Advertisement

ʼಸಪ್ತ ಸಾಗರದಾಚೆʼಯ ಪ್ರೇಮ್‌ ಕಹಾನಿಗೆ ಫಿದಾ ಆದ ಪ್ರೇಕ್ಷಕರು: 1st Day ಗಳಿಸಿದ್ದಷ್ಟು?

03:56 PM Nov 18, 2023 | Team Udayavani |

ಬೆಂಗಳೂರು: ಸಿಂಪಲ್‌ ಸ್ಟಾರ್‌ ರಕ್ಷಿತ್‌ ಶೆಟ್ಟಿ ಅವರ “ಸಪ್ತಸಾಗರದಾಚೆ ಎಲ್ಲೋ ಸೈಡ್‌-ಬಿʼ ಸಿನಿಮಾ ರಿಲೀಸ್‌ ಆಗಿದೆ. ಅಂದುಕೊಂಡಂತೆ ಮೊದಲ ದಿನವೇ ಚಿತ್ರಕ್ಕೆ ಭರ್ಜರಿ ರೆಸ್ಪಾನ್ಸ್‌ ವ್ಯಕ್ತವಾಗಿದೆ. ರಕ್ಷಿತ್‌ ಶೆಟ್ಟಿಯ ಮನು ಅವತಾರದ ಪ್ರೇಮ್‌ ಕಹಾನಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

Advertisement

ಪ್ರೀತಿಗಾಗಿ ಕಾಡುವ,ಕಾದಾಡುವ ಮನು.. ಮೊದಲ ಭಾಗದಲ್ಲಿರುವ ಮನುವಿಗೂ ಸೈಡ್‌ ಬಿ ನಲ್ಲಿರುವ ಮನವಿಗೂ ತುಂಬಾ ವ್ಯತ್ಯಾಸವಿದೆ. ಆದರೆ ಆತನ ಪ್ರೀತಿಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರುವುದಿಲ್ಲ. ಆತ ಆಕೆಗಾಗಿ ಪರಿಸ್ಥಿತಿಗಳೊಂದಿಗೆ ಕಾದಾಡುವ ದೃಶ್ಯ ಕಾವ್ಯವನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಬಿಟ್ಟು ಹೋದ ಪ್ರೀತಿ, ಒಡೆದು ಹೋದ ನಂಬಿಕೆಯನ್ನು ಮನು ಮತ್ತೆ ಜೋಡಿಸಲು ಹೋಗುವ ಸನ್ನಿವೇಶಗಳು ಪ್ರೇಕ್ಷಕರನ್ನು ಭಾವಯಾನದಲ್ಲಿ ಲೀನವಾಗಿಸುತ್ತದೆ.

ಹೀಗೆ ಸಿನಿಮಾವಿಡೀ ಮನು-ಪ್ರಿಯಾಳ ಪ್ರೇಮ್‌ ಕಹಾನಿಯನ್ನೇ ಕಿವಿಯಾಗಿಸಿಕೊಂಡು ಕಣ್ಣು ಒದ್ದೆ ಮಾಡಿಕೊಂಡು ಪ್ರೇಕ್ಷಕರು ನೋಡುವಂತೆ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಹೇಮಂತ್.‌

ರಕ್ಷಿತ್‌ ಶೆಟ್ಟಿ ಇಲ್ಲಿ ಮನುವಾಗಿದ್ದಾರೆ. ಆದರೆ ಮೊದಲ ಪಾರ್ಟ್‌ನಲ್ಲಿದ್ದ ಮುಗ್ಧ ಮನು ಆತನಲ್ಲ. ಆತನೊಳಗೆ ದ್ವೇಷ, ಕ್ರೌರ್ಯ ಆವರಿಸಿಕೊಂಡಿದೆ. ಪ್ರೇಕ್ಷಕರಿಂದ ಪಾಸಿಟಿವ್‌ ರೆಸ್ಪಾನ್ಸ್‌ ಪಡೆದುಕೊಂಡಿರುವ ಸಿನಿಮಾ ಮೊದಲ ದಿನವೇ ಬಾಕ್ಸ್‌ ಆಫೀಸ್ ನಲ್ಲಿ ಕಮಾಲ್‌ ಮಾಡಿದೆ.

ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯಲ್ಲಿ ಬಿಡುಗಡೆ ಆಗಿರುವ “ಸಪ್ತಸಾಗರದಾಚೆ ಎಲ್ಲೋ ಸೈಡ್‌-ಬಿʼʼ ಎಲ್ಲಾ ಭಾಷೆಗಳಲ್ಲಿ ಸೇರಿ ಮೊದಲ ದಿನ 2.50 ಕೋಟಿ ರೂ.ವನ್ನು ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ಮಾಡಿದೆ.

Advertisement

ರಕ್ಷಿತ್‌ ಶೆಟ್ಟಿಯ ಜೊತೆ ರುಕ್ಮಿಣಿ ವಸಂತ್‌, ಚೈತ್ರಾ ಆಚಾರ್‌, ಶರತ್ ಲೋಹಿತಾಶ್ವ, ರಮೇಶ್ ಇಂದಿರಾ, ಗೋಪಾಲ್‌ ದೇಶಪಾಂಡೆ ,ಅಚ್ಯುತ್‌ ಕುಮಾರ್‌ ಮುಂತಾದ ಕಲಾವಿದರು ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.