Advertisement

ನೀರಿನ ಘಟಕಕ್ಕೆ ವಿದ್ಯುತ್‌ ಕಡಿತ -ಎಚ್ಚರಿಕೆ

06:00 PM Jan 22, 2021 | Team Udayavani |

ಸಂಡೂರು: ಮೂರು ತಿಂಗಳ ಹಿಂದೆಯೇ ಸೂಚಿಸಿದ ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ತಕ್ಷಣವೇ ಕಾಮಗಾರಿ ಮುಗಿ. ಇಲ್ಲವಾದಲ್ಲಿ ಕ್ರಮ ವಹಿಸಲಾಗುವುದು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್‌. ಪ್ರಕಾಶ್‌ ಜೆಸ್ಕಾಂ ಅಧಿಕಾರಿಗೆ ಎಚ್ಚರಿಕೆ ನೀಡಿದರು.

Advertisement

ಪಟ್ಟಣದ ತಾಲೂಕು ಪಂಚಾಯಿತಿ ಆವರಣದಲ್ಲಿ ನಡೆದ ಸಾಮಾನ್ಯ ಸಭೆಯನ್ನು ಉದ್ದೇಶಿಸಿ ಸದಸ್ಯ ಹೊಸಗೇರಪ್ಪ ಅವರು ಶುದ್ಧ ಘಟಕ ಮತ್ತು ಕುಡಿಯುವ ನೀರಿನ ಪಂಪ್‌ಸೆಟ್‌ ಗಳ ವಿದ್ಯುತ್‌ ಕಡಿತ ಮತ್ತು ಸಂಪರ್ಕ ನೀಡದೇ ಇರುವ ಬಗ್ಗೆ ಪ್ರಶ್ನಿಸಿದಾಗ, ಇಒ ಅವರು ಸರ್ಕಾರದ ಶುದ್ಧ ನೀರಿನ ಘಟಕಗಳಿಗೆ ನೀರು ಪೂರೈಸಲು ವಿದ್ಯುತ್‌ ಕಡಿತ ಮಾಡಿದರೆ ಜನರ ಗತಿ ಏನು. ತಕ್ಷಣವೇ ಕ್ರಮ ವಹಿಸಲು ಸೂಚಿಸಿದರು. ಸಭೆಯಲ್ಲಿ ತಹಶೀಲ್ದಾರ್‌ ಎಚ್‌.ಜಿ. ರಶ್ಮಿ ಅವರು ತಮ್ಮ ಇಲಾಖೆಯ ಸಮಸ್ಯೆಗಳ ಬಗ್ಗೆ ಉತ್ತರಿಸಿ ಗ್ರಾಮ ಪಂಚಾಯಿತಿಯಲ್ಲಿ ವಿಎಗಳು ಇಲ್ಲದಿರುವುದು, 101 ಸಕಾಲ ಯೋಜನೆ ಜಾರಿಯಾಗದೇ ಇರುವುದು, ಪಾಣಿ ಮತ್ತು ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಅಧಾರ್‌ ಕಾರ್ಡ್‌ ತಿದ್ದುಪಡಿ ಬಗ್ಗೆ ತಕ್ಷಣ ಕ್ರಮ ವಹಿಸಲಾಗುವುದು. ಅಲ್ಲದೆ ಪಡಿತರ ಚೀಟಿ, ವಿಧವೆಯರಿಗೆ ವೇತನ ನೀಡುವ ಬಗ್ಗೆಯೂ, ಮನೆಗಳ ಮಂಜೂರು ಅದ ಬಗ್ಗೆಯೂ ಮಾಹಿತಿ ನೀಡಿದರು.

ಇದನ್ನೂ ಓದಿ : ಬಿಎಸ್‌ವೈ ಕೊಟ್ಟ ಮಾತು ಹುಸಿಯಾಗದಿರಲಿ

ಕ್ಷೇತ್ರ ಶಿಕ್ಷಣಾಧಿಕಾರಿ ಡಾ| ಐ.ಆರ್‌. ಅಕ್ಕಿ ಮಾಹಿತಿ ನೀಡಿ, ಹಂತ ಹಂತವಾಗಿ ಶಾಲೆಗಳು ಪ್ರಾರಂಭವಾಗಿವೆ. ಆದರೆ ಹಳ್ಳಿಯ ವಿದ್ಯಾರ್ಥಿಗಳು ಶಾಲೆಗೆ ಬರಲು ಕಷ್ಟವಾಗಿದೆ. ಆದ್ದರಿಂದ ಕೆಎಸ್‌ಆರ್‌ಟಿಸಿ ಅವರಿಗೆ ವಿನಂತಿ ಮಾಡಲಾಗಿದೆ. ಅಲ್ಲದೆ ವಸತಿ ನಿಲಯಗಳನ್ನು ತೆರೆಯಲು ಸಹ ಅವಕಾಶ ಸಿಕ್ಕಿದೆ. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಾಳಜಿ ವಹಿಸಿ ಪರೀಕ್ಷೆಗೆ ತಯಾರಿ ನಡೆಸಲಾಗುತ್ತಿದೆ ಎಂದರು.

ಅಧ್ಯಕ್ಷೆ ಫರ್ಜಾನ್‌ ಗೌಸ್‌ ಅಜಂಡಿ ಪ್ರಶ್ನಿಸಿ, ತಾಲೂಕಿನ ಕೃಷ್ಣಾನಗರ ಗ್ರಾಮದ ಹತ್ತಿರದ ಚೆಕ್‌ ಡ್ಯಾಂ ಕಾಮಾಗಾರಿ ಸರಿಯಾಗಿ ನಡೆಯುತ್ತಿಲ್ಲ. ತಕ್ಷಣ ಬಿಲ್‌ ತಡೆ ಹಿಡಿಯಬೇಕು ಎಂದು ಸೂಚಿಸಿದರು. ಕೃಷ್ಣಾನಗರದ ಗ್ರಾಮನತ್ತು ಜಾಗದಲ್ಲಿ ಖಾಸಗಿಯವರು ಅನುಮತಿ ಇಲ್ಲದೆ ಮನೆ ಕಟ್ಟುತ್ತಿದ್ದು ತಡೆಯುವವರೆ ಇಲ್ಲವೇ ಎಂದು ಸದಸ್ಯ ಸುಭಾನ್‌ ಸಾಬ್‌ ಇತರರು ಪ್ರಶ್ನಿಸಿದದಾಗ ತಹಶೀಲ್ದಾರ್‌ ರಶ್ಮಿ ಅವರು ಈ ಬಗ್ಗೆ ತಾಪಂನವರು ಮತ್ತು ಶಿಕ್ಷಣ ಇಲಾಖೆ ಜಂಟಿಯಾಗಿ ಕೇಸು ದಾಖಲಿಸಬೇಕು. ಆದರೆ ಅದು ಆಗಿಲ್ಲ, ನಾನೇ ಖುದ್ದು ಈ ಬಗ್ಗೆ ಕ್ರಮ ವಹಿಸುತ್ತೇನೆ ಎಂದರು.

Advertisement

ಸದಸ್ಯ ಕುಮಾರಸ್ವಾಮಿ, ಹನುಮಂತಪ್ಪ, ಹೊಸಗೇರಪ್ಪ, ರಾಮಾಂಜಿನಿ, ಮತ್ತು ಗಂಗಮ್ಮ ಅವರು ತಮ್ಮ ಕ್ಷೇತ್ರಗಳಲ್ಲಿ ಅಧಿಕಾರಿಗಳು ಕ್ರಿಯಾ ಯೋಜನೆಯಾಗಲಿ, ಅನುಪಾಲನಾ ವರದಿಯಾಗಲಿ ನೀಡುತ್ತಿಲ್ಲ, ಕೆಲಸಗಳು ಆಗುತ್ತಿಲ್ಲ. ನಾವು ಸಭೆ ನಡೆಸುವುದು ವ್ಯರ್ಥ್ಯ ಎಂದು ಅಸಮಾಧಾನ ಹೊರಹಾಕಿದರು. ಸಿಡಿಪಿಒ ಪ್ರೇಮಮೂರ್ತಿ ಮಾತನಾಡಿದರು.

ಇದನ್ನೂ ಓದಿ ; ರೈತರ ಅನುಕೂಲಕ್ಕಾಗಿ ಕ್ವಿಂಟಲ್‌ ತೊಗರಿಗೆ 6 ಸಾವಿರ ರೂ.

Advertisement

Udayavani is now on Telegram. Click here to join our channel and stay updated with the latest news.

Next