Advertisement
ಸಂದೀಪ್ ಶೆಟ್ಟಿಯ ಪಾರ್ಥಿವ ಶರೀರ ಮಂಗಳವಾರ ಕಾಶ್ಮೀರದಿಂದ ವಿಮಾನದ ಮೂಲಕ ಬೆಂಗಳೂರಿಗೆ ಬಂದು ರಾತ್ರಿ 12.50ರ ವೇಳೆಗೆ ಹಾಸನ ಜಿಲ್ಲೆಗೆ ಆಗಮಿಸಿತು. ತಡರಾತ್ರಿಯಲ್ಲಿ ಆಗಮಿಸಿದ ಯೋಧನ ಪಾರ್ಥಿವ ಶರೀರವನ್ನು ಹಾಸನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ ಶೈತ್ಯಾಗಾರದಲ್ಲಿ ಇರಿಸಲಾಗಿತ್ತು. ಬುಧವಾರ ಬೆಳಗ್ಗೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಅಪರಾಹ್ನ 1.30ರ ವೇಳೆಗೆ ಯೋಧನ ಸ್ವಗ್ರಾಮ ದೇವಿಹಳ್ಳಿಗೆ ತರಲಾಯಿತು. ಮೃತನ ಮನೆಯ ಬಳಿ ಗೌರವ ಸಲ್ಲಿಸಿ ಅನಂತರ ಸಂದೀಪ್ ಶೆಟ್ಟಿ ಅವರ ಜಮೀನಿನ ಬಳಿ ಅರ್ಧ ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ವೇಳೆ ಅಲ್ಲಿ ಸೇರಿದ್ದ ಐದು ಸಾವಿರಕ್ಕೂ ಹೆಚ್ಚು ಜನರು “ಸಂದೀಪ್ ಶೆಟ್ಟಿ ಅಮರ್ ರಹೇ…’ ಘೋಷಣೆ ಕೂಗಿ ಗೌರವ ಸಲ್ಲಿಸಿದರು. ಬಳಿಕ ಸೇನಾ ಸಿಬಂದಿ ಸೇನಾ ಪಡೆ ಪರವಾಗಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಅಂತಿಮ ಗೌರವ ವಂದನೆ ಸಲ್ಲಿಸಿದರು. ಅನಂತರ ಕುಟುಂಬದ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. Advertisement
ಯೋಧ ಸಂದೀಪ್ ಶೆಟ್ಟಿ ಅಂತ್ಯಕ್ರಿಯೆ
03:45 AM Feb 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.