ಸಂಡೂರು: ಪಟ್ಟಣದ ಪುರಸಭಾ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮೀಸಲಾತಿ ಪ್ರಕಟವಾಗಿದ್ದು ಕಾಂಗ್ರೆಸ್ ಹಾಗೂ ಬಿಜೆಪಿ ಅಧ್ಯಕ್ಷಗಾದಿಗೆ ತೀವ್ರ ಪೈಪೋಟಿ ನಡೆಯುತ್ತಿದೆ. ಬಹುಮತವನ್ನು ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದು, ಆದರೆ ಘೋಷಿಸಿರುವ ಮೀಸಲಾತಿಯಲ್ಲಿ ಅಧ್ಯಕ್ಷ ಹುದ್ದೆಗೆ ಕಾಂಗ್ರೆಸ್ ದಿಂದ ಯಾವುದೇ ಅಭ್ಯರ್ಥಿ ಇಲ್ಲದ ಕಾರಣ ಬಿಜೆಪಿ ಬಹುಮತವಿಲ್ಲದೆ ಅಧ್ಯಕ್ಷ ಸ್ಥಾನ ಪಡೆಯುವಂತಾಗಿದೆ.
ಪುರಸಭೆ ಅಧ್ಯಕ್ಷ ಹುದ್ದೆಗೆ ಹಿಂದುಳಿದ ವರ್ಗ (ಎ) ಮಹಿಳೆ ಮೀಸಲಾತಿ ಪ್ರಕಟವಾಗಿದೆ. ಉಪಾಧ್ಯಕ್ಷ ಹುದ್ದೆಗೆ ಸಾಮಾನ್ಯ ಮೀಸಲಾತಿ ಘೋಷಣೆಯಾಗಿದೆ. ಆದರೆ ಈ ಮೀಸಲಾತಿಯಂತೆ ಕಾಂಗ್ರೆಸ್‌ದಿಂದ ಮೀಸಲಾತಿಯಂತೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಶಾಲತಾ ಸೋಮಪ್ಪ ಸ್ಪರ್ಧಿಸಿದ್ದರು. ಆದರೆ ಬಿಜೆಪಿಯಿಂದ ಸ್ಪರ್ಧಿಸಿದ ಅಭ್ಯರ್ಥಿ ದುರುಗಮ್ಮ ಕೆ. 137 ಮತಗಳ ಅಂತರದಿಂದ ಜಯಶೀಲರಾಗಿದ್ದಾರೆ. ಇವರಿಗೆ ಅಧ್ಯಕ್ಷ ಹುದ್ದೆ ಸಿಗಲಿದೆ. ಆದರೆ ಒಟ್ಟು 23 ಕ್ಷೇತ್ರಗಳಲ್ಲಿ ಬಿಜೆಪಿ 10, ಕಾಂಗ್ರೆಸ್ 12, ಪಕ್ಷೇತರ 1 ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಆದರೆ ಬಹುಮತ ಇಲ್ಲದ ಬಿಜೆಪಿ ಅಧ್ಯಕ್ಷ ಹುದ್ದೆ ಪಡೆಯುವಂತಾಗಿರುವುದು ಕಾಂಗ್ರೆಸ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಮೀಸಲಾತಿ ಆದೇಶ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರುವುದಾಗಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ತಿಳಿಸಿದ್ದಾರೆ.
ಹಿನ್ನೆಲೆ: ಈ ಹಿಂದೆ ತಾಲೂಕು ಪಂಚಾಯಿತಿಯಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಕಾಂಗ್ರೆಸ್ 8 ಸ್ಥಾನ, ಬಿಜೆಪಿ 10 ಸ್ಥಾನ ಗೆದ್ದರೂ ಕಾಂಗ್ರೆಸ್ ಮೀಸಲಾತಿಯನ್ನು ತಮ್ಮ ಪಕ್ಷದ ಅಭ್ಯರ್ಥಿಗೆ ಸಿಗುವಂತೆ ತಂದಿದೆ ಎಂದು ಬಿಜೆಪಿಯವರು ಅರೋಪಿಸಿದ್ದರು. ಆದರೂ ಬಹುಮತವಿಲ್ಲದ ಕಾಂಗ್ರೆಸ್ ಇಂದು ಅಧ್ಯಕ್ಷ ಹುದ್ದೆಯನ್ನು ಪಡೆದುಕೊಂಡಿದೆ. ಅದೇ ರೀತಿಯ ತಂತ್ರಗಾರಿಕೆ ಮೇಲ್ನೋಟಕ್ಕೆ ಬಿಜೆಪಿಯಿಂದ ಕಂಡುಬರುತ್ತಿದೆ. ಆದರೆ ತಾಲೂಕು ಪಂಚಾಯಿತಿ ಮೀಸಲಾತಿ ಸರಣಿಯಲ್ಲಿ ಈ ಹಿಂದೆ ಪಡೆದಿರಲಿಲ್ಲ. ಆದ್ದರಿಂದ ಕಾಂಗ್ರೆಸ್ ಸಮರ್ಥನೆ ಮತ್ತು ಬಳಕೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ಈಗ ಪುರಸಭೆಯಲ್ಲಿ ಈಗಾಗಲೇ ಅಧ್ಯಕ್ಷ ಹುದ್ದೆಯನ್ನು ಕೇವಲ 3 ವರ್ಷಗಳ ಹಿಂದೆಯೇ ಪಡೆದುಕೊಂಡು ಅಧ್ಯಕ್ಷರಾಗಿದ್ದ ಮಾಜಿ ಪುರಸಭೆ ಸದಸ್ಯರಾದ ಅಶಾಲತಾ ಸೋಮಪ್ಪ ಕಾಂಗ್ರೆಸ್ ದಿಂದ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು.
ಆದ್ದರಿಂದ ಮೀಸಲಾತಿ ಸರಣಿಯಲ್ಲಿ ಇದು ಪುನರಾವರ್ತನೆಯಾಗಿದೆ ಎಂದು ಕಾಂಗ್ರೆಸ್ ಕೋರ್ಟ್ ಮೆಟ್ಟಿಲೇರುವ ಎಲ್ಲ ಪ್ರಯತ್ನಗಳನ್ನು ಮಾಡದೇ ಬಿಡಲಾರದು ಎಂಬುದಾಗಿ ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಸಂಡೂರು ಪುರಸಭೆ ಅಧಿಕಾರದ ಗದ್ದುಗೆ ಗುದ್ದಾಟ ಜೋರಾಗಲಿದೆ.
ಮೀಸಲಾತಿ ಬಗ್ಗೆ ಪೂರ್ಣ ಮಾಹಿತಿ ದೊರೆತಿಲ್ಲ. ಶಾಸಕರ ಗಮನಕ್ಕೆ ತಂದು ಹೈಕಮಾಂಡ್ ತೀರ್ಮಾನದಂತೆ ನಿರ್ಧರಿಸಲಾಗುತ್ತದೆ.
ಹಿರೇಮಠ,
ಶಾಸಕರ ಅಪ್ತ ಸಹಾಯಕ
ನಮ್ಮ ಪಕ್ಷದಿಂದ ಇಂಥ ಯಾವುದೇ ರೀತಿಯ ಪ್ರಯತ್ನಪೂರ್ವಕವಾಗಿ ಮೀಸಲಾತಿ ತಂದಿಲ್ಲ. ಸರ್ಕಾರಿ ನಿಯಮದ ಪ್ರಕಾರವೇ ಅಧ್ಯಕ್ಷ ಹುದ್ದೆ ಪಡೆಯುತ್ತೇವೆ.
ಜಿ.ಟಿ. ಪಂಪಾಪತಿ,
ಬಿಜೆಪಿ ತಾಲೂಕು ಅಧ್ಯಕ್ಷ್ಯ
ಬಸವರಾಜ ಬಣಕಾರ