Advertisement
ಜೂನ್‌ನಿಂದ ಆಗಸ್ಟ್ ವರೆಗೆ ಮೀನು ಸಂತಾನೋತ್ಪತ್ತಿ ಅವಧಿ ಎಂಬ ಕಾರಣಕ್ಕೆ ಸಿಆರ್‌ಝಡ್‌ನಲ್ಲಿ ಮರಳುಗಾರಿಕೆಗೆ ನಿಷೇಧ ವಿಧಿಸ ಲಾಗುತ್ತಿದೆ. ಯಾವುದೇ ಅಡೆತಡೆಗಳು ಎದುರಾಗದಿದ್ದರೆ ಆಗಸ್ಟ್ ಪ್ರಥಮ ವಾರದಿಂದ ಮರಳುಗಾರಿಕೆ ಆರಂಭ ಗೊಳ್ಳಲಿದೆ. ಇದೇ ವೇಳೆ ನಾನ್‌ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಮುಂದುವರಿಯುವ ಸಾಧ್ಯತೆಗಳಿವೆ.
Related Articles
Advertisement
ಕಳೆದ ವರ್ಷ ಜೂನ್‌ನಿಂದ ಆಗಸ್ಟ್ 15ರವರೆಗೆ ಸಿಆರ್‌ಝಡ್ ಮರಳುಗಾರಿಕೆಗೆ ನಿಷೇಧ ಇತ್ತು. ಇದು ಮುಕ್ತಾಯಗೊಂಡ ಬಳಿಕವೂ ಸರ್ವೆ ಮತ್ತು ದಿಬ್ಬಗಳ ಗುರುತಿಸುವಿಕೆ ಹಾಗೂ ಪರಿಸರ ಇಲಾಖೆಯ ಅನುಮತಿ ಪ್ರಕ್ರಿಯೆ ಗಳಿಂದ ಅನುಮತಿ ಲಭಿಸದ ಕಾರಣ ತೀವ್ರ ಮರಳಿನ ಸಮಸ್ಯೆ ಎದುರಾಗಿತ್ತು. ನಾನ್‌ಸಿಆರ್‌ಝಡ್ ವಲಯದಲ್ಲೂ ತಾಂತ್ರಿಕ ಕಾರಣಗಳಿಂದ ಮರಳು ಗಾರಿಕೆ ಸ್ಥಗಿತಗೊಂಡಿತ್ತು. ಅನುಮತಿ ಪ್ರಕ್ರಿಯೆ ಪೂರ್ಣಗೊಂಡು ನವೆಂಬರ್ ಅಂತ್ಯದ ವೇಳೆಗೆ ಮರಳುಗಾರಿಕೆ ಆರಂಭಗೊಂಡಿದ್ದರೂ ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾದದ್ದು ಜನವರಿಯಲ್ಲಿ. ಈಗ ಸುಮಾರು 5 ತಿಂಗಳ ಕಾಲ ಈ ವಲಯದಲ್ಲಿ ಮರಳುಗಾರಿಕೆ ನಡೆದಿದೆ.
ಸಿಆರ್‌ಝಡ್ ವಲಯದಲ್ಲಿ ನಡೆಸಿದ ಬೇಥಮೆಟ್ರಿಕ್ ಸರ್ವೇಯಲ್ಲಿ ನೇತ್ರಾವತಿಯಲ್ಲಿ ಒಟ್ಟು 13 ಬ್ಲಾಕ್‌ಗಳಲ್ಲಿ 4,30,357 ಟನ್ ಮರಳು ಲಭ್ಯತೆ ಗುರುತಿಸಲಾಗಿತ್ತು. ಇದು 43,027 ಲಾರಿ ಲೋಡ್‌ಗಳಷ್ಟಾಗು ತ್ತದೆ. ಫಲ್ಗುಣಿಯಲ್ಲಿ ಒಟ್ಟು 9 ಬ್ಲಾಕ್‌ಗಳಲ್ಲಿ 4,20,270 ಟನ್ ಮರಳು ಲಭ್ಯತೆ ಗುರುತಿಸಲಾಗಿತ್ತು. ಇದರಲ್ಲಿ ಇದು 42,027 ಲಾರಿ ಲೋಡ್ ಎಂದು ಅಂದಾಜಿಸಲಾಗಿತ್ತು. ಸುಮಾರು 100 ಮಂದಿ ಅರ್ಹ ಗುತ್ತಿಗೆ ದಾರಿಗೆ ಮರಳು ಗಾರಿಕೆಗೆ ಅನುಮತಿ ನೀಡಲಾಗಿತ್ತು.
ನಾನ್‌ಸಿಆರ್‌ಝಡ್ ವಲಯ
ನಾನ್ ಸಿಆರ್‌ಝಡ್ ವಲಯ ದಲ್ಲಿ ಮರಳುಗಾರಿಕೆ ಗುತ್ತಿಗೆ ಅನುಮೋದನೆಗೆ ಸಾಂಪ್ರದಾಯಿಕ ಮರಳುಗಾರಿಕೆಯಲ್ಲಿ ಹಿಂದೆ ಇದ್ದ ನಿಯಮಗಳನ್ನು ಸಡಿಲಗೊಳಿಸಿ ಪರವಾನಿಗೆ ಅವಧಿಯನ್ನು ಐದು ವರ್ಷಗಳಿಗೆ ವಿಸ್ತರಿಸಲಾಗಿದೆ. ಇದರಿಂದ ಈ ವಲಯದಲ್ಲಿ ಮರಳುಗಾರಿಕೆಗೆ ಎದುರಾಗಿದ್ದ ಸಮಸ್ಯೆ ನಿವಾರಣೆಯಾಗಿದೆ.