Advertisement

ರಿಲೀಸ್‌ಗೆ ರೆಡಿಯಾದ್ರು ಚಡ್ಡಿದೋಸ್ತ್

12:44 PM Aug 03, 2021 | Team Udayavani |

ಬೆಂಗಳೂರು: ತನ್ನ ಟೈಟಲ್‌ ಮತ್ತು ಪೋಸ್ಟರ್‌ ಮೂಲಕ ಸಿನಿಪ್ರಿಯರ ಗಮನ ಸೆಳೆದಿರುವ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರ ಇದೇ ಆಗಸ್ಟ್‌ನಲ್ಲಿ ತೆರೆಗೆ ಬರಲು ತಯಾರಿ ಮಾಡಿಕೊಳ್ಳುತ್ತಿದೆ.

Advertisement

“ರೆಡ್‌ ಆ್ಯಂಡ್‌ ವೈಟ್‌’ ಖ್ಯಾತಿಯ ಸೆವೆನ್‌ ರಾಜ್‌ ನಿರ್ಮಾಣದ “ಚಡ್ಡಿದೋಸ್ತ್ ಕಡ್ಡಿ ಅಲ್ಲಾಡುಸ್ಬುಟ್ಟ’ ಚಿತ್ರಕ್ಕೆ ಆಸ್ಕರ್‌ ಕೃಷ್ಣ ನಿರ್ದೇಶನವಿದೆ. ಚಿತ್ರದಲ್ಲಿ ಆಸ್ಕರ್‌ ಕೃಷ್ಣ, ಲೋಕೇಂದ್ರ ಸೂರ್ಯ, ಗೌರಿ ನಾಯರ್‌, ಸೆವೆನ್‌ ರಾಜ್‌ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿತ್ರಕ್ಕೆ ಅನಂತ್‌ ಆರ್ಯನ್‌ ಸಂಗೀತವಿದ್ದು, ರಾಜೇಶ್‌ಕೃಷ್ಣನ್‌ , ಅನುರಾಧಾ ಭಟ್‌, ಸುನಿತಾ ಮತ್ತಿತರರು ಹಾಡುಗಳಿಗೆ ಧ್ವನಿಯಾಗಿದ್ದಾರೆ. ಚಿತ್ರಕ್ಕೆ ಗಗನ್‌ ಕುಮಾರ್‌ ಛಾಯಾಗ್ರಹಣ, ಮರಿಸ್ವಾಮಿ ಸಂಕಲನವಿದೆ. ಈಗಾಗಲೇ ಚಿತ್ರದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರ ಸೆನ್ಸಾರ್‌ನಿಂದ ಬಿಡು ಗಡೆಗೂ ಗ್ರೀನ್‌ ಸಿಗ್ನಲ್‌ ಪಡೆದುಕೊಂಡಿತ್ತು.

ಇನ್ನೇನು ಚಿತ್ರ ಬಿಡುಗಡೆ ಮಾಡಬೇಕು ಅನ್ನುವಷ್ಟರಲ್ಲಿ ಮತ್ತೆ ಜಾರಿಯಾದ ಲಾಕ್‌ಡೌನ್‌ನಿಂದ, ತನ್ನ ಬಿಡುಗಡೆಯನ್ನು ಮುಂದೂಡಿ ಕೊಂಡಿದ್ದ ಚಿತ್ರತಂಡ, ಇದೀಗ ಆಗಸ್ಟ್‌ ಕೊನೆಯೊಳಗೆ ಚಿತ್ರವನ್ನು ಥಿಯೇಟರ್‌ಗೆ ತರುವ ಪ್ರಯತ್ನದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next