Advertisement
ಆರಂಭದಲ್ಲಿ ಕೇವಲ ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದ್ದ ಸಂದೇಶ್, ಈಗ ಎಲ್ಲರೂ ಬಳಸಬಹುದಾಗಿದೆ. ಈ ಅಪ್ಲಿಕೇಶನ್ ಆತ್ಮನಿರ್ಭರ ಭಾರತ್ (ಸ್ವಾವಲಂಬಿ ಭಾರತ) ಉಪಕ್ರಮಕ್ಕೂ ಉತ್ತೇಜನ ನೀಡುತ್ತದೆ.
Related Articles
Advertisement
ಈ ಮೆಸೇಜಿಂಗ್ ಅಪ್ಲಿಕೇಶನ್ ನಲ್ಲಿ 5೦೦ ಎಂಬಿ ವರೆಗಿನ ವೀಡಿಯೊಗಳು ಅಥವಾ ಫೋಟೋಗಳನ್ನು ನೀವು ಇತರರೊಂದಿಗೆ ಹಂಚಿಕೊಳ್ಳಬಹುದು. ವಾಟ್ಸಾಪ್ ನಲ್ಲಾದರೆ 16 ಎಂಬಿ ವರೆಗಿನ ವೀಡಿಯೋ ಹಾಗೂ 1೦೦ ಎಂಬಿ ಗಾತ್ರದ ಡಾಕ್ಯುಮೆಂಟ್ ಗಳನ್ನು ಮಾತ್ರ ಹಂಚಿಕೊಳ್ಳಬಹುದಾಗಿದೆ.
ಟ್ವಿಟ್ಟರ್, ಫೇಸ್ ಬುಕ್, ಇನ್ಸ್ಟಾ ಗ್ರಾಂನಲ್ಲಿರುವಂತೆ, ಸಂದೇಶ್ ನಲ್ಲಿ ಕೆಲವು ಪರಿಶೀಲಿಸಿದ (ಅಫೀಶಿಯಲ್) ಖಾತೆಗಳು ಇವೆ. ಸರ್ಕಾರಿ ಅಧಿಕಾರರಿಗಳ ಖಾತೆಗಳನ್ನು ಈಗಾಗಲೇ ಈ ಪಟ್ಟಿಗೆ ಸೇರಿಸಲಾಗಿದೆ.
ಈ ಅಪ್ಲಿಕೇಶನ್ ನಲ್ಲಿ ಇಷ್ಟವಾಗುವ ಮತ್ತೊಂದು ವೈಶಿಷ್ಟ್ಯವೆಂದರೆ, ಚಾಟ್ ಗಳನ್ನು ಬ್ಯಾಕ್ ಅಪ್ ಮಾಡಲು ಯಾವುದೇ ಕ್ಲೌಡ್ ಸೇವೆಯನ್ನು ಆಯ್ಕೆ ಮಾಡಬಹುದು. ವಾಟ್ಸಾಪ್ ನಲ್ಲಾದರೆ, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಡ್ರೈವ್ ಹಾಗೂ ಐಫೋನ್ ನ ಐಕ್ಲೌಡ್ ನಲ್ಲಿ ಮಾತ್ರ ಚಾಟ್ ಗಳನ್ನು ಬ್ಯಾಕ್ ಅಪ್ ಮಾಡಬಹುದು.
‘ಸಂದೇಶ್’ ನಲ್ಲಿರುವ ಪ್ರಮುಖ ಫೀಚರ್ ಎಂದರೆ, ನೀವು ಯಾವುದೇ ಸಂದೇಶವನ್ನು ಪಿನ್ ಮಾಡಿ ಇಡಬಹುದು. ಒಂದು ಚಾಟ್‌ನಲ್ಲಿ ಎಷ್ಟೇ ಸಂದೇಶಗಳು ಇದ್ದರೂ, ಮುಖ್ಯ ಸಂದೇಶವನ್ನು ಪಿನ್ ಮಾಡಿಡಬಹುದು. ವಾಟ್ಸಾಪ್ ನಲ್ಲಿರುವ ಸ್ಟಾರ್ ಮೆಸೇಜ್ ಫೀಚರ್ ನಂತೆ ಇದು ಕಾಣುತ್ತದೆ.
ಆದರೆ ಇದರಲ್ಲಿ ಮತ್ತೊಂದು ಹಿನ್ನೆಡೆಯೆಂದರೆ, ನಾವು ಕಳುಹಿಸಿರುವ ಸಂದೇಶವನ್ನು ಅವರು ಎಷ್ಟು ಗಂಟೆಗೆ ಓದಿದ್ದಾರೆ ಎಂಬುವುದನ್ನು ತೋರಿಸುವುದಿಲ್ಲ. ವಾಟ್ಸಾಪ್ ನಲ್ಲಾದರೆ ಡೆಲಿವರ್ಡ್ ಹಾಗೂ ಓದಿದ ಸಮಯ ಗೊತ್ತಾಗುತ್ತದೆ.
ಮೆಸೇಜ್ ಕಳುಹಿಸುವಾಗ ಸಾಮಾನ್ಯ ಸಂದೇಶ ಹೊರತುಪಡಿಸಿ, ಅದಕ್ಕೆ ಟ್ಯಾಗ್ ಗಳನ್ನು ಹಾಕಬಹುದು. ಕಾನ್ಫಿಡೆನ್ಶಿಯಲ್ (ಇದು ನಮ್ಮೊಳಗೆ ಇರಬೇಕು), ಪ್ರಿಯೋರಿಟಿ (ಆದ್ಯತೆ) ಹಾಗೂ ಆಟೋ ಡಿಲೀಟ್ ಫೀಚರ್. ನಿಮ್ಮ ನೆಚ್ಚಿನ ಚಾಟ್ ಗಳನ್ನು ಫೇವರೈಟ್ ಎಂದೂ ಟ್ಯಾಗ್ ಮಾಡಬಹುದು. ಅವುಗಳಲ್ಲದೆ ಸಾಮಾನ್ಯ ಫೀಚರ್‌ಗಳಾದ ಫಾವರ್ಡ್ ಮೆಸೇಜ್, ಆರ್ಕೈವ್ ಚಾಟ್, ಗುಂಪು ರಚನೆ ಇತಯಾದಿಗಳು ಸಂದೇಶ್ ಆ್ಯಪ್ ನಲ್ಲಿ ಲಭ್ಯ.
ಸಂದೇಶ್ ಆ್ಯಪ್ ನಲ್ಲಿ ಇನ್ ಬಿಲ್ಟ್ ಚಾಟ್ ಬಾಟ್ ಇದೆ. ಅದರಲ್ಲಿ ನಿಮ್ಮೂರಿನ ಹವಾಮಾನ ವರದಿ ಹಾಗೂ ಪಿಐಬಿ ಸಂಸ್ಥೆಯ ಮೂಲಕ ಸುದ್ದಿಗಳನ್ನು ಪಡೆಯಬಹುದು. ಈಗಾಗಲೇ ಪ್ಲೇ ಸ್ಟೋರ್ ನಲ್ಲಿ ಲಕ್ಷಾಂತರ ಡೌನ್ಲೋಡ್ ಗಳು ಆದರೂ, ಸಕ್ರಿಯ ಬಳಕೆದಾರರು ಬಹಳ ಕಡಿಮಯೇ ಇದ್ದಾರೆ. ವಾಟ್ಸಾಪ್‌ಗೆ ಪರ್ಯಾಯ ಚಾಟ್ ಅಪ್ಲಿಕೇಶನ್ ನಂತೆ ಕಂಡರೂ, ಜನರ ನಡುವೆಯೇ ಇದನ್ನು ಬಳಸಬೇಕೆಂಬ ದೊಡ್ಡ ಮಟ್ಟದ ಅಭಿಪ್ರಾಯ ಹಾಗೂ ಅಲೆ ಏಳದಿದ್ದರೆ, ವಾಟ್ಸಾಪ್ ಗೆ ಟಕ್ಕರ್ ಕೊಡಲು ಸಫಲವಾಗುವುದು ಕಷ್ಟಸಾಧ್ಯ!