Advertisement

17 ವರ್ಷಗಳ ಹಿಂದೆ ತೆರೆ ಕಾಣಬೇಕಿದ್ದ ಉಪ್ಪಿ – ರಮ್ಯಾ ಅಭಿನಯದ ಸಿನಿಮಾ ಶೀಘ್ರದಲ್ಲೇ ರಿಲೀಸ್‌

05:18 PM Dec 04, 2024 | Team Udayavani |

ಬೆಂಗಳೂರು: ರಿಯಲ್‌ ಸ್ಟಾರ್‌ ಉಪೇಂದ್ರ – ಮೋಹಕ ತಾರೆ ರಮ್ಯಾ ಅವರು ಜತೆಯಾಗಿ ನಟಿಸಿದ್ದ ಸಿನಿಮಾವೊಂದು ತೆರೆಗೆ ಬರಲು ಸಿದ್ದವಾಗಿದೆ.

Advertisement

ಉಪೇಂದ್ರ (Upendra), ರಮ್ಯಾ (Ramya) ಸ್ಯಾಂಡಲ್‌ವುಡ್‌ನ ಎವರ್‌ ಗ್ರೀನ್‌ ಜೋಡಿಗಳಲ್ಲಿ ಒಂದು. ʼಗೌರಮ್ಮʼ, ಕಠಾರಿ ವೀರ ಸುರಸುಂದರಾಗಿʼ ಸಿನಿಮಾಗಳಲ್ಲಿ ಉಪ್ಪಿ- ರಮ್ಯಾ ನಟಿಸಿದ್ದರು. ಈ ಎರಡು ಸಿನಿಮಾಗಳ ಜತೆಗೆ ಇಬ್ಬರು ಮತ್ತೊಂದು ಸಿನಿಮಾದಲ್ಲಿ ನಟಿಸಿದ್ದರು. ಆ ಸಿನಿಮಾ ಮಾತ್ರ ರಿಲೀಸ್‌ ಆಗಿರಲಿಲ್ಲ. ಇದೀಗ 17 ವರ್ಷದ ಬಳಿಕ ರಮ್ಯಾ – ಉಪ್ಪಿ ನಟಿಸಿದ್ದ ಸಿನಿಮಾ ಟೈಟಲ್‌ ಬದಲಾಗಿ ತೆರೆಗೆ ಬರಲಿದೆ.

2007ರಲ್ಲಿ ಕನ್ನಡದ ಹಿರಿಯ ನಿರ್ದೇಶಕ ಎಸ್‌. ವಿ. ರಾಜೇಂದ್ರ ಸಿಂಗ್ ಬಾಬು ರಮ್ಯಾ – ಉಪ್ಪಿ ಅವರನ್ನು ಜೋಡಿಯಾಗಿಸಿಕೊಂಡು ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಎನ್ನುವ ಸಿನಿಮಾವನ್ನು ಮಾಡಿದ್ದರು.

ಇದನ್ನೂ ಓದಿ: ‌Bollywood: ಇಮ್ತಿಯಜ್‌ ಅಲಿ ಸಿನಿಮಾದಲ್ಲಿ ಮಾಲಿವುಡ್‌ ಸ್ಟಾರ್‌ ಫಾಹದ್‌; ನಾಯಕಿ ಯಾರು?

ಈ ಸಿನಿಮಾ ಭಯೋತ್ಪಾದನೆಯ ಹಿನ್ನೆಲೆಯನ್ನು ಇಟ್ಟುಕೊಂಡು ಕಥೆಯನ್ನು ರಾಜೇಂದ್ರ ಬಾಬು ಕಥೆ ಹಣೆದಿದ್ದರು. ಗಡಿಭಾಗದಲ್ಲಷ್ಟೇ ಅಲ್ಲದೇ ಬೆಂಗಳೂರಿನಲ್ಲಿಯೂ ಭಯೋತ್ಪಾದನೆ ಕೃತ್ಯಗಳು ನಡೆಯುತ್ತದೆ ಎನ್ನುವ ಅಂಶವನ್ನು ಚಿತ್ರದಲ್ಲಿ ಹೇಳಲಾಗಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಪ್ರಧಾನಿ ಮೋದಿಯ ಹೇಳಿಕೆಯನ್ನು ಇಲ್ಲಿ ಬಳಸಿಕೊಳ್ಳಲಾಗಿದೆ ಎನ್ನಲಾಗಿದೆ.

Advertisement

ಸಿನಿಮಾದ ಚಿತ್ರೀಕರಣ, ಪ್ರೂಡಕ್ಷನ್‌ ವರ್ಕ್‌ ಎಲ್ಲವೂ ಮುಗಿದು ಇನ್ನೇನು ರಿಲೀಸ್‌ ಆಗಬೇಕು ಎನ್ನುವಾಗಲೇ ಚಿತ್ರಕ್ಕೆ ವಿಘ್ನ ಎದುರಾಗಿತ್ತು. ಕಾರಣಾಂತರಗಳಿಂದ ಸಿನಿಮಾ ತೆರೆಗೆ ಬಂದಿರಲಿಲ್ಲ. ಸಿನಿಮಾಕ್ಕಾಗಿ ಕಾದು ಕುಳಿತಿದ್ದ ಪ್ರೇಕ್ಷಕರಿಗೆ ಭಾರೀ ನಿರಾಸೆಯಾಗಿತ್ತು.

ಈಗ 17 ವರ್ಷದ ಬಳಿಕ ‘ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್’ ಟೈಟಲ್‌ನ್ನು ʼರಕ್ತ ಕಾಶ್ಮೀರʼ ಎಂದು ಬದಲಾಯಿಸಿಕೊಂಡು ತೆರೆಗೆ ತರಲು ಚಿತ್ರತಂಡ ಸಿದ್ದವಾಗಿದೆ.

2025ರ ಆರಂಭದಲ್ಲಿ ಸಿನಿಮಾವನ್ನು ರಿಲೀಸ್‌ ಮಾಡಲು ಚಿತ್ರತಂಡ ಪ್ಲ್ಯಾನ್‌ ಹಾಕಿಕೊಂಡಿದೆ.

ಚಿತ್ರಕ್ಕೆ ಎಂ.ಎಸ್ ರಮೇಶ್ ಸಂಭಾಷಣೆ ಬರೆದಿದ್ರೆ, ಗುರುಕಿರಣ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಉಪೇಂದ್ರ, ರಮ್ಯ, ಪಾರ್ವತಿ ಮಿಲ್ಟನ್, ದೊಡ್ಡಣ್ಣ, ಓಂಪ್ರಕಾಶ್ ರಾವ್ ಮುಂತಾದವರು ನಟಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next