Advertisement
ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ 22 ಕಡೆಗಳಲ್ಲಿ ಮರಳು ದಿಬ್ಬಗಳ ತೆರವಿಗೆ ಅವಕಾಶ ನೀಡಲಾಗಿದೆ. ಸುಮಾರು 80 ಮಂದಿಗೆ ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ. ಅವರಲ್ಲಿ ಕೇವಲ 8 ಮಂದಿ ಮರಳು ತೆರವು ಕಾರ್ಯದಲ್ಲಿ ತೊಡಗಿದ್ದು, ಮೇ 8ರಿಂದ 24ರ ವರೆಗೆ ಸುಮಾರು 1,785 ಮೆ. ಟನ್ ಮರಳು ತೆಗೆದು ವಿತರಿಸಲಾಗಿದೆ.
ತಾತ್ಕಾಲಿಕ ಪರವಾನಿಗೆದಾರರಿಗೆ ಕಾರ್ಮಿಕರ ಕೊರತೆ ಎದುರಾಗಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಅವರೆಲ್ಲರೂ ತವರಿಗೆ ತೆರಳಿರುವುದರಿಂದ 7 ದಕ್ಕೆಗಳಲ್ಲಿ ಮಾತ್ರ ಮರಳು ದಿಬ್ಬ ತೆರವು ಮಾಡಲಾಗುತ್ತಿದೆ. ಇದರಿಂದಾಗಿ ಜನರ ಬೇಡಿಕೆ ತಕ್ಕಂತೆ ಮರಳು ಪೂರೈಕೆಯಾಗುತ್ತಿಲ್ಲ. ಈ ಕಾರಣ ಇ-ಸ್ಯಾಂಡ್ ಬಜಾರ್‌ನಲ್ಲಿ ಮುಂದಿನ 10 ದಿನಗಳ ಬಳಿಕ ಮರಳು ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗುತ್ತದೆ. 4.33 ಲ. ಮೆ. ಟನ್ ಮರಳು ವಿತರಣೆ
2018-19ರಲ್ಲಿ ಸಿಆರ್‌ಝಡ್ ವ್ಯಾಪ್ತಿಯಲ್ಲಿ 1.12 ಲ. ಮೆ. ಟನ್ ಮತ್ತು ನಾನ್ ಸಿಆರ್‌ಝಡ್‌ನಲ್ಲಿ 9,830.78 ಮೆ. ಟನ್ ಸೇರಿದಂತೆ ಒಟ್ಟು 1.24 ಲ. ಮೆ. ಟನ್; 2019-20ರಲ್ಲಿ ಸಿಆರ್‌ಝಡ್‌ನಲ್ಲಿ 3.11 ಲ. ಮೆ. ಟನ್, ನಾನ್ ಸಿಆರ್‌ಝಡ್‌ನಲ್ಲಿ 1.71 ಲ. ಮೆ. ಟನ್ ಸೇರಿದಂತೆ ಒಟ್ಟು 4.33 ಲ. ಮೆ. ಟನ್ ಮರಳು ತೆಗೆಯಲಾಗಿದೆ.
Related Articles
ಮಳೆಗಾಲದಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವುದರಿಂದ ಕಾನೂನಿನ ಅನ್ವಯ ಜೂ. 1ರಿಂದ ಮರಳು ದಿಬ್ಬ ತೆರವು ಗೊಳಿಸುವ ಕಾರ್ಯ ಸ್ಥಗಿತಗೊಳ್ಳಲಿದೆ.
Advertisement
ಬೇಡಿಕೆ ಹೆಚ್ಚಿದೆ!ಕಾರ್ಮಿಕರ ಕೊರತೆ ಇರುವ ಕಾರಣ ಕೃತಕ ಮರಳಿನ ಅಭಾವ ಎದುರಾಗಿದೆ. ಉಡುಪಿ -ಸ್ಯಾಂಡ್ ಬಜಾರ್‌ನಲ್ಲಿ ಮರಳಿಗೆ ಭಾರೀ ಪ್ರಮಾಣದ ಬೇಡಿಕೆ ಇದೆ. ಮುಟ್ಟುಗೋಲು ಹಾಕಲಾದ ಮರಳು ಸಂಗ್ರಹವಿದೆ. ಅಗತ್ಯವಿದ್ದರೆ ಕೋರ್ಟ್ ನಿಂದ ಅನುಮತಿ ಪಡೆದು ವಿತರಿಸಲಾಗುತ್ತದೆ ಎಂದು ಗಣಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.