ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯನ್ನು ತಪ್ಪಿಸಿ ಒಳರಸ್ತೆಯ ಮೂಲಕ ಮರಳು ಸಾಗಾಟ ನಡೆಸುತ್ತಿದ್ದ ಟಿಪ್ಪರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ತೆಂಗಿನ ಮರಕ್ಕೆ ಗುದ್ದಿದ ಪರಿಣಾಮ ಮರ ಉರುಳಿ ಬಿದ್ದು ಟಿಪ್ಪರ್ ಪಲ್ಟಿಯಾಗಿರುವ ಘಟನೆ ಸೋಮವಾರ ನಡೆದಿದೆ.
ದೇವಿಪುರ ದೇವಸ್ಥಾನಕ್ಕೆ ಟಿಪ್ಪರ್ ಢಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲೇ ತಪ್ಪಿದ್ದು ದೇವಸ್ಥಾನದಿಂದ ಹೊರಬರುತ್ತಿದ್ದ ಮಹಿಳೆಯೊಬ್ಬರು ಪವಾಡಸದೃಶವಾಗಿ ಪಾರಾಗಿದ್ದಾರೆ.
ಇದನ್ನೂ ಓದಿ:ತಲಪಾಡಿಯಲ್ಲಿ ಕೋವಿಡ್ ಚೆಕ್ ಪೋಸ್ಟ್: ಗಡಿನಾಡ ಕನ್ನಡಿಗರಿಂದ ರಸ್ತೆ ತಡೆದು ಪ್ರತಿಭಟನೆ
ಕೇರಳ ಕಡೆಯತ್ತ ಅಕ್ರಮವಾಗಿ ಮರಳು ಸಾಗಾಟ ನಡೆಸುವ ಸಂದರ್ಭ ಘಟನೆ ನಡೆದಿದೆ ಅನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಕೋವಿಡ್ ಚೆಕ್ ಪಾಯಿಂಟ್ ಆರಂಭಗೊಂಡಿದ್ದು, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದನ್ನು ತಪ್ಪಿಸಿ ಚಾಲಕ ಒಳರಸ್ತೆಯ ಮೂಲಕ ಮರಳು ಸಾಗಾಟ ನಡೆಸುತ್ತಿದ್ದ ಅನ್ನುವ ಆರೋಪ ಕೇಳಿಬಂದಿದೆ.
ಅಪಘಾತದ ಕುರಿತು ನಾಗುರಿ ಸಂಚಾರಿ ಠಾಣೆಗೆ ಸ್ಥಳೀಯರು ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಹಿಂಸೆಯ ಹಿಂದೆ ಕಾಂಗ್ರೆಸ್ ಪಕ್ಷ: ಖರ್ಗೆ ಹೇಳಿಕೆಗೆ ನಳಿನ್ ಕುಮಾರ್ ತಿರುಗೇಟು