Advertisement

ಬೆಂಗಳೂರು: ಇಂದು ಆಚರಿಸಲಾಗುತ್ತಿರುವ ರಾಷ್ಟ್ರೀಯ ಹಿಂದಿ ದಿವಸ್ ವಿರುದ್ಧ ಕನ್ನಡ ಚಿತ್ರರಂಗದ ನಟರು ಹಾಗೂ ನಿರ್ದೇಶಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ನಟ ಡಾಲಿ ಧನಂಜಯ್ ಟ್ವೀಟ್ ಮಾಡಿ, ಎಲ್ಲಾ ಭಾಷೆ ಗೌರವಿಸುತ್ತೇವೆ. ಆದರೆ, ಯಾವುದೇ ಭಾಷೆಯ ಹೇರಿಕೆ ಸಲ್ಲದು. ಹಿಂದಿಯನ್ನಾಗಲೀ, ಇಂಗ್ಲಿಷ್ ನ್ನಾಗಲೀ ಎಲ್ಲರೂ ಕಲಿಯಬೇಕು ಅನ್ನುವಂಥ ಅವಿವೇಕ ಮತ್ತೊಂದಿಲ್ಲ. ಎಲ್ಲರೂ ಇಂಗ್ಲಿಷ್ ಮತ್ತು ಹಿಂದಿ ಕಲಿಯಬೇಕೆನ್ನುವುದು ದಬ್ಬಾಳಿಕೆಯ ಸೂಚನೆಯಲ್ಲದೆ ಮತ್ತೇನು? ಎಂದು ಧನಂಜಯ್ ಪ್ರಶ್ನಿಸಿದ್ದಾರೆ.

ಇನ್ನು ಹಿಂದಿ ಹೇರಿಕೆಯನ್ನು ವಿರೋಧಿಸಿರುವ ನಿರ್ದೇಶಕ ಸಿಂಪಲ್ ಸುನಿ, ಭಾರತದ ವೈಶಿಷ್ಟ್ಯತೆಯೇ “ವಿವಿಧತೆಯಲ್ಲಿ ಏಕತೆ” ಹಲವಾರು ವೇಶ,,ಭಾಷೆ, ಭಕ್ಷ್ಯಭೋಜನ, ಆಟನೋಟ, ಸಂಸ್ಕೃತಿ, ಸಂಪ್ರದಾಯ ಇದ್ದರೂ ಒಂದಾಗಿರುವ ಹೆಗ್ಗಳಿಕೆ ನಮ್ಮದು. ಹೀಗಿರುವಾಗ ಒಂದೇ ಭಾಷೆಯನ್ನು ಹೇರುವುದು ತಪ್ಪು ಎನ್ನುವುದು ನನ್ನ ಅಭಿಪ್ರಾಯ. ಅವರವರ ರಾಜ್ಯದಲ್ಲಿ ಆ ಮಣ್ಣಿನ ಮಾತೃಭಾಷೆಗೆ ಪ್ರಥಮ ಸ್ಥಾನವಿರಬೇಕು ಎಂದು ಸುನಿ ಆಗ್ರಹಿಸಿದ್ದಾರೆ.

Advertisement

ಇನ್ನು ಹಿಂದಿ ದಿವಸ್ ವಿರುದ್ಧ ಕರ್ನಾಟಕದಲ್ಲಿಂದು ಕರಾಳ ದಿನ ಆಚರಿಸಲಾಗುತ್ತಿದೆ. ನಿನ್ನೆಯಷ್ಟೆ ಮಾಜಿ ಸಿಎಂ ಹಾಗೂ ಜೆಡಿಎಸ್ ಮುಖಂಡ ಹೆಚ್.ಡಿ. ಕುಮಾರ ಸ್ವಾಮಿ ಅವರೂ ಕೂಡ ಹಿಂದಿ ಹೇರಿಕೆ ವಿರುದ್ಧ ಗುಡುಗಿದ್ದರು. ಒತ್ತಾಯದಿಂದ ಯಾವುದೇ ಭಾಷೆ ಹೇರುವುದು ತಪ್ಪು, ಇದರ ಪರಿಣಾಮ ನೀವು ಎದುರಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಇನ್ನು ಟ್ವಿಟರ್ ನಲ್ಲಿಯೂ ಹಿಂದಿ ಹೇರಿಕೆ ವಿರುದ್ಧ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಸಾಕಷ್ಟು ಜನರ ಬೆಂಭಲ ಕೂಡ ವ್ಯಕ್ತವಾಗುತ್ತಿದೆ. ಬೆಂಗಳೂರಿನಲ್ಲಿಂದು ಹಲವು ಕನ್ನಡಪರ ಸಂಘಟನೆಗಳು ಹಿಂದಿ ದಿವಸ್ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next