Advertisement

80ಕ್ಕೂ ಅಧಿಕ ಅಪಾಯಕಾರಿ ಕಲ್ಲು ಕ್ವಾರಿ ಗುಂಡಿ! ಕ್ವಾರಿ ಮಾಲೀಕರ ವಿರುದ್ಧ ದೂರು

03:54 PM Nov 12, 2020 | sudhir |

ಕುಷ್ಟಗಿ: ತಾಲೂಕಿನಲ್ಲಿ ಮೃತ್ಯುಕೂಪವಾಗಿರುವ ಕಲ್ಲು ಗಣಿಗಾರಿಕೆ ಕ್ವಾರಿ ಗುಂಡಿಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನಾತ್ಮಕವಾಗಿ ಮುಚ್ಚಿಸಲು ಪೊಲೀಸ್‌ ಇಲಾಖೆ ಮುಂದಾಗಿದೆ. ಕಳೆದ ನ. 6ರಂದು ಬಿಸನಾಳ ಗ್ರಾಮದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಕ್ವಾರಿ ಗುಂಡಿಗಳಲ್ಲಿ ಬಾಲಕ ಮಂಜುನಾಥ ಶರಣಪ್ಪ ವದೇಗೋಳ (7) ಮೃತಪಟ್ಟ ಬೆನ್ನಲ್ಲೇ ನ. 9ರಂದು ಕಲ್ಲುಗೋನಾಳ ಗ್ರಾಮದ ಕಲ್ಲು ಕ್ವಾರಿ ಹೊಂಡದಲ್ಲಿ ಬಾಲಕ ಶರಣಪ್ಪ ಸಿದ್ದಪ್ಪ ಕಮತರ ಕಾಲು ಜಾರಿ ಬಿದ್ದು ಜೀವ ಕಳೆದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಸರ್ಕಲ್‌ ಪೊಲೀಸ್‌ ಇನ್ಸಪೆಕ್ಟರ್‌ ನಿಂಗಪ್ಪ ರುದ್ರಪ್ಪಗೋಳ ಅವರು, ಎಸ್‌ಪಿ ಟಿ. ಶ್ರೀಧರ
ಅವರ ಮಾರ್ಗದರ್ಶನದಲ್ಲಿ ಕ್ವಾರಿ ಗುಂಡಿಗಳನ್ನು ಮುಚ್ಚಿಸಲು ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಜಂಟಿ ಸರ್ವೇ ಮೂಲಕ ಕುಷ್ಟಗಿ, ಹನುಮಸಾಗರ, ತಾವರಗೇರಾ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ 80ಕ್ಕೂ ಅಧಿಕ ಇಂತಹ ಅಪಾಯಕಾರಿ ಕ್ವಾರಿ ಗುಂಡಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಹನುಮಸಾಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಧಿಕವಾಗಿದೆ.

Advertisement

ಅಧಿಕೃತ, ಅನಧಿಕೃತ ಕ್ವಾರಿ ಹೊಂದಿದ ಜಮೀನು ಮಾಲೀಕರಿಗೆ 336 ಕಲಂ ಅನ್ವಯ ಪ್ರತ್ಯೇಕವಾಗಿ ನೋಟಿಸ್‌ ಜಾರಿ ಮಾಡಲಾಗಿದೆ. ತಮ್ಮ ಕಲ್ಲು ಕ್ವಾರಿ ಗಣಿಗಾರಿಕೆ ನಡೆಸಿದ ಜಮೀನುಗಳಲ್ಲಿ ನೀರು ನಿಂತಿರುವ ಹೊಂಡಗಳ ಸುತ್ತಲೂ ತಂತಿ ಬೇಲಿ
ಅಳವಡಿಸದ ಹಿನ್ನೆಲೆಯಲ್ಲಿ ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಸಿಪಿಐ ನಿಂಗಪ್ಪ ರುದ್ರಪ್ಪಗೋಳ ತಿಳಿಸಿದರು.

ಇದನ್ನೂ ಓದಿ:ಮಹಿಳೆಯರ ಮೇಲಿನ ದೌರ್ಜನ್ಯ; ಸರ್ಕಾರದ ಮೌನ ಆತಂಕಕಾರಿ: ಪುಷ್ಪ ಅಮರನಾಥ್

ಬಿಸನಾಳ ಸಿಮಾದಲ್ಲಿ ಕ್ವಾರಿ ಗುಂಡಿಗಳಿಗೆ ಸಂಬಧಿಸಿದಂತೆ ಕ್ವಾರಿ ಮಾಲೀಕರಾದ ಹನುಮಂತಮ್ಮ ಪೊಲೀಸಪಾಟೀಲ ವಿರುದ್ಧ ಈಗಾಗಲೇ ಕುಷ್ಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಈ ಜಮೀನು ಮಾಲೀಕರು ಸೇರಿದಂತೆ 8 ಜನರ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದಾರೆ.

Advertisement

ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ 21 ಜನರಿಗೆ ನೋಟಿಸ್‌ ಜಾರಿ
ಮಾಡಲಾಗಿದೆ. ತಾಲೂಕಿನ ಹನುಮಸಾಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಸೇಬಿನಕಟ್ಟಿ ಸೀಮಾದಲ್ಲಿ ಬೆಂಗಳೂರು ಮೂಲದ ವಿವೇಕ್‌, ಕೊಪ್ಪಳದ ಸಿ.ಬಿ. ಮಹಾಂತಯ್ಯಮಠ, ಕಡೂರಿನ ಶಿವಶಂಕರಗೌಡ ಪಾಟೀಲ, ಬಾಗಲಕೋಟೆ ಜಿಲ್ಲೆ ಇಲಕಲ್ಲ ಮೂಲದ ಶಾಂತಪ್ಪ ಗುರಂ, ಶಿವಶರಣಪ್ಪ ಆಲಮೇಲ್‌, ಸುಭಾಸ್‌ ಹರಿಹರ, ಮಲ್ಲಿಕಾರ್ಜುನ ಶೆಟ್ಟರ್‌, ಶರಣಪ್ಪ ಗುರಂ, ಮುರ್ತುಜಾಸಾಬ್‌ ಕರಡಿ, ಹಿರೇ ಓತಗೇರಿಯ ಲಕ್ಷ್ಮೀ ಪುತ್ರ ರೇವಡಿ ಎಂಬುವವರ ವಿರುದ್ಧ ದೂರು ದಾಖಲಿಸಲಾಗಿದೆ.

ಕುಷ್ಟಗಿ ತಾಲೂಕಿನ ಬಿಸನಾಳ, ಕಲಕೇರಿ, ಪರಸಾಪೂರ ಹಾಗೂ ಕ್ಯಾದಿಗುಪ್ಪ ಸೀಮಾದಲ್ಲಿ ಪರಸಾಪೂರ ಗೂಡುಸಾಬ್‌ ವೆಂಕಟಾಪೂರ, ಇಲಕಲ್‌ ಹನುಮಂತಮ್ಮ ಪೊಲೀಸಪಾಟೀಲ, ದೋಟಿಹಳದ ಲಕ್ಷ್ಮವ್ವ ಕೊಳ್ಳಿ ಕ್ಯಾದಿಗುಪ್ಪ ಮಲ್ಲಿಕಾರ್ಜುನ ಶೆಟ್ಟರ್‌, ಹನುಮಂತ ತಳವಾರ, ರಾಮರಾವ್‌ ದೇಸಾಯಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತಾವರಗೇರಾ ಪೊಲೀಸ್‌ ಠಾಣೆ
ವ್ಯಾಪ್ತಿಯಲ್ಲಿ ಕಳಮಳ್ಳಿ ರೇಖಪ್ಪ ರಾಠೊಡ್‌, ಇಲಕಲ್‌ ರಿಯಾನಭಾನು ಉಸ್ಮಾನಗಣಿ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next