Advertisement
ಐರೋಡಿ ವಿಠಲ್ ಪೂಜಾರಿ ಮಾತನಾಡಿ ಮರಳು ಸಮಸ್ಯೆಯಿಂದ ಕಾರ್ಮಿಕರು, ಮಧ್ಯಮ ವರ್ಗ ತತ್ತರಿಸಿದೆ. ಈ ಸಮಸ್ಯೆಗೆ ರಾಜ್ಯ ಹಾಗೂ ಜಿಲ್ಲಾಡಳಿತವೇ ಮುಖ್ಯ ಕಾರಣ. ಈ ಸಮಸ್ಯೆ ಪರಿಹರಿಸದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾರ್ಮಿಕರೆಲ್ಲ ಒಂದಾಗಿ ಜಿಲ್ಲೆಯಾದ್ಯಂತ ಮತ ಬಹಿಷ್ಕಾರ ಮಾಡಲಾಗುವುದು ಹಾಗೂ ಮನೆಗಳಿಗೆ ತೆರಳಿ ಮತದಾನ ನಿರಾಕರಣೆ ಆಂದೋಲನ, ಗ್ರಾಮಮಟ್ಟದಲ್ಲಿ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಿದ್ದೇವೆೆ ಎಂದರು.
ಮತದಾನ ಬಹಿಷ್ಕರಿಸುವ ಕುರಿತು ಸಂದೇಶವನ್ನೊಳಗೊಂಡ ಬ್ಯಾನರ್‌ವೊಂದನ್ನು ಐರೋಡಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಮುಖ್ಯ ಪೇಟೆಯಲ್ಲಿ ಶನಿವಾರ ಅಳವಡಿಸಲಾಗಿತ್ತು. ಆದರೆ ಪಿಡಿಒ ಸ್ಥಳಕ್ಕಾಗಮಿಸಿದ ಬ್ಯಾನರ್‌ಗೆ ಪರವಾನಿಗೆ ಪಡೆದಿಲ್ಲ ಎನ್ನುವ ಕಾರಣ ನೀಡಿ ಬ್ಯಾನರ್ ತೆರವುಗೊಳಿಸಿದರು. ಆಗ ಆಕ್ರೋಶ ಗೊಂಡ ಹೋರಾಟಗಾರರು, ಈ ಭಾಗದಲ್ಲಿ ಪರವಾನಿಗೆ ಪಡೆಯದೆ ಅಳವಡಿಸಿದ ಹಲವು ಬ್ಯಾನರ್‌ಗಳಿವೆ. ಆದರೆ ಈ ಬ್ಯಾನರ್ ಗುರಿಯಾಗಿಸಿಕೊಂಡು ತೆರವುಗೊಳಿಸಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಈ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ. ಇದು ಮರಳು ಸಮಸ್ಯೆಯನ್ನು ಪ್ರಶ್ನಿಸುವ ಕಾರ್ಮಿಕರ ವಿರುದ್ಧ ಆಡಳಿತ ವ್ಯವಸ್ಥೆ ನೀಡುತ್ತಿರುವ ಕಿರುಕುಳದ ಮುಂದುವರಿದ ಭಾಗವಾಗಿದೆ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಶಂಕರ್ ಕುಲಾಲ್,ರಘು ಪೂಜಾರಿ, ಸ್ಥಳೀಯ ವಾಹನ ಚಾಲಕರು ಉಪಸ್ಥಿತರಿದ್ದರು.