ಜುಲೈ 20ರಂದು ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಚರಿಸಲಾಗುವುದು ಎಂದು ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷ ಎಚ್. ದೊಡ್ಡಬಸಪ್ಪ ತಿಳಿಸಿದರು.

Advertisement

ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಹಡಪದ ಅಪ್ಪಣ್ಣ ಜಯಂತ್ಯುತ್ಸವದ ಅಂಗವಾಗಿ ತಾಲೂಕು ಹಡಪದ ಸಮಾಜದ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿ, ಅನ್ನದಾನ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ ನೇತೃತ್ವದಲ್ಲಿ ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಯಂತ್ಯುತ್ಸವ ಆಚರಿಸಲಾಗುವುದು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಂಡೂರು ವಿರಕ್ತಮಠದ ಪ್ರಭು ಮಹಾಸ್ವಾಮಿಗಳು, ಯಶವಂತನಗರದ ಶ್ರೀ ಗುರುಸಿದ್ದೇಶ್ವರ ಸಂಸ್ಥಾನ ವಿರಕ್ತಮಠದ ಗಂಗಾಧರ ದೇವರು ವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಈ. ತುಕರಾಮ ವಹಿಸುವರು. ಉದ್ಘಾಟನೆಯನ್ನು ಎಸ್‌ಪಿಎಸ್‌ ಬ್ಯಾಂಕ್‌ ಅಧ್ಯಕ್ಷ, ವೆಸ್ಕೋ ಕಂಪನಿ ಮಾಲೀಕ ಕೆ.ಎಸ್‌. ನಾಗರಾಜ ನೆರವೇರಿಸುವರು. ಮೆರವಣಿಗೆಯಲ್ಲಿ ವೆಂಕಟರಾವ್‌ ಘೋರ್ಪಡೆ ಭಾಗವಹಿಸುವರು. ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್‌ ಎಂ. ಸಿದ್ದೇಶ್‌ ಹಾಗೂ ತಾಲೂಕಿನ ಎಲ್ಲ ಕಚೇರಿ ಮುಖ್ಯಸ್ಥರು, ಬಿ.ನಾಗನಗೌಡ, ಗುಡೇಕೋಟೆ ನಾಗರಾಜ, ನಾಡೋಜ ವಿ.ಟಿ. ಕಾಳೇ, ಕಲಾವಿದರಾದ ಡಾ. ವೃಷಭೇಂದ್ರ ಆಚಾರ್‌ ಇತರ ಗಣ್ಯರು ಅಗಮಿಸುವರು.

ವಡ್ಡಿನಕಟ್ಟೆ ವಸತಿ ಶಾಲೆ ಪ್ರಾಚಾರ್ಯ ಎಚ್.ಕೃಷ್ಣಪ್ಪ ಬೈರಾಪುರ ಉಪನ್ಯಾಸ ನೀಡುವರು. ಸಂಗೀತ ಸೇವೆಯನ್ನು ಕಲಾವಿದರಾದ ಎಚ್.ಕುಮಾರಸ್ವಾಮಿ ಸಂಗಡಿಗರು ನೇರವೇರಿಸುವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಾಜದ ಸಲಹೆಗಾರರಾದ ಎಚ್. ಕುಮಾರಸ್ವಾಮಿ ಮಾತನಾಡಿ, ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೇರವೇರಿಸಲಾಗುವುದು. ಬೆಳಿಗ್ಗೆ 9 ಗಂಟೆ ಹಡಪದ ಆಪ್ಪಣ್ಣನವರ ಭಾವಚಿತ್ರದ ಮೆರವಣಿಗೆ ವಿಶೇಷ ಕಲಾತಂಡಗಳೊಂದಿಗೆ ಪ್ರಮುಖ ಬೀದಿಗಳಲ್ಲಿ ನಡೆಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಎಚ್.ದೊಡ್ಡಬಸಪ್ಪ, ಪಂಪಾಪತಿ, ಎಸ್‌.ಎಚ್.ಗಣೇಶ್‌, ಕುಮಾರಸ್ವಾಮಿ ಭುಜಂಗನಗರ, ಎಚ್.ಕಾರ್ತಿಕ, ಬಸವರಾಜ, ಮಲ್ಲಿಕಾರ್ಜುನ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next