ತಾಳಿಕೋಟೆ: ಪಟ್ಟಣದ ಕಾವೇರಿ ಡಾಬಾ ಬಳಿ ಶುಕ್ರವಾರ ಸಾಯಂಕಾಲ ಅಕ್ರಮವಾಗಿ ಸಾಗಿಸುತ್ತಿದ್ದ ಮರಳನ್ನು ಹಾಗೂ ಟಿಪ್ಪರನ್ನು ಉಪ ವಿಭಾಗಾಧಿಕಾರಿ ಬಲರಾಮ್ ಲಮಾಣಿ ವಶಕ್ಕೆ ಪಡೆದುಕೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.
ಟಿಪ್ಪರಗೆ ಯಾವುದೇ ನಂಬರ್ ಪ್ಲೇಟ್ ಇಲ್ಲದೇ ಸುಮಾರು 7 ಬ್ರಾಸ್ ದಷ್ಟು ಮರಳು ತುಂಬಿದ್ದ ಅಂದಾಜು 25000 ರೂ. ಮೌಲ್ಯದ ಹಾಗೂ 40 ಲಕ್ಷ ರೂ. ಮೌಲ್ಯದ ಟಿಪ್ಪರನ್ನು ವಶಕ್ಕೆ ತಗೆದುಕೊಳ್ಳಲಾಗಿದೆ.
ಟಿಪ್ಪರ್ ಚಾಲಕ ಆರೋಪಿ ಸೋಮು ಲಕ್ಕಪ್ಪ ಕಲಬುರ್ಗಿ (23 ವರ್ಷ) ಬಸವನಬಾಗೇವಾಡಿ ತಾಲೂಕಿನ ಇವಣಗಿ ತೋಟದ ಮನೆ, ಹಂಚನಾಳ ರೋಡ್ ರಹವಾಸಿ ಎಂದು ಒಪ್ಪಿಕೊಂಡಿದ್ದು ಅಕ್ರಮವಾಗಿ ಮರಳನ್ನು ಕಳ್ಳತನ ಮಾಡಿಕೊಂಡು ಹೆಚ್ಚಿನ ದರಕ್ಕೆ ಮಾರಾಟಕ್ಕೆ ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ.
ಈ ಕುರಿತು ತಾಳಿಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ಕೈಗೊಂಡಿದ್ದಾರೆ. ಅಕ್ರಮ ಮರಳು ತುಂಬಿದ ಟಿಪ್ಪರ್ ದಾಳಿಯಲ್ಲಿ ತಾಳಿಕೋಟೆ ತಹಶೀಲ್ದಾರ್ ಅನಿಲಕುಮಾರ ಢವಳಗಿ, ಕಂದಾಯ ನಿರೀಕ್ಷಕ ಜಗದೀಶ ಹಾರಿವಾಳ, ಗ್ರಾಮ ಲೆಕ್ಕಾಧಿಕಾರಿ ಎಂ.ಕೆ. ಬಿರಾದಾರ ಕಾರ್ಯಚರಣೆ ಕೈಗೊಂಡಿದ್ದಾರೆ.