Advertisement
Related Articles
Advertisement
ಈ ನಾಲ್ವರು ಟೆಕ್ಕಿಗಳು ಒಂದು ಸ್ಟಾರ್ಟ್‌ಅಪ್ ಕಂಪನಿಯನ್ನು ಆರಂಭಿಸಿದರು. ಕಂಪನಿ ಹೊಸತಾದ್ದರಿಂದ ಹಗಲು- ರಾತ್ರಿ ದುಡಿಮೆ ಅನಿವಾರ್ಯವಾಗಿತ್ತು. ಕಚೇರಿಯಲ್ಲಿಯೇ ಊಟ- ತಿಂಡಿಯನ್ನು ಸಿದ್ಧಪಡಿಸುವ ವ್ಯವಸ್ಥೆ ಇತ್ತಾದರೂ, ದಿನಸಿ ಸಾಮಗ್ರಿಗಳಿಗೆ ಹೊರಗಡೆಯ ಅಂಗಡಿಗಳಿಗೆ ಹೋಗಬೇಕಿತ್ತು. ಆದರೆ, ತಮ್ಮ ರುಚಿಗೆ ಬೇಕಾದಂಥ, ಗುಣಮಟ್ಟ ಪದಾರ್ಥಗಳು ಸಿಗದೆ ಬೇಸರಗೊಳ್ಳುತ್ತಿದ್ದರು. ಆಗ ಹುಟ್ಟಿಕೊಂಡಿದ್ದೇ “Sandigeatdoors.com’ ಐಡಿಯಾ!
ಏನೇನು ತಯಾರಿಸ್ತಾರೆ?ಈ ನಾಲ್ವರು ಕೆಲಸದ ಜೊತೆಯಲ್ಲಿಯೇ ಹಪ್ಪಳ, ಸಂಡಿಗೆ, ಸಾಂಬಾರು ಪದಾರ್ಥ, ಮೆಂತ್ಯ ಚಟ್ನಿ ಪುಡಿ, ವಾಂಗೀಬಾತ್ ಪೌಡರ್‌ಗಳನ್ನು ತಯಾರಿಸತೊಡಗಿದರು. ಹೀಗೆ ತಯಾರಿಸಿದ ಪದಾರ್ಥಗಳಿಗೆ ಆನ್‌ಲೈನ್ ಮಾರುಕಟ್ಟೆಯಲ್ಲಿಟ್ಟರು. ಬೆಂಗಳೂರೆಂಬ ಬ್ಯುಸಿ ಊರಿನಲ್ಲಿ ಯಾರಿಗೂ ಅಡುಗೆ ಮಾಡುವಷ್ಟು ಸಮಯವಿಲ್ಲ. ಹಾಗೆ ಕೊಂಚ ಸಮಯ ಸಿಕ್ಕರೂ ಸಿಂಪಲ್ಲಾಗಿ, ಅಡುಗೆ ತಯಾರಿಸುವ, ಅನ್ನದೊಂದಿಗೆ ನೆಂಚಿಕೊಳ್ಳುವ ಪದಾರ್ಥಗಳಿದ್ದರೆ ಹೊಟ್ಟೆಯೇ ತುಂಬಿಬಿಡುತ್ತದೆ. ಬೆಂಗ್ಳೂರಿಗರ ಈ ಅವಸರದ ಬದುಕಿಗೆ ತಕ್ಕಂತೆ, ಇವರು ರುಚಿದಾಯಕ ಆಹಾರೋತ್ಪನ್ನಗಳನ್ನು ತಯಾರಿಸಿದ್ದಾರೆ. ಯಾವ ಶೈಲಿಯ ಆಹಾರ?
ಸಾಮಾನ್ಯವಾಗಿ ಬೆಂಗಳೂರಿನ ಎಲ್ಲೆಡೆ ಮಂಗಳೂರು- ಉಡುಪಿ ಕಡೆಯ ಸಂಡಿಗೆ- ಹಪ್ಪಳ ಬಹಳ ಜನಪ್ರಿಯ. ಉತ್ತರ ಕರ್ನಾಟಕ ಶೈಲಿಯ ಚಟ್ನಿಪುಡಿಗಳೂ ರಾಜಧಾನಿಯಲ್ಲಿ ಹೆಚ್ಚು ಬೇಡಿಕೆ ಗಿಟ್ಟಿಸಿಕೊಂಡಿವೆ. ಆದರೆ, ಬೆಂಗಳೂರು- ಮೈಸೂರು ಭಾಗದ ಸಂಡಿಗೆಗಳು ಎಲ್ಲ ಕಡೆಗಳಲ್ಲೂ ಸಿಗುವುದಿಲ್ಲ. ಖಚnಛಜಿಜಛಿಚಠಿಛಟಟ್ಟs.cಟಞ ಜಾಲತಾಣಕ್ಕೆ ಭೇಟಿ ನೀಡಿದರೆ, ಮೈಸೂರು ಶೈಲಿಯ ಪದಾರ್ಥಗಳು ಸಿಗುತ್ತವೆ. ಫೋನ್ ಕರೆ ಮಾಡಿ ತಿಳಿಸಿದರೂ, ಮನೆಯ ಬಾಗಿಲಿಗೆ ಹಪ್ಪಳ- ಸಂಡಿಗೆಗಳು ಬರುತ್ತವೆ. ಸಭೆ- ಸಮಾರಂಭಗಳಿಗೂ ರಿಯಾಯಿತಿ ದರದಲ್ಲಿ ಕುರುಕಲು ಪದಾರ್ಥಗಳನ್ನು ತಲುಪಿಸುತ್ತಾರೆ. ಏನೇನು ವಿಶೇಷತೆ?
– ಮೈಸೂರು ಶೈಲಿಯ ಸಂಡಿಗೆ, ಹಪ್ಪಳ, ಚಟ್ನಿಪುಡಿ, ಸಾಂಬಾರು ಪದಾರ್ಥ.
– ಡಯಾಬಿಟೀಸ್ ಇದ್ದವರಿಗೆ ಮೆಂತ್ಯೆ ಹಿಟ್ಟು, ವಿಶೇಷ ಚಟ್ನಿಪುಡಿ.
– ಸಮಾರಂಭಗಳಿಗೆ ವಿಶೇಷ ಹೋಳಿಗೆ, ಚಕ್ಕುಲಿ. ಎಲ್ಲಿದೆ?
# 3, ಬಿಬಿಎಂಪಿ ಕಚೇರಿ ಎದುರು, ಹೆಸರಘಟ್ಟ ರಸ್ತೆ
– ಜಾಲತಾಣ: Sandigeatdoors.com
– ಮೊಬೈಲ್: 9945782127/9066603302