Advertisement

ಇದ್ದೂ ಇಲ್ಲದಂತಾದ ಗ್ರಂಥಾಲಯ!

04:31 PM Oct 30, 2019 | |

ಸಂಡೂರು: ಪಟ್ಟಣದಲ್ಲಿ ಗ್ರಂಥಾಲಯ ಇದ್ದು ಇಲ್ಲದಂತಾಗಿದೆ. ಆಧುನೀಕರಣ ಮಾಡಬೇಕು ಎನ್ನುವ ನೆಪದಲ್ಲಿ ಇರುವ ಕಟ್ಟಡವನ್ನು ಕೆಡವಿದ್ದು ಓದುಗರಿಗೆ ನೋವನ್ನು ಉಂಟುಮಾಡಿದೆ.

Advertisement

ಗಾಂಧಿ ಕುಟೀರ ಎಂಬ ಹೆಸರಿನಿಂದ ಸಂಡೂರು ಪಟ್ಟಣದ ಕೇಂದ್ರ ಗ್ರಂಥಾಲಯ ನಡೆಯುತ್ತಿತ್ತು. ಅದರೆ ಅದರ ಸುತ್ತಲೂ ಇದ್ದ ವಿಪರೀತ ಹೊಲಸು ಹಾಗೂ 2ನೇ ವಾರ್ಡನ ಬಹಳಷ್ಟು ಜನರು ಗ್ರಂಥಾಲಯದ ಆವರಣವನ್ನು ಶೌಚಾಲಯವನ್ನಾಗಿ ಮಾಡಿಕೊಂಡ ಪರಿಣಾಮ ಗ್ರಂಥಾಲಯ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿತ್ತು.

ಈ ಕಟ್ಟಡದ ದುಸ್ಥಿತಿ ಕಂಡ ಶಾಸಕರು 2012ರಲ್ಲಿ ನೂತನ ಕಟ್ಟಡ ಕಟ್ಟಲು ತೀರ್ಮಾನಿಸಿ 2013ರಲ್ಲಿ ಇಡೀ ಕಟ್ಟಡವನ್ನು ಕೆಡವಲಾಯಿತು. ಅಂದಿನಿಂದ ಇಂದಿನವರೆಗೂ ನೂತನ ಕಟ್ಟಡ ನಿರ್ಮಾಣ ಕಾರ್ಯ ಪ್ರಾರಂಭಮಾಡಿದ ನಿರ್ಮಿತಿ ಕೇಂದ್ರದ ಗುತ್ತಿಗೆದಾರರು 2019 ಮುಗಿಯುತ್ತ ಬಂದರೂ ಕೆಲಸ ಪೂರ್ಣ ಮಾಡದೇ ಅದನ್ನು ಗ್ರಂಥಾಲಯ ಇಲಾಖೆಗೆ ಹಸ್ತಾಂತರ ಮಾಡದೇ ಇದ್ದ ಪರಿಣಾಮ ಗ್ರಂಥಾಲಯ ಕಟ್ಟಡ ಪೂರ್ಣಗೊಂಡಿಲ್ಲ.

ಗ್ರಂಥಾಲಯ ನೂತನವಾಗಿ ನಿರ್ಮಾಣವಾಗಿದೆ. ಇನ್ನೂ ಪೂರ್ಣವಾಗಬೇಕು. ಗ್ರಂಥಾಲಯ ಮುಚ್ಚಬಾರದು ಎಂದು 2018ರಲ್ಲಿ ಒಪ್ಪಿಗೆ ಇಲ್ಲದೆ ಪರಿಕರಗಳನ್ನು ಸ್ಥಳಾಂತರ ಮಾಡಿ ದಿನಪತ್ರಿಕೆಗಳನ್ನು ಓದಲು ಅನುವು ಮಾಡಿಕೊಡಲಾಗಿದೆ. ಆದರೆ ಗ್ರಂಥಾಲಯದ ಮುಂಭಾಗ ಹೊಲಸಿನ ಹೊಂಡವಾಗಿದೆ.

ಮತ್ತೂಂದು ಕಡೆ ಗ್ರಂಥಪಾಲಕರಿಗೂ ಕೊಠಡಿ ಕಟ್ಟಲಾಗಿದೆ. ಆದರೆ ಅವರು ವಾಸವಾಗಿಲ್ಲ. ಗ್ರಂಥಾಲಯದಲ್ಲಿ ಇಂದಿನವರೆಗೆ ಒಟ್ಟು 19,618 ಪುಸ್ತಕಗಳು, 897 ಸದಸ್ಯರು (30 ವರ್ಷಗಳಿಂದ)ಇದ್ದಾರೆ. ಅದರಲ್ಲಿ ನಿತ್ಯ ಬಳಕೆ ಮಾಡುವವರು ಬೆರೆಳೆಣಿಕೆಯಷ್ಟು ಮಾತ್ರ. ನಿತ್ಯ ಪತ್ರಿಕೆ ಓದಲು 25-30 ಓದುಗರು ಬರುತ್ತಾರೆ, ಕಾರಣ ಗ್ರಂಥಾಲಯದಲ್ಲಿ ಸೂಕ್ತವಾದ ವ್ಯವಸ್ಥೆ ಇಲ್ಲದೆ ಓದುಗರ ಸಂಖ್ಯೆ ಇಳಿಮುಖವಾಗುತ್ತಿದೆ. ಗ್ರಂಥಾಲಯದ ಸುತ್ತಲಿನ ಗಬ್ಬು ವಾಸನೆಯಲ್ಲಿ ಕುಳಿತುಕೊಳ್ಳಲಾರದಂತ ಸ್ಥಿತಿ ಓದುಗರದು.

Advertisement

ನೂತನ ಕಟ್ಟಡವಾಗಿ ಚೆನ್ನಾಗಿರುತ್ತದೆ. ಹೈಟೆಕ್‌ ಗ್ರಂಥಾಲಯವಾಗುತ್ತದೆ ಎಂದು ಸಂಡೂರಿನ ಓದುಗರು ಭಾವಿಸಿದ್ದರು. ಆದರೆ ಬದಲಾಗಲಿಲ್ಲ, ಕಾರಣ ನಿರ್ಮಾಣ ಮಾಡುವವರು 5 ವರ್ಷಗಳಾದರೂ ಸಹ ಸರಿಯಾದ ವಿದ್ಯುತ್‌, ಬಾಗಿಲು ಇತರ ಕಾರ್ಯಗಳನ್ನು ಮಾಡಿಲ್ಲ.

ಮತ್ತೂಂದು ಕಡೆ ಇಲಾಖೆಯವರು ಅಭಿವೃದ್ಧಿ ಪಡಿಸಬೇಕೆಂದರೂ ಸಹ ಕಟ್ಟಡ ಹಸ್ತಾಂತರವಾಗಿಲ್ಲ. ಆದರೆ ಶಾಸಕರು ಪೂರ್ಣ ಶ್ರಮವಹಿಸಿ ಈ ಗ್ರಂಥಾಲಯಕ್ಕೆ ಬೇಕಾದ 10ಲಕ್ಷಕ್ಕೂ ಹೆಚ್ಚು ಮೊತ್ತದ ಪೀಠೊಪಕರಣಗಳನ್ನು, ರ್ಯಾಕ್‌ಗಳನ್ನು, ಅಧುನಿಕ ಪರಿಕರಗಳನ್ನು ನೀಡಿದ್ದಾರೆ, ಅವೂ ಸಹ ಬಳಕೆ ಮಾಡಲಾಗದೇ ಮೂಲೆಯಲ್ಲಿ ಒಟ್ಟುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next