Advertisement

Mundgod: ಗಂಧದ ಮರಗಳನ್ನು ಕದ್ದು ಪರಾರಿಯಾದ ಮರಗಳ್ಳರು  

12:44 PM Oct 07, 2023 | Team Udayavani |

ಮುಂಡಗೋಡ: ತಾಲೂಕು ಸರಕಾರಿ ಆಸ್ಪತ್ರೆಯ ಆರೋಗ್ಯಾಧಿಕಾರಿ ಕಾರ್ಯಾಲಯದ ಪಕ್ಕದಲ್ಲಿದ್ದ ಎರಡು ಗಂಧದ ಮರಗಳನ್ನು ಮರಗಳ್ಳರು   ಕಡಿದು ತುಂಡು ಮಾಡಿ ಟೊಂಗೆಗಳನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾದ ಘಟನೆ ಆ.7ರ ಶನಿವಾರ ನಡೆದಿದೆ.

Advertisement

ಆರೋಗ್ಯಧಿಕಾರಿ ಕಾರ್ಯಾಲಯದ ಪಕ್ಕದಲ್ಲಿ ಒಂದು ಮತ್ತು ವಸತಿ ಗೃಹದಲ್ಲಿದ್ದ ಒಂದು ಗಂಧದ ಮರ ಕಡಿದಿದ್ದಾರೆ. ಅವು ಸುಮಾರು 12-15 ವರ್ಷದ ಮರಗಳಾಗಿದ್ದವು. ಈ ಘಟನೆಯ ಕುರಿತು ಶನಿವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ಜನ ವಸತಿಯಲ್ಲಿದ್ದ ಎರಡು ಮರಗಳನ್ನು ಮರಗಳ್ಳರು ಕಡಿದು ಟೊಂಗೆಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದು ಸಂಶಯಗೆ ಎಡೆಮಾಡಿಕೊಟ್ಟಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಮುಂಡಗೋಡ ವಲಯ ಅರಣ್ಯಧಿಕಾರಿ ವಾಗೀಶ ಮಾತನಾಡಿ, ತಾಲೂಕು ಆಸ್ಪತ್ರೆಯ ಆವರಣದಲ್ಲಿದ್ದ ಗಂಧದ ಮರಗಳನ್ನು ಕಡಿದಿರುವ ಬಗ್ಗೆ ಇಂದು ಬೆಳಿಗ್ಗೆ ಮಾಹಿತಿ ತಿಳಿಯಿತು. ತಕ್ಷಣವೇ ನಮ್ಮ ಸಿಬ್ಬಂದಿಗಳನ್ನು ಸ್ಥಳಕ್ಕೆ ಕಳುಹಿಸಿ ಮಾಹಿತಿ ಕಲೆಹಾಕಿದ್ದಾರೆ. ಅವು 12-15 ವರ್ಷದ ಗಂಧದ ಮರವಾಗಿತ್ತು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ.  ಅಕ್ಕ-ಪಕ್ಕದ ಸಿಸಿ ಕ್ಯಾಮೆರಾಗಳ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next