Advertisement
ಜಿಲ್ಲೆಯಲ್ಲೇ ಹೆಚ್ಚು ಮರಳು ಸಾಗಾಟ ಮಾಡುವ ತಾಲೂಕು ಎನ್ನುವ ಪಟ್ಟಿಯಲ್ಲಿದ್ದ ಅಫಜಲಪುರ, ಚಿತ್ತಾಪುರ ತಾಲೂಕುಗಳ ಜೊತೆಗೆ ಈಗ ಸೇಡಂ ಹೆಸರು ತಳಕುಹಾಕಿಕೊಂಡಿದೆ. ತಾಲೂಕಿನ ಮದರಾನಾಗಸನಪಲ್ಲಿ, ಬಿಬ್ಬಳ್ಳಿ, ಕಾಚವಾರ, ಸಿಂಧನಮಡು, ರಂಜೋಳ, ಲೋಹಾಡ, ಮಳಖೇಡ, ಸಂಗಾವಿ, ಹಾಬಾಳ, ತೆಲ್ಕೂರ, ಮುಧೋಳ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಅಕ್ರಮ ಮರಳುಗಾರಿಕೆ ಅನೇಕ ದಿನಗಳಿಂದ ಎಗ್ಗಿಲ್ಲದೆ ಸಾಗಿದೆ. ಪ್ರತಿನಿತ್ಯ ಕೋಟ್ಯಂತರ ರೂ. ಮೊತ್ತದ ವ್ಯವಹಾರ ನಡೆಯುತ್ತಿದೆ.
ತಾಲೂಕಿನ ಕಾಚವಾರ ಗ್ರಾಮದ ತಟ್ಯಾಳ- ಕಮಲಾವತಿ ನದಿ ಸಂಗಮವಾಗುವ ಸ್ಥಳದಲ್ಲಿ ಮರಳು ಹೆಕ್ಕಿ, ಟ್ರಾಕ್ಟರ್‌ಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ಈ ವೇಳೆ ನದಿ ಪಾತ್ರದ ಅನೇಕ ಕೃಷಿ ಜಮೀನುಗಳಲ್ಲಿ ಟ್ರಾಕ್ಟರ್‌ಗಳು ಬೇಕಾಬಿಟ್ಟಿ ಸಂಚರಿಸುತ್ತಿವೆ. ಇದರಿಂದ ಬೆಳೆದ ಅಲ್ಪ-ಸ್ವಲ್ಪ ಬೆಳೆಯೂ ನಾಶವಾಗುತ್ತಿದೆ. ಈ ವ್ಯವಹಾರದಲ್ಲಿ ಪೊಲೀಸರ ಕೈವಾಡವೂ ಇದೆ ಎನ್ನುವ
ಆರೋಪಗಳು ಕೇಳಿಬಂದಿವೆ. ಮರಳು ಸಾಗಾಟ ಮಾಡುವವರಾಗಿರಲಿ, ಅವರಿಗೆ ಪ್ರೋತ್ಸಾಹಿಸುವವರ
ವಿರುದ್ಧ ಖಚಿತ ಮಾಹಿತಿ ಆಧರಿಸಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಅಕ್ರಮ ಮರಳು ಸಾಗಾಟ ಕುರಿತು ಮಾಹಿತಿ ಪಡೆಯಲು ಈಗಾಗಲೇ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಆದರೂ ದೂರುಗಳು ಕೇಳಿಬರುತ್ತಿವೆ. ಶೀಘ್ರವೇ ಇದಕ್ಕೆ ಪರಿಹಾರ ಕಲ್ಪಿಸಲಾಗುವುದು.
ಡಾ| ಬಿ. ಸುಶೀಲಾ ಸಹಾಯಕ ಆಯುಕ್ತರು, ಸೇಡಂ