Advertisement
ಕುಂದಾಪುರ ತಾಲೂಕು ದೇವಲ್ಕುಂದ ಸಮೀಪದ ಬಾಳಿಕೆರೆಯ ನಿವಾಸಿಯಾದ ಸಂಧ್ಯಾ ಕಿರಣ್ ಕುಂದರ್ ಮತ್ತು ಸರಸ್ವತಿ ದಂಪತಿಯ ಪುತ್ರಿ. ಪ್ರಸ್ತುತ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಕಾಂ ಅಭ್ಯಾಸಿ.ಈಗಾಗಲೇ ಮಹಿಳಾ ಕ್ರಿಕೆಟ್‌ನಲ್ಲಿ ಮಂಗಳೂರು ವಿವಿ ಮಟ್ಟದಲ್ಲಿ ತಂಡವನ್ನು 4ನೇ ಬಾರಿ ಪ್ರತಿನಿಧಿಸಿ ಉತ್ತಮ ಬೌಲರ್ ಪ್ರಶಸ್ತಿಗೆ 2 ಬಾರಿ ಭಾಜನರಾಗಿದ್ದಾರೆ. ಮಂಗಳೂರು ವಿವಿ ದಕ್ಷಿಣ ವಲಯ ಕ್ರಿಕೆಟ್ ಪಂದ್ಯಾವಳಿ, ಸತ್ಯಭಾಮ ಯುನಿವರ್ಸಿಟಿ ಚೆನ್ನೈ, ದಕ್ಷಿಣ ವಲಯ- ಬೆಂಗಳೂರು ಯುನಿವರ್ಸಿಟಿ ಬೆಂಗಳೂರಿನಲ್ಲಿ, ದಕ್ಷಿಣ ವಲಯ- ಆಂಧ್ರಪ್ರದೇಶದ ಆಂಧಾÅ ಯೂನಿವರ್ಸಿಟಿ ವಿಶಾಖಪಟ್ಟಣದಲ್ಲಿ ಆಡಿದ್ದ ಸಂಧ್ಯಾ, ಕಳೆದ ಡಿಸೆಂಬರ್‌ನಲ್ಲಿ ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ವಿವಿ ಮಟ್ಟದ ಕ್ರಿಕೆಟ್ ಪಂದ್ಯಾಟದಲ್ಲಿ ಮಂಗಳೂರು ವಿ.ವಿ.ಯನ್ನು ಪ್ರತಿನಿ ಧಿಸಿದ್ದರು. ವಾಲಿಬಾಲ್‌ನ ಸರ್ವಾಂಗೀಣ ಆಟಗಾರ್ತಿಯಾಗಿ ಹೊರಹೊಮ್ಮಿರುವ ಇವರು, ನೆಲಮಂಗಲದಲ್ಲಿ ನಡೆದ ರಾಜ್ಯ ಮಟ್ಟದ ಗ್ರಾಮೀಣ ವಾಲಿಬಾಲ್ ಸ್ಪರ್ಧೆಗೆ ಆಯ್ಕೆಗೊಂಡಿದ್ದರು. ರಾಜ್ಯ, ವಿಭಾಗ ಮಟ್ಟಕ್ಕೆ ಆಯ್ಕೆಯಾಗಿ ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ನಡೆದ ಪಂದ್ಯದಲ್ಲಿ 2ನೇ ಬಹುಮಾನ, ಬಾಗಲಕೋಟದಲ್ಲಿ ನಡೆದ ರಾಜ್ಯ ಮಟ್ಟದ ಪಂದ್ಯಾಟದಲ್ಲಿ 2ನೇ ಬಹುಮಾನ, ಉಡುಪಿಯಲ್ಲಿ ನಡೆದ ರಾಜ್ಯ ಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾಟ, ಬೆಳಗಾವಿಯಲ್ಲಿ ನಡೆದ ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟ, ರಾಜ್ಯ ಮಹಿಳಾ ತಂಡವನ್ನು 3 ಬಾರಿ ಪ್ರತಿನಿಧಿ ಸಿ, ಪಿವೈಕೆಕೆಎ ವಾಲಿಬಾಲ್ ತಂಡ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸಂಧ್ಯಾ ಅವರ ಸಾಧನೆಯನ್ನು ಕಾಲೇಜು ಗೌರವಿಸಿ ಗುರುತಿಸಿತಲ್ಲದೆ ಮೊಗವೀರ ಮಹಾಜನ ಸಂಘ ಬಗ್ವಾಡಿ ಹೋಬಳಿ ವತಿಯಿಂದ ಜಾತ್ರೆಯಲ್ಲಿ ಸಮ್ಮಾನಿಸಿತು. ಇದಲ್ಲದೆ ಹಲವಾರು ಅಭಿನಂದನೆಗಳಿಗೆ ಪಾತ್ರರಾಗಿ ಮೊಗವೀರ ಯುವ ಸಂಘಟನೆಯ ಸದಸ್ಯೆಯಾಗಿ ಸಂಘಟನ ಚಟುವಟಿಕೆಯಲ್ಲೂ ತೊಡಗಿರುವುದು ವಿಶೇಷ.
Related Articles
Advertisement