ಅನೇಕ ನಿರ್ದೇಶಕಿಯರು ತಮ್ಮ ವಿಭಿನ್ನ ಚಿತ್ರಗಳ ಮೂಲಕವೇ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಮಹಿಳಾ ನಿರ್ದೇಶಕರ ಸಾಲಿಗೆ ಈ ಬಾರಿ ಮತ್ತೂಂದು ಹೆಸರು ಸೇರ್ಪಡೆಯಾಗುತ್ತಿದೆ. ಆ ಹೆಸರು ವಿಸ್ಮಯಾ ಗೌಡ ಅವರದ್ದು. ಕೆಲ ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ, ಜೊತೆಗೆ ಮೋಟಿವೇಷನಲ್ ಸ್ಪೀಕರ್ ಆಗಿ ಗುರುತಿಸಿಕೊಂಡಿರುವ ವಿಸ್ಮಯಾ ಗೌಡ, ಈಗ ತಮ್ಮದೇ ಕಥೆಯೊಂದನ್ನು ನಿರ್ದೇಶಿಸಿ ತೆರೆಮೇಲೆ ತರುವ ತಯಾರಿಯಲ್ಲಿದ್ದಾರೆ.
Advertisement
ಈ ಬಗ್ಗೆ ಮಾತನಾಡುವ ವಿಸ್ಮಯಾ ಗೌಡ, “ಇದೊಂದು ಕ್ಯೂಟ್ ರೊಮ್ಯಾಂಟಿಕ್ ಲವ್‌ಸ್ಟೋರಿ ಸಿನಿಮಾ. ಕಳೆದ ಎರಡು-ಮೂರು ವರ್ಷದಿಂದ ಈ ಕಥೆಗೆಯ ಮೇಲೆ ವರ್ಕ್ ಮಾಡಿ ಸ್ಕ್ರಿಪ್ಟ್ ಮಾಡಿದ್ದೇನೆ. ಇಲ್ಲಿಯವರೆಗೆ ಕನ್ನಡ ಸಿನಿಮಾಗಳಲ್ಲಿ ಅನೇಕ ಕ್ಯೂಟ್ ಜೋಡಿಗಳನ್ನು ಸ್ಕ್ರೀನ್ ಮೇಲೆ ನೋಡಿದ್ದೀರಿ. ನಮ್ಮ ಸಿನಿಮಾದಲ್ಲೂ ಅಂಥದ್ದೇ ಕ್ಯೂಟ್ ಜೋಡಿಗಳನ್ನು ನೋಡಬಹುದು. ಸದ್ಯ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಟೈಟಲ್ ಕೂಡ ಫಿಕ್ಸ್ ಆಗಿದೆ. ರೊಮ್ಯಾಂಟಿಕ್ ಲವ್ ಸ್ಟೋರಿ ಸಿನಿಮಾ ಆಗಿರುವುದರಿಂದ, ಇದೇ ಜ. 14ಕ್ಕೆ ವ್ಯಾಲೆಂಟೈನ್ಸ್ ಡೇ ಯಂದು ಸಿನಿಮಾ ಟೈಟಲ್ ಅನೌನ್ಸ್ ಮಾಡಲಿದ್ದೇವೆ. ಇದೇ ತಿಂಗಳ ಕೊನೆಯೊಳಗೆ ಸಿನಿಮಾ ಸೆಟ್ಟೇರಿಸುವ ಪ್ಲಾನ್‌ನಲ್ಲಿದ್ದೇವೆ’ ಎನ್ನುತ್ತಾರೆ.
ಹೆಸರನ್ನು ಸಾತ್ವಿಕಾ ಎಂದು ಬದಲಾಯಿಸಿ ಕೊಂಡಿರುವ, ನಿರ್ದೇಶಕ ಓಂ ಪ್ರಕಾಶ್ ರಾವ್ ಪುತ್ರಿ ಶ್ರಾವ್ಯಾ ರಾವ್ ಈ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 2 ವರ್ಷದಿಂದ ಸಿನಿಮಾಗಳಿಂದ ಕೊಂಚ ಗ್ಯಾಪ್ ತೆಗೆದು ಕೊಂಡಿದ್ದ ಸಾತ್ವಿಕಾ ಉರೂಫ್ ಶ್ರಾವ್ಯಾ ರಾವ್ ಈ ಚಿತ್ರದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ.
Related Articles
ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ಮಾಡಲಿದ್ದೇವೆ. ನಿರ್ದೇಶನದ ಜೊತೆಗೆ ನಿರ್ಮಾಣದ ಹೊಣೆ ಕೂಡ ನಾನೇ ವಹಿಸಿಕೊಂಡಿದ್ದೇನೆ. ಚಿತ್ರಕ್ಕೆ ಮಧುಸೂದನ್ ಛಾಯಾಗ್ರಹಣವಿದೆ. ಉಳಿದಂತೆ ಸಿನಿಮಾದ ಇತರ ಕಲಾವಿದರು, ತಂತ್ರಜ್ಞರ ಹೆಸರನ್ನು ಹಂತಹಂತವಾಗಿ ತಿಳಿಸುತ್ತೇವೆ’ ಎಂದು ತಮ್ಮ ಹೊಸಚಿತ್ರದ ಬಗ್ಗೆ ಮಾಹಿತಿ ನೀಡುತ್ತಾರೆ ನಿರ್ದೇಶಕಿ ವಿಸ್ಮಯಾ.
Advertisement