Advertisement
ಕಳೆದ ವರ್ಷ ಮಡಿಕೇರಿ ಭಾಗದಲ್ಲಿ ಭಾರೀ ಮಳೆ ಸಂಭವಿಸಿದ ಪರಿಣಾಮ ಕಲ್ಮಕಾರು ಹೊಳೆಯಲ್ಲಿ ನೆರೆ ಬಂದು ಕಲ್ಮಕಾರಿನಿಂದ ಗುಳಿಕಾನ, ಬೈಲು ಭಾಗಕ್ಕೆ ಸಂಪರ್ಕಿಸುವ ಸಂಪಡ್ಕ ಸೇತುವೆಗೆ ಹಾನಿ ಗೊಳಗಾಗಿತ್ತು. ಸೇತುವೆಯ ಒಂದು ಭಾಗ ದಲ್ಲಿ ಹಾಕಿದ್ದ ಮಣ್ಣಿನ ತಡೆಗೋಡೆ ನೀರು ಪಾಲಾಗಿ ಸಂಪರ್ಕ ಕಡಿತಗೊಂಡಿತ್ತು.
ಈ ಸೇತುವೆ ಮೂಲಕ ಗುಳಿಕಾನ, ಬೈಲು ಭಾಗದ ಸುಮಾರು 150ಕ್ಕೂ ಅಧಿಕ ಮನೆಗಳು ಸಂಪರ್ಕ ಪಡೆ ಯುತ್ತಿವೆ. ಅಂದಿನ ಹಾನಿಗೆ ಎರಡು ಮೋರಿ ಅಳವಡಿಸಿ ತಾತ್ಕಾಲಿಕವಾಗಿ ಮರಳಿನ ಗೋಣಿಚೀಲಗಳನ್ನು ಜೋಡಿಸಿ ಸೇತುವೆಗೆ ರಸ್ತೆ ಸಂಪರ್ಕ ಕಲ್ಪಿಸಿ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಶಾಶ್ವತ ಪರಿಹಾರ ಮಾಡುವ ಬಗ್ಗೆ ಅಂದು ಜನಪ್ರತಿನಿಧಿಗಳು, ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಘಟನೆ ನಡೆದ ಬಳಿಕ ತಾತ್ಕಾಲಿಕ ಪರಿಹಾರ ನಡೆದಿದೆಯೇ ವಿನಃ ಶಾಶ್ವತ ಪರಿಹಾರ ನಡೆಯಲೇ ಇಲ್ಲ. ಅಳವಡಿಸಿರುವ ಮರಳಿನ ಚೀಲಗಳು ಹರಿದು ಹೋಗಲೂ ಆರಂಭವಾಗಿದೆ. ಕಳೆದ ವರ್ಷ ಘಟನೆ ನಡೆದ ಬಳಿಕ ಸಚಿವರು, ಜಿಲ್ಲೆಯ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಸ್ಥಳೀಯರ ಅಹವಾಲು ಸ್ವೀಕರಿಸಿ ಹೋಗಿದ್ದರು. ಆದರೆ ಬಳಿಕ ಕೆಲವೆಡೆ ಸಣ್ಣ ಮೊತ್ತದ ಕೆಲಸ ನಡೆದಿದ್ದರೆ, ಇಂತಹ ಕಡೆಗಳಲ್ಲಿ ಶಾಶ್ವತ ಪರಿಹಾರ ಕಾಮಗಾರಿ ನಡೆಯಲೇ ಇಲ್ಲ.
Related Articles
Advertisement