Advertisement
ಪರಿಸರಾತ್ಮಕ ಕಾರಣಗಳಿಂದ ಸಿಆರ್‌ಝಡ್ ವಲಯದಲ್ಲಿ ಜೂನ್‌ನಿಂದ ಜಾರಿಯಲ್ಲಿದ್ದ ಮರಳುಗಾರಿಕೆ ನಿಷೇಧ ಆ. 15ಕ್ಕೆ ಕೊನೆಗೊಳ್ಳಲಿದೆ. ಆದರೆ ಇಲ್ಲಿ ಹೊಸದಾಗಿ ಮರಳುಗಾರಿಕೆ ಆರಂಭಿಸಲು ಕೆಸಿಝಡ್‌ಎಂ ಅನುಮತಿ ಅಗತ್ಯ.ಈಗಾಗಲೇ ಜಿಲ್ಲಾಡಳಿತದಿಂದ ರವಾನೆ ಯಾಗಿರುವ ವರದಿಯನ್ನು ಈ ಸಭೆಯು ಪರಿಶೀಲಿಸಿ ಅನುಮತಿ ನೀಡುವ ಸಾಧ್ಯತೆಗಳಿದ್ದು, ಸೆಪ್ಟಂಬರ್ ಮೊದಲ ವಾರದಲ್ಲಿ ಮರಳುಗಾರಿಕೆ ಆರಂಭಗೊಳ್ಳುವ ನಿರೀಕ್ಷೆ ಇದೆ.
ಜಿಲ್ಲೆಯಲ್ಲಿ ಮರಳುಗಾರಿಕೆ ಸಂಪೂರ್ಣ ಸ್ಥಗಿತಗೊಂಡು 7 ತಿಂಗಳು ಕಳೆದಿವೆ. ಈ ಬಾರಿಯ ಬ್ಯಾಥಮೆಟ್ರಿಕ್ಸ್ ಸರ್ವೆಯಲ್ಲಿ ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯಲ್ಲಿ ಹೊಸದಾಗಿ ಗುರುತಿಸಿರುವ ಮರಳು ದಿಬ್ಬಗಳ ವರದಿಯ
ಬಗ್ಗೆ ಎನ್‌ಐಟಿಕೆ ಸಲ್ಲಿಸಿರುವ ತಾಂತ್ರಿಕ ವರದಿಯನ್ನು ಜಿಲ್ಲಾ ಧಿಕಾರಿಯವರ ಅಧ್ಯಕ್ಷತೆಯಲ್ಲಿರುವ ಸಿಆರ್‌ಝಡ್, ಮೀನುಗಾರಿಕೆ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ ಗಳನ್ನು ಒಳಗೊಂಡ ಸಮಿತಿ ಪರಿಶೀಲನೆ ನಡೆಸಿ ಮೇಯಲ್ಲಿ ಕೆಸಿಝಡ್‌ಎಂಗೆ ಕಳುಹಿಸಿ ಕೊಟ್ಟಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಸಮಿತಿಯ ಸಭೆ ನಡೆದಿರಲಿಲ್ಲ.
Related Articles
ಲಾಕ್‌ಡೌನ್ ತೆರವುಗೊಂಡ ಬಳಿಕ ಜಿಲ್ಲೆಯಲ್ಲಿ ರಿಯಲ್ ಎಸ್ಟೇಟ್ ಚೇತರಿಸಿ ಕೊಂಡಿದ್ದು, ನಿರ್ಮಾಣ ಕಾಮಗಾರಿಗಳು ವೇಗ ಪಡೆದುಕೊಳ್ಳುತ್ತಿವೆ. ಇದೇ ಸಂದರ್ಭದಲ್ಲಿ ಮರಳು ಕೊರತೆ ಯಿಂದಾಗಿ ಸಮಸ್ಯೆಯಾಗಿದೆ. ಪ್ರಸ್ತುತ ನಾನ್ ಸಿಆರ್‌ಝಡ್ ವಲಯದಲ್ಲಿ ಈ ಹಿಂದೆ ಮಾಡಿರುವ ದಾಸ್ತಾನಿನಿಂದ ಮರಳು ಸರಬರಾಜು ಆಗುತ್ತಿದ್ದು ಅಲ್ಲೂ ಖಾಲಿ ಯಾಗಿದೆ.
ಸಿಆರ್‌ಝಡ್ ವಲಯದಲ್ಲಿ ಮರಳು ಗಾರಿಕೆ ಶೀಘ್ರ ಆರಂಭಗೊಳ್ಳದಿದ್ದರೆ ನಿರ್ಮಾಣ ಚಟುವಟಿಕೆಗಳಿಗೆ ತೀವ್ರ ಸಮಸ್ಯೆ ಯಾಗಲಿದೆ ಎಂದು ಮಂಗಳೂರು ಕ್ರೆಡೈ ಅಧ್ಯಕ್ಷ ನವೀನ್ ಕಾರ್ಡೊಜಾ ತಿಳಿಸಿದ್ದಾರೆ.
Advertisement
ಶೀಘ್ರ ಆರಂಭಕ್ಕೆ ಕ್ರಮಜಿಲ್ಲೆಯ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆ ಶೀಘ್ರ ಆರಂಭಕ್ಕೆ ಕ್ರಮ ಕೈಗೊಳ್ಳಲಾಗಿದ್ದು ಬುಧವಾರ ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರನ್ನು ಹಾಗೂ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ಸಭೆ ನಡೆದಿದೆ. ಆ. 10ರಂದು ಕೆಸಿಝಡ್‌ಎಂ ಸಭೆ ನಿಗದಿಪಡಿಸಲಾಗಿದೆ. ನಾನ್ ಸಿಆರ್‌ಝಡ್‌ನಲ್ಲಿ ರಾಜ್ಯ ಸರಕಾರದ ಹೊಸ ಮರಳು ನೀತಿಯಂತೆ ಗ್ರಾ.ಪಂ. ಮಟ್ಟದ ಹಾಗೂ ಇತರೆಡೆಗಳಲ್ಲಿ ಮರಳು ನಿರ್ವಹಣೆ ಕುರಿತಂತೆ ಜಿಲ್ಲಾ ಮಟ್ಟದಲ್ಲಿ ಆ. 4ರಂದು ಸಭೆ ಕರೆಯಲಾಗಿದೆ.
– ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾ ಉಸ್ತುವಾರಿ ಸಚಿವರು