Advertisement
ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಯು.ಟಿ.ಖಾದರ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕರಾವಳಿ ಪ್ರದೇಶಕ್ಕೆ ಪ್ರತ್ಯೇಕ ಮರಳು ನೀತಿ ರೂಪಿಸುವ ಕುರಿತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಹಿಂದಿನ ಸಚಿವರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜತೆ ಚರ್ಚಿಸಿದ್ದಾರೆ. ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಸಲ್ಲಿಕೆಗೂ ಸೂಚಿಸಲಾಗಿದೆ ಎಂದ ಹೇಳಿದರು.
Related Articles
Advertisement
ಸಚಿವನಾಗಿ ನಾನು ಜಿಲ್ಲೆಗಳಿಗೆ ಭೇಟಿ ಕೊಟ್ಟಾಗಲೂ ಮರಳಿನ ಅಲಭ್ಯತೆಯಿಂದ ಕಾಮಗಾರಿ ಸ್ಥಗಿತಗೊಂಡಿರುವ ಸಮಸ್ಯೆ ಕೇಳಿ ಬಂದಿದೆ. ಇನ್ಮುಂದೆ ರಾಜ್ಯದ ಯಾವುದೇ ಭಾಗದಲ್ಲೂ ಇಂತಹ ಸಮಸ್ಯೆ ಉಂಟಾಗದಂತೆ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು. ಗುಣಮಟ್ಟದ ಮರಳು ಕಡಿಮೆ ದರದಲ್ಲಿ ಪೂರೈಕೆ ಮಾಡುವುದು ಸರ್ಕಾರದ ಗುರಿಯಾಗಿದೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಯು.ಟಿ.ಖಾದರ್, ರಾಜ್ಯದ ಬೇರೆಲ್ಲಾ ಪ್ರದೇಶದ ಸಮಸ್ಯೆ ಒಂದೆಡೆಯಾದರೆ ಕರಾವಳಿ ಭಾಗದ ಸಮಸ್ಯೆ ಬೇರೆಯದೇ ಇದೆ. ಅಲ್ಲಿ ಕೇವಲ 6 ತಿಂಗಳು ಮಾತ್ರ ಮರಳು ತೆಗೆಯಲು ಸಾಧ್ಯ. ಮಳೆಗಾಲದಲ್ಲಿ ತೆಗೆಯಲು ಸಾಧ್ಯವಿಲ್ಲ. ಸರ್ಕಾರ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಬಿಜೆಪಿಯ ರಘುಪತಿ ಭಟ್ ಮಾತನಾಡಿ, ಸಾಂಪ್ರದಾಯಿಕವಾಗಿ ಮುಳುಗಿ ಮರಳು ತೆಗೆಯಲು ಅನುಮತಿ ಬೇಕಾಗಿದೆ. ವಿ.ಎಸ್.ಆಚಾರ್ಯ ಅವರ ಕಾಲದಿಂದಲೂ ಈ ಬೇಡಿಕೆ ಇದ್ದರೂ ಕಾಂಗ್ರೆಸ್ ಸರ್ಕಾರವೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಬಿಜೆಪಿಯ ಕುಮಾರ್ ಬಂಗಾರಪ್ಪ, ಹಿಂದಿನ ಸಚಿವರು ಒಂದು ಹಂತಕ್ಕೆ ತಂದಿಟ್ಟಿದ್ದು ಮತ್ತೆ ಹಿಂದೆ ಹೋಗುವುದು ಬೇಡ. ಈಗಿನ ಸಚಿವರು ಮುಂದೆ ಆಗಬೇಕಾದ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.