ಉಜಿರೆ: ಸಿನೆಮಾ ರಂಗದಲ್ಲಿ ಉನ್ನತ ಮಟ್ಟದಲ್ಲಿ ಬೆಳೆಯಬೇಕಾದರೆ ನಾವು ನಮ್ಮ ತನವನ್ನು ಬಿಡದೆ, ನಮ್ಮನ್ನು ಗುರುತಿಸಿದವರನ್ನು ಮರೆಯದೆ ನಾವು ಮುನ್ನೆಡೆದರೆ ನಮಗೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಖ್ಯಾತ ಕನ್ನಡದ ಹಿರಿಯ ನಟ, ರಂಗಕರ್ಮಿ ಎಂ.ಕೆ ಮಠ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಅವರು ಉಜಿರೆ ಎಸ್.ಡಿ.ಎಂ ಕಾಲೇಜಿನ ಬಿವೋಕ್ ವಿಭಾಗದ ದಿಜಿಟಲ್ ಮಿಡೀಯಾ ಹಾಗು ಫಿಲ್ಮಂ ಮೇಕಿಂಗ್ ವಿದ್ಯಾರ್ಥಿ ಲೊಕೇಶ್ ದರ್ಮಸ್ಥಳ ರಚಿಸಿ, ನಿರ್ದೇಶನ ಮಾಡಿರುವ “ಆಫ್ ಟು ಡಸ್ಟ್ ಬಿನ್” ಕನ್ನಡ ಕಿರುಚಿತ್ರವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿರು.
ಸಿನೆಮಾ ಒಂದು ಸಾಗರ ಇದ್ದಂತೆ ಅಲ್ಲಿ ಉನ್ನತಮಟ್ಟದಲ್ಲಿ ಬೆಳೆಯಬೇಕಾದರೆ ಯಾವುದೆ ಅಡ್ಡ ದಾರಿಯಿಲ್ಲ, ಪ್ರತಿಭೆ, ಪರಿಶ್ರಮವೇ ಮುಖ್ಯದಾರಿ, ಆ ದಾರಿಯಲ್ಲಿ ನಾವು ಹೇಗೆ ಸಾಗುತ್ತೇವೂ ಅದರಂತೆ ನಮ್ಮ ಭವಿಷ್ಯವು ನಿರ್ಧಾರವಾಗುತ್ತದೆ, ಹಾಗಾಗಿ ವಿದ್ಯಾರ್ಥಿಗಳು ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿತ್ರದ ನಿರ್ದೇಶಕ ಲೋಕೇಶ್ ಧರ್ಮಸ್ಥಳ ಕಿರುಚಿತ್ರದ ನಿರ್ಮಾಣದ ಅನುಭವಗಳನ್ನು ಹಂಚಿಕೊಂಡರು. ಬಿವೋಕ್‍ನ ವಿವಿಧ ವಿಭಾಗಗಳ ಪ್ರಾಧ್ಯಪಾಕರು, ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಮಾರಂಭದಲ್ಲಿ ದಿಜಿಟಲ್ ಮಿಡೀಯಾ ಹಾಗು ಫಿಲ್ಮಂ ಮೇಕಿಂಗ್ ವಿಭಾಗದ ಮುಖ್ಯಸ್ಥರಾದ ಮಾಧವ ಹೊಳ್ಳ ಸ್ವಾಗತಿಸಿ, ವಿದ್ಯಾರ್ಥಿ ಸುಮನ ವಂದಿಸಿದರು, ಗೌತಮ್ ಕಾರ್ಯಕ್ರಮವನ್ನು ನಿರೂಪಿಸಿದರು.