ನಗರದ ಭಾರತೀಯ ವಿದ್ಯಾ ಭವನದ ಸಭಾಂಗಣದಲ್ಲಿ ಶನಿವಾರ ಜರಗಿದ ಸಮಾರಂಭದಲ್ಲಿ ಜನಪದ ವಿದ್ವಾಂಸ ಹಾಗೂ ವಿಶ್ರಾಂತ ಕುಲಪತಿ ಡಾ| ಬಿ. ಎ. ವಿವೇಕ್ ರೈ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಪ್ರಶಸ್ತಿಗೆ ಆಯ್ಕೆಯಾಗಿದ್ದ ಪ್ರೊ| ಪುರುಷೋತ್ತಮ ಬಿಳಿಮಲೆ ಅವರು ಅನಾರೋಗ್ಯದ
ಕಾರಣದಿಂದ ಗೈರಾಗಿದ್ದರು.
Advertisement
ಸಾಹಿತ್ಯದಲ್ಲಿ ನೈತಿಕತೆಯ ಸ್ಪಷ್ಟತೆವಿಶ್ರಾಂತ ಕುಲಪತಿ ಡಾ| ಬಿ. ಎ.ವಿವೇಕ್ ರೈ ಮಾತನಾಡಿ, ಪುರಾಣ, ಇತಿಹಾಸ ಹಾಗೂ ವರ್ತಮಾನವನ್ನು ಒಂದುಗೂಡಿಸಿ, ಪೂರ್ವ ಹಾಗೂ ಪಶ್ಚಿಮದ ಇತಿಹಾಸವನ್ನು ಮುಖಾ
ಮುಖೀ ಮಾಡಿ ಸಣ್ಣಕತೆ, ಕಾದಂಬರಿ, ಸಾಹಿತ್ಯಗಳನ್ನು ಬರೆದಿರುವ ಮಾಸ್ತಿಯವರು ಇಂದಿಗೂ ಪ್ರಸ್ತುತರಾಗಿದ್ದಾರೆ. ಕಾಲ, ದೇಶ ಮತ್ತು ಪರಿಸರದ ಮೂರು ಪರಿ ಮಾಣವನ್ನು ಒಟ್ಟಿಗೆ ತಂದಿದ್ದರು. ಮೌಲ್ಯ ವ್ಯವಸ್ಥೆಯ ಚಿಂತನೆ, ನ್ಯಾಯದ ಪರಿಕಲ್ಪನೆ, ಹೆಣ್ಣು-ಗಂಡಿನ ಸಂಬಂಧದ ಸಂಕೀರ್ಣತೆ, ನೈತಿಕತೆಯ ಸೂಕ್ಷ್ಮ ಅವಲೋಕನವನ್ನು ಮಾಸ್ತಿಯವರು ಬರವಣಿಗೆಯಲ್ಲಿ ಮಾಡಿದ್ದರು ಎಂದರು.
ಐಪಿಸಿ ಸೆಕ್ಷನ್ ಮೂಲಕವೇ ತಪ್ಪಿತಸ್ಥ ಹೌದು ಅಥವಾ ಅಲ್ಲ ಎನ್ನುವ ಬಹಳ ಸಂಕುಚಿತವಾದ ವ್ಯವಸ್ಥೆ ನಮ್ಮಲ್ಲಿದೆ. ನೈತಿಕ ನೆಲೆಗಟ್ಟಿನಲ್ಲಿ ನ್ಯಾಯ
ದಾನ ಮಾಡುವ ಚಿಂತನೆಯನ್ನು ಕಳೆದುಕೊಂಡಿದ್ದೇವೆ. ನ್ಯಾಯಾ ಧೀಶರು, ನ್ಯಾಯವಾದಿ ಗಳು ಮಾಸ್ತಿಯವರ ಕಥೆಗಳು ಓದಬೇಕು. ನ್ಯಾಯದಾನಕ್ಕೆ ಇವು ಪೂರಕವಾಗಿವೆ ಎಂದು ಪ್ರೊ| ರೈ ಹೇಳಿದರು.
ಮಾಸ್ತಿ ಟ್ರಸ್ಟ್ ಅಧ್ಯಕ್ಷ ಮಾವಿನಕೆರೆ ರಂಗನಾಥ್, ಶಿಕ್ಷಣ ತಜ್ಞ ಡಾ| ಗುರುರಾಜ ಕರಜಗಿ ಉಪಸ್ಥಿತರಿದ್ದರು.