Advertisement
ಭದ್ರತೆಯಲ್ಲಿರಿಸಿದ್ದ ಗೋದಾಮಿಗೆ ಕನ್ನ ಹಾಕಿರುವವರು ಹಲವು ದಿನಗಳಿಂದ ಹೊಂಚು ಹಾಕಿ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಈ ಹಿಂದೆಯೂ ಇಲ್ಲಿಂದ ಕಳವು ನಡೆ ದಿತ್ತು. ಶ್ರೀಗಂಧ ಜಾಲ ಸಕ್ರಿಯವಾಗಿದ್ದ 1998ರ ಕಾಲ ಘಟ್ಟದಲ್ಲಿ ಸರಿ ಸುಮಾರು 2 ಟನ್ ಗೂ ಅಧಿಕ ಶ್ರೀಗಂಧ ಕಳವಾಗಿತ್ತು. ಆ ಬಳಿ ಕವೂ ಕಳವು ನಡೆದಿದ್ದು, ಈಗ ನಡೆದಿರುವುದು 5ನೇ ಪ್ರಕರಣ ಎನ್ನಲಾಗಿದೆ. ಆದರೆ ಯಾವ ಪ್ರಕರಣಕ್ಕೂ ಸಂಬಂಧಿಸಿ ಆರೋಪಿಗಳ ಪತ್ತೆಯಾಗಿರಲಿಲ್ಲ. ಕಳವಾಗಿದ್ದ ಗಂಧದ ತುಂಡುಗಳಲ್ಲಿ ಕೆಲವನ್ನು ಪತ್ತೆ ಹಚ್ಚಲಾಗಿತ್ತು. ಅನುಮಾನಾಸ್ಪದವಾಗಿ ಕಂಡು ಬಂದಿದ್ದ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ಪ್ರಕರಣ ಹಾಗಾಗದಿರಲಿ ಎಂಬುದು ಸಾರ್ವಜನಿಕರ ಆಶಯ. ತನಿಖೆಗೆ ಸೂಚಿಸಲಾಗಿದೆ: ಅರಣ್ಯಾಧಿಕಾರಿ
ಪ್ರಕರಣದ ತನಿಖೆ ಕುರಿತು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಗೋದಾಮಿನಲ್ಲಿ 403 ಕೆ.ಜಿ. ಇತ್ತು. ಸದ್ಯ ಕಳವಾಗಿರುವುದು ಹೊರತುಪಡಿಸಿ ಇನ್ನು 55 ಕೆ.ಜಿ.ಯಷ್ಟು ಶ್ರೀಗಂಧ ಗೋದಾಮಿನಲ್ಲಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿ¨ªರೆ.